School Reopen : ಸಪ್ಟೆಂಬರ್‌ 6 ರಿಂದ 6 – 8 ತರಗತಿಗಳು ಆರಂಭ

ಬೆಂಗಳೂರು : ರಾಜ್ಯದಲ್ಲಿ 6 ರಿಂದ 8ನೇ ತರಗತಿ ವರೆಗೆ ಶಾಲಾರಂಭ ಕುರಿತು ರಾಜ್ಯ ಸರಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಸಪ್ಟೆಂಬರ್‌ 6 ರಿಂದಲೇ ಕೊರೊನಾ ವೈರಸ್‌ ಸೋಂಕು ಶೇ.2 ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ 6 – 8ನೇ ತರಗತಿಗಳು ಆರಂಭವಾಗಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್‌ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕೋವಿಡ್‌ ತಾಂತ್ರಿಕ ಸಮಿತಿಯ ಸಭೆ ನಡೆಯಿತು. ಸಭೆಯಲ್ಲಿ ಶಾಲೆಗಳನ್ನು ಆರಂಭಿಸುವ ಕುರತು ಸುದೀರ್ಘ ಚರ್ಚೆ ಯನ್ನು ನಡೆಸಲಾಗಿದೆ. ಈಗಾಗಲೇ 9 ರಿಂದ 12ನೇ ತರಗತಿವರೆಗೆ ಶಾಲೆಗಳನ್ನು ಆರಂಭಿಸಲಾಗಿದೆ. ಶಾಲಾರಂಭದ ಬೆನ್ನಲ್ಲೇ ಸುಮಾರು ಏಳು ಸಾವಿರ ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್‌ ಮಾಡಿಸಲಾಗಿದೆ. ಈ ಪೈಕಿ ಕೇವಲ 14 ಮಕ್ಕಳಿಗೆ ಮಾತ್ರವೇ ಕೊರೊನಾ ಸೋಂಕು ದೃಢಪಟ್ಟಿದೆ ಎಂದಿದ್ದಾರೆ.

ಕೊರೊನಾ ವೈರಸ್‌ ಸೋಂಕು ಶೇ.2 ಕ್ಕಿಂತ ಕಡಿಮೆ ಇರುವ ತಾಲೂಕುಗಳಲ್ಲಿ ಮಾತ್ರವೇ 6 – 8ನೇ ತರಗತಿಗಳು ಆರಂಭವಾಗಲಿದೆ. ಒಂದು ತಿಂಗಳ ಕಾಲ ಪರಿಸ್ಥಿತಿಯನ್ನು ಅವಲೋಕಿಸಿದ ನಂತರದಲ್ಲಿ ಒಂದರಿಂದ ಐದನೇ ತರಗತಿವರೆಗಿನ ಶಾಲೆಗಳನ್ನು ತೆರೆಯುವ ಕುರಿತು ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಪಾಳಿ ಪದ್ದತಿಯಲ್ಲಿ ಶಾಲೆಗಳು ಆರಂಭವಾಗಲಿದೆ ಎಂದಿದ್ದಾರೆ.

ಇದನ್ನೂ ಓದಿ : Weekend Lockdown : ದ.ಕ, ಕೊಡಗು ಜಿಲ್ಲೆಯಲ್ಲಿ ಟಫ್‌ ರೂಲ್ಸ್‌ : ವೀಕೆಂಡ್‌ ಕರ್ಪ್ಯೂ ಮುಂದುವರಿಕೆ

ಇದನ್ನೂ ಓದಿ : ಕೇರಳದಿಂದ ಬಂದಿದ್ದ 15 ವಿದ್ಯಾರ್ಥಿಗಳಿಗೆ ಕೊರೊನಾ : ಕೋಲಾರದ ನರ್ಸಿಂಗ್‌ ಕಾಲೇಜಿನಲ್ಲಿ ಕೊರೊನಾ ರಣಕೇಕೆ

(6 to 8 class school Reopen Karnataka till September 6)

Comments are closed.