kim kardashian : ತಾನು ಎಲ್ಲರಿಗಿಂತ ಸುಂದರವಾಗಿ ಕಾಣಬೇಕು ಎಂಬ ಆಸೆ ಯಾವ ಹೆಣ್ಣಿಗೆ ತಾನೇ ಇರೋದಿಲ್ಲ ಹೇಳಿದೆ. ಇದೇ ರೀತಿ ಅಮೆರಿಕದ ಜನಪ್ರಿಯ ಮಾಡಲ್, ಸೆಲೆಬ್ರಿಟಿ ಕಿಮ್ ಕಾರ್ಡಶಿಯಾನ್ರ ಸೌಂದರ್ಯ ತನಗೂ ಬರಬೇಕು ಎಂಬ ಆಸೆಯಿಂದ ಕಾಸ್ಮೆಟಿಕ್ ಸರ್ಜರಿಗೆ ಒಳಗಾದ ವರ್ಸೆಸ್ನ ಮಾಡೆಲ್ ಜೆನ್ನಿಫರ್ ಪ್ಯಾಪ್ಲೋನಾಗೆ ಇದೀಗ ಸೌಂದರ್ಯಕ್ಕಿಂತ ವ್ಯಕ್ತಿತ್ವ ಮುಖ್ಯ ಎಂಬುದರ ಅರಿವಾಗಿದೆ. ಕಿಮ್ ಕಾರ್ಡಶಿಯಾನ್ರಂತೆ ಕಾಣಲು ಆರು ಲಕ್ಷ ಡಾಲರ್ ಹಣ ವ್ಯಯಿಸಿರುವ ಜೆನ್ನಿಫರ್ ಇದೀಗ ತನ್ನ ರೂಪವನ್ನು ಪಡೆಯೋದಕ್ಕೂ 1.20 ಲಕ್ಷ ಡಾಲರ್ ಖರ್ಚು ಮಾಡಬೇಕಿದೆ.

ಜೆನ್ನಿಫರ್ ಪ್ಯಾಪ್ಲೋನಾ ಬಾಲ್ಯದಿಂದಲೂ ಕಿಮ್ ಕಾರ್ಡಶಿಯಾನ್ರನ್ನು ಆರಾಧಿಸುತ್ತಾ ಬೆಳೆದವರು. 17 ವರ್ಷ ಪ್ರಾಯದವರಿದ್ದಾರೆ ನಾನೇಕೆ ಕಿಮ್ ಕಾರ್ಡಶಿಯಾನ್ರಂತೆ ನನ್ನ ರೂಪವನ್ನು ಬದಲಾಯಿಸಿಕೊಳ್ಳಬಾರದು ಎಂಬ ಆಸೆ ಈಕೆಯಲ್ಲಿ ಮೊಳಕೆಯೊಡೆದಿದೆ. ಹೀಗಾಗಿ ಆಕೆ ಹಿಂದೆ ಮುಂದೆ ಯೋಚನೆ ಮಾಡದೇ ಲಕ್ಷಾಂತರ ಹಣ ಖರ್ಚು ಮಾಡಿ ತನ್ನ ರೂಪವನ್ನು ಅಳಿಸಿ ಕಿಮ್ ಕಾರ್ಡಶಿಯಾನ್ರಂತೆ ಕಾಣಿಸಲು ಆರಂಭಿಸಿದಳು. ಒಂದಲ್ಲ ಎರಡಲ್ಲ ಬರೋಬ್ಬರಿ 40 ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾದ ಬಳಿಕ ಜೆನ್ನಿಫರ್ ಕಿಮ್ ಕಾರ್ಡಶಿಯಾನ್ರ ಅವಳಿ ಸಹೋದರಿಯೇನೋ ಎಂಬಂತೆ ಕಾಣಿಸಲು ಆರಂಭಿಸಿದಳು.

ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಜೆನ್ನಿಫರ್ಗೆ ತನಗೆ ಬೇಕಿದ್ದ ಪಬ್ಲಿಸಿಟಿ ಸಿಕ್ಕಿತು. ದೊಡ್ಡ ದೊಡ್ಡ ಸುದ್ದಿ ಮಾಧ್ಯಮಗಳು ಈಕೆಯ ಸಂದರ್ಶನ ಪಡೆದರು. ಸೋಶಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಸಂಖ್ಯೆ ಹೆಚ್ಚಾಯ್ತು. ಆದರೆ ಜೆನ್ನಿಫರ್ ಸ್ವಂತ ವ್ಯಕ್ತಿತ್ವ ಅನ್ನುವುದು ಇಲ್ಲವಾಗಿ ಹೋಯ್ತು. ಕೇವಲ ಈಕೆ ಕಿಮ್ ಕಾರ್ಡಶಿಯಾನ್ರ ತದ್ರೂಪಿ ಎನ್ನುವುದು ಬಿಟ್ಟರೆ ಜೆನ್ನಿಫರ್ ಎಂಬ ವ್ಯಕ್ತಿತ್ವವನ್ನೇ ಜನರು ಮರೆಯಲು ಆರಂಭಿಸಿದರು.

ನನಗೆ ಆರಂಭದಲ್ಲಿ ಎಲ್ಲವೂ ಖುಷಿ ಕೊಡ್ತು. ನಾನು ಶಸ್ತ್ರ ಚಿಕಿತ್ಸೆಗಳ ಮೇಲೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡೆ. ಇದರಿಂದ ಅನಾರೋಗ್ಯಕ್ಕೆ ತುತ್ತಾಗಿದೆ. ಆದರೆ ನನಗೀಗ ಈ ರೂಪ ಸಾಕು ಎನಿಸಿದೆ. ನನಗೆ ನನ್ನ ಸ್ವಂತ ಐಡೆಂಟಿಟಿ ಮುಖ್ಯ, ಹೀಗಾಗಿ ನಾನು ಪುನಃ ಲಕ್ಷಾಂತರ ಹಣ ವ್ಯಯಿಸಿ ಮೊದಲಿನಂತೆ ಆಗಲು ಹೊರಟಿದ್ದೇನೆ. ಶೀಘ್ರದಲ್ಲಿಯೇ ನಾನು ನಾನಾಗಿ ಮರು ಜನ್ಮ ಪಡೆಯಲಿದ್ದೇನೆ ಎಂದು ಜೆನ್ನಿಫರ್ ಹೇಳಿದ್ದಾರೆ.
ಇದನ್ನು ಓದಿ : ಸಿಎಂ ಕುರ್ಚಿಗೆ ಕಂಟಕವಾಗುತ್ತಾ ಮೀಸಲಾತಿ ಹೋರಾಟ : ಸಿಎಂ ಬಸವರಾಜ್ ಬೊಮ್ಮಾಯಿಗೆ ಎದುರಾಗ್ತಿದೆ ಡೆಡ್ ಲೈನ್ ಕಾಟ
ಇದನ್ನೂ ಓದಿ : Actor Sudeep ವಿರುದ್ಧ ಅವಹೇಳನಕಾರಿ ಮಾತು : ಸೈಬರ್ ಕ್ರೈಂ ಮತ್ತು ಆಯುಕ್ತರಿಗೆ ಭಾಮಾ ಹರೀಶ್ ದೂರು
woman spent 600k to be kim kardashian now paying 120k to detransition