ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ : ಜನವರಿ 22 ರಂದು ಕರ್ನಾಟಕದ ಶಾಲೆಗಳಿಗೆ ರಜೆ ವಿಚಾರ : ಶಿಕ್ಷಣ ಸಚಿವರ ಮಹತ್ವದ ಹೇಳಿಕೆ

Ayodhya Ram Mandir Prana Pratistha School holiday : ಅಯೋಧ್ಯೆ ರಾಮಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ಶಾಲೆಗಳಿಗೆ ರಜೆ ನೀಡುವಂತೆ ಪ್ರತಿಪಕ್ಷ ಬಿಜೆಪಿ ಆಗ್ರಹಿಸುತ್ತಿದೆ. ಈ ನಡುವಲ್ಲೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.

Ayodhya Ram Mandir Prana Pratistha School holiday : ಅಯೋಧ್ಯೆ ರಾಮಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ಶಾಲೆಗಳಿಗೆ ರಜೆ ನೀಡುವಂತೆ ಪ್ರತಿಪಕ್ಷ ಬಿಜೆಪಿ ಆಗ್ರಹಿಸುತ್ತಿದೆ. ಈ ನಡುವಲ್ಲೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿ ಸಚಿವ ಮಧು ಬಂಗಾರಪ್ಪ, ರಾಮ ವಿಚಾರದಲ್ಲಿ ವಿವಾದ ಸೃಷ್ಟಿಸಲು ನಾನು ಸಿದ್ದನಿಲ್ಲ ಎಂದಿದ್ದಾರೆ.

Ayodhya Ram Mandir Prana Pratistha School holiday in Karnataka on January 22 Important statement by Education Minister
Image Credit to Original Source

ರಾಮನ ನಡವಳಿಕೆಯನ್ನು ಬಲ್ಲ ರಾಮಭಕ್ತ ನಾನು. ಆದರೆ ಬಿಜೆಪಿ ರಾಮನನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ. ಶ್ರೀರಾಮನ ವಿಚಾರದಲ್ಲಿ ರಾಜಕೀಯ ಮಾಡಲು ನಮಗೆ ಬುದ್ಧಿ ಕೊಟ್ಟಿಲ್ಲ ಎಂದು ಬಿಜೆಪಿ ವಿರುದ್ದ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮಮಂದಿರ ಲೋಕಾರ್ಪಣೆಯ ದಿನದಂದು ಶಾಲೆ, ಕಾಲೇಜುಗಳಿಗೆ ರಜೆ ನೀಡುವ ನಿರ್ಧಾರವನ್ನು ಸಿಎಂ ಸಿದ್ದರಾಮಯ್ಯ ಅವರು ಕೈಗೊಳ್ಳಲಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಆದೇಶ ನೀಡಿದ್ರೆ ಅದನ್ನು ನಾವು ಜಾರಿಗೊಳಿಸುವುದು ಸಚಿವರಾಗಿ ನಮ್ಮ ಕೆಲಸ. ವಿನಾಕಾರಣ ಇದನ್ನು ವಿವಾದ ಮಾಡಲು ನನಗೆ ಇಷ್ಟವಿಲ್ಲ ಎಂದಿದ್ದಾರೆ. ಜೀವನದಲ್ಲಿ ಶ್ರೀರಾಮನನ್ನು ಅನುಸರಿಸುತ್ತೇವೆ, ತಂದೆ ತಾಯಿಯನ್ನು ಹೆಚ್ಚು ಪ್ರೀತಿಸಿದ ರಾಮ ನಮ್ಮ ಆದರ್ಶ. ಮುಂದೊಂದು ದಿನ ಒಟ್ಟಿಗೆ ಅಯೋಧ್ಯೆಗೆ ಹೋಗೋಣವೇ ಎಂದಿದ್ದಾರೆ.

Ayodhya Ram Mandir Prana Pratistha School holiday in Karnataka on January 22 Important statement by Education Minister
Image Credit to Original Source

ಇದನ್ನೂ ಓದಿ : ಅಯೋಧ್ಯೆಯ ರಾಮಮಂದಿರ ಹೇಗಿದೆ : ಆಹ್ವಾನ ಪತ್ರಿಕೆಯಲ್ಲೇ ಇದೆ ಭವ್ಯಮಂದಿರದ ಚಿತ್ರಣ

ಈ ನಡುವಲ್ಲೇ ರಾಮಮಂದಿರ ಉದ್ಘಾಟನೆಯ ಹಿನ್ನೆಲೆಯಲ್ಲಿ ಜ.22ರಂದು ದಾವಣಗೆರೆ ಜಿಲ್ಲೆಯಲ್ಲಿ ರಜೆ ನೀಡುವಂತೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮಂತ್ರಾಕ್ಷತೆ ನೀಡಿ, ಜಿಲ್ಲೆಯಾದ್ಯಂತ ಮಾಂಸ ಮಾರಾಟ ನಿಷೇಧಿಸಲು ಒಂದು ದಿನ ಸರ್ಕಾರಿ ರಜೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ : ರಾಮಮಂದಿರ ಲೋಕಾರ್ಪಣೆ : ಜನವರಿ 22 ರಂದು ರಜೆ ಘೋಷಿಸಿದ ಕೇಂದ್ರ ಸರಕಾರ

ಇನ್ನು ಮಂಡ್ಯದಲ್ಲೂ ಜ.22ರಂದು ಸರ್ಕಾರಿ ರಜೆ ಘೋಷಿಸುವಂತೆ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದು, ಮಾಂಸ, ಮದ್ಯದಂಗಡಿ ನಿಷೇಧಿಸುವಂತೆ ಮನವಿ ಮಾಡಿದ್ದಾರೆ. ರಾಮಮಂದಿರ ಉದ್ಘಾಟನೆ ದಿನದಂದು ರಜೆ ನೀಡಬೇಕು ಎಂಬ ವಿಪಕ್ಷಗಳ ಒತ್ತಾಯಕ್ಕೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅದರ ಬಗ್ಗೆ ನನಗೆ ಗೊತ್ತಿಲ್ಲ. ಆ ಪತ್ರ ನನಗೆ ಬಂದಿಲ್ಲ. ನೋಡೋಣಾ ಎಂದು ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರೀಯೆ ನೀಡಿದ್ದಾರೆ.

ಇದನ್ನೂ ಓದಿ : ಅಯೋಧ್ಯೆಯಲ್ಲಿ ಕರ್ನಾಟಕ ಭವನ : ಯಾತ್ರಿಕರಿಗೊಂದು ಸಿಹಿಸುದ್ದಿ

Ayodhya Ram Mandir Prana Pratistha, School holiday in Karnataka on January 22 : Important statement by Education Minister

Comments are closed.