Attention Education Minister : ಶಿಕ್ಷಣ ಸಚಿವರೇ ಗಮನಿಸಿ: ರಾಜಧಾನಿ ಶಾಲೆಗೆ ಸಿಕ್ಕಿಲ್ಲ ಪಠ್ಯಪುಸ್ತಕ

ಬೆಂಗಳೂರು : (Attention Education Minister ) ಸದ್ಯ ರಾಜ್ಯದಲ್ಲಿ ಪಠ್ಯಕ್ರಮ ವಿವಾದ ಕೊಂಚ ತಣ್ಣಗಾಗಿದ್ದರೂ ಸಂಪೂರ್ಣವಾಗಿ ಕೊನೆಗೊಂಡಿಲ್ಲ. ಆದರೂ ಸರ್ಕಾರವೂ ತನ್ನ ಹಿಡಿತ ಬಿಡದೇ ಸಣ್ಣ ಪುಟ್ಟ ಕರೆಕ್ಷನ್ ಬಳಿಕ ಪಠ್ಯಕ್ರಮವನ್ನು ಅಂತಿಮಗೊಳಿಸಿ ಪಠ್ಯಪುಸ್ತಕ ಅಂತಿಮ ಎಂದು ಘೋಷಿಸಿ ಮುದ್ರಣಕ್ಕೆ ಕಳುಹಿಸಿ ಶಾಲೆಗಳಿಗೂ ತಲುಪಿಸಲಾಗುತ್ತಿದೆ ಎಂದೆಲ್ಲ ಘೋಷಿಸಿದೆ. ಆದರೆ ರಾಜ್ಯ ಸರ್ಕಾರ ರಾಜ್ಯದ ಮಕ್ಕಳಿಗೆ ಪಠ್ಯಪುಸ್ತಕ ತಲುಪಿಸಲಾಗುತ್ತಿದೆ ಎಂದು ಬೀಗುತ್ತಿದ್ದರೇ ರಾಜಧಾನಿ ಮಕ್ಕಳೇ ಓದಲು ಪಠ್ಯಪುಸ್ತಕವಿಲ್ಲದೇ ಪರದಾಡುತ್ತಿದ್ದಾರೆ.

ಹೌದು ರಾಜ್ಯದ ಎಲ್ಲ ಶಾಲೆಗಳಿಗೂ ಪಠ್ಯಪುಸ್ತಕ ತಲುಪಿಸಲಾಗಿದೆ ಎಂದು ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಎದೆಯುಬ್ಬಿಸಿ ಹೇಳುತ್ತಿದೆ. ಆದರೆ ಶಾಲಾ ಶೈಕ್ಷಣಿಕ ವರ್ಷ ಆರಂಭವಾಗಿ ಎರಡು ತಿಂಗಳು ಕಳೆದಿದ್ದರೂ ಬೆಂಗಳೂರಿನ ಬಿಬಿಎಂಪಿ ಸ್ಕೂಲ್ ಗಳಿಗೆ ಪಠ್ಯಪುಸ್ತಕ ಇನ್ನೂ ದೊರೆತಿಲ್ಲ. ಶಾಲಾ ಶಿಕ್ಷಕರು ಪರಿಷ್ಕೃತ ಪುಸ್ತಕ ದೊರೆಯದೇ ಪರದಾಡುತ್ತಿದ್ದು, ಮಕ್ಕಳಿಗೆ ಏನು ಪಾಠ ಮಾಡೋದು ಅನ್ನೋ ಚಿಂತೆಯಲ್ಲಿದ್ದಾರೆ. ಈ ವಿಚಾರವನ್ನು ಸ್ವತಃ ಬಿಬಿಎಂಪಿ ವಿಶೇಷ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.ಬಿಬಿಎಂಪಿ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಪಠ್ಯಪುಸ್ತಕವಿಲ್ಲದೇ ವಿಪರೀತ ಕಷ್ಟವಾಗುತ್ತಿದೆ. ಪರಿಷ್ಕೃತ ಪುಸ್ತಕಗಳು ಇನ್ನೂ ಶಾಲೆಗೆ ತಲುಪಿಲ್ಲ ಎಂದಿದ್ದಾರೆ.

ಬಿಬಿಎಂಪಿ ಶಾಲೆಯಲ್ಲಿ ಮಕ್ಕಳಿಗೆ ಪುಸ್ತಕ ಸಿಗುತ್ತಿಲ್ಲ ಎಂಬ ವಿಚಾರವನ್ನು ಪರಿಶೀಲಿಸಿದಾಗ ಹಲವು ಶಿಕ್ಷಕರು ಕೂಡ ಈ ವಿಚಾರವನ್ನು ಖಚಿತಪಡಿಸಿದ್ದು,‌ಮಕ್ಕಳಿಗೆ ಪಠ್ಯಗಳು ಬೋದನೆಯಾಗದೇ ಉಳಿಯಬಾರದು ಎಂಬ ಕಾರಣಕ್ಕೆ ಪಠ್ಯಪುಸ್ತಕ ಸೊಸೈಟಿಯಿಂದ ಪಾಠಗಳನ್ನು ಡೌನ್ ಲೋಡ್ ಮಾಡಿಕೊಂಡು ಬೋಧಿಸುತ್ತಿದ್ದೇವೆ ಎಂದು ಶಿಕ್ಷಕರು ಮಾಹಿತಿ ನೀಡಿದ್ದಾರೆ. ಇನ್ನು ಶಿಕ್ಷಣ ಸಚಿವರು ಈಗಾಗಲೇ ಹಲವು ಭಾರಿ ಅಗತ್ಯ ಪಠ್ಯಪುಸ್ತಕಗಳನ್ನು ಪೊರೈಸಲಾಗಿದೆ. ಯಾವುದೇ ಕಾರಣಕ್ಕೂ ಪರಿಷ್ಕೃತವಲ್ಲದ ಪಠ್ಯಪುಸ್ತಕ ಬೋದನೆ ಮಾಡುವಂತಿಲ್ಲ ಎನ್ನುತ್ತಿದ್ದಾರೆ.

ಅದರೆ ಶಿಕ್ಷಣ ಇಲಾಖೆ ಪಠ್ಯಪುಸ್ತಕ ಪೊರೈಕೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪುಸ್ತಕ ಪೊರೈಸಿಲ್ಲ. ಪರಿಷ್ಕರಣೆಗೊಂಡಿರುವ ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯಗಳು ಇನ್ನೂ ಶಾಲೆಗೆ ತಲುಪಿಲ್ಲ. ಆ ವಿಷಯದಲ್ಲಿ ಪಾಠಗಳೇ ನಡೆಯುತ್ತಿಲ್ಲ. ಪಠ್ಯಪುಸ್ತಕ ಇಲಾಖೆಗೆ ಬೇಗ ಪುಸ್ತಕ ಪೊರೈಸುವಂತೆ ಕೇಳಿದ್ದೇವೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಾಮ್ ಪ್ರಸಾತ್ ಮನೋಹರ್ ಹೇಳಿದ್ದಾರೆ. ಒಟ್ಟಿನಲ್ಲಿ ಸದ್ಯ ಪಠ್ಯಪುಸ್ತಕ ವಿವಾದ ಕೈಗೊಂಡಿದ್ದರೂ ಒಂದರ್ಥದಲ್ಲಿ ಇನ್ನೂ ನಡೆಯುತ್ತಲೇ ಇದ್ದು ಸರ್ಕಾರ ಶೈಕ್ಷಣಿಕ ವರ್ಷ ಕೊನೆಗೊಳ್ಳುವ ಮುನ್ನವಾದರೂ ಪುಸ್ತಕ ಪೊರೈಸುತ್ತಾ ಅನ್ನೋದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ : ನೀಟ್ ಪರೀಕ್ಷೆ ಮುಂದೂಡುವಂತೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ; ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿದೆ ‘ಚಲೋ ಮೋದಿ ಆವಾಸ್’ ಹ್ಯಾಶ್‌ಟ್ಯಾಗ್‌

ಇದನ್ನೂ ಓದಿ : Coastal Heavy Rain : ಉಡುಪಿ ಜಿಲ್ಲೆಯಲ್ಲಿ ರೆಡ್‌ ಅಲರ್ಟ್‌ ಘೋಷಣೆ : ಭಾರೀ ಮಳೆ ಹಿನ್ನೆಲೆ ನಾಳೆ ಶಾಲೆ, ಕಾಲೇಜಿಗೆ ರಜೆ

Attention Education Minister: The capital school has not received the textbook

Comments are closed.