B. C. Nagesh : ಶಾಲೆಗಳ ಹತ್ತು ನಿಮಿಷ ಧ್ಯಾನ : ಖ್ಯಾತ ಮನೋವೈದ್ಯ ಡಾ ಪಿ.ವಿ ಭಂಡಾರಿ ಆಕ್ಷೇಪ

ಉಡುಪಿ : ವಿದ್ಯಾರ್ಥಿಗಳು ಪ್ರತಿ ದಿನ ಶಾಲೆಯಲ್ಲಿ 10 ನಿಮಿಷ ಧ್ಯಾನ ನಡೆಸಲು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ (B. C. Nagesh)ಅವರು ಸೂಚನೆ ನೀಡಿದ್ದಾರೆ. ಶಾಲೆಗಳಲ್ಲಿ ಧ್ಯಾನ ನಡೆಸುವುದಕ್ಕೆ ಈಗಾಗಲೇ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಡುವಲ್ಲೇ ಉಡುಪಿಯ ಖ್ಯಾತ ಮನೋ ವೈದ್ಯ ಡಾ.ಪಿ.ವಿ. ಭಂಡಾರಿ(Dr. PV Bhandari) ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಮೋಹವನ್ನು ಕಡಿಮೆ ಮಾಡುವುದರ ಜೊತೆಗೆ ಏಕಾಗ್ರತೆಯನ್ನು ಹೆಚ್ಚಿಸಿ, ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಧ್ಯಾನ ಮಾಡಬೇಕು ಎಂದು ಬಿ.ಸಿ.ನಾಗೇಶ್ (B. C. Nagesh)ಆದೇಶಿಸಿದ್ದಾರೆ. ಸಚಿವ ನಿರ್ಧಾರದ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೀಗ ಉಡುಪಿಯ ಖ್ಯಾತ ಮನೋ ವೈದ್ಯರಾದ ಡಾ.ಪಿ.ವಿ.ಭಂಡಾರಿ (Dr. PV Bhandari)ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಸರಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ವೈಜ್ಞಾನಿಕ ಆಧಾರ ಇರಬೇಕು. ಮೊಬೈಲ್‌ ಚಟದಿಂದ ಮಕ್ಕಳ ಏಕಾಗ್ರತೆ ಕಡಿಮೆಯಾಗಿದೆ. ಹಿಂದಿನ ವರ್ಷ ಶಾಲೆಗಳನ್ನು ಬಹಳಷ್ಟು ದಿನ ಮುಚ್ಚಿಟ್ಟ ಪರಿಣಾಮವಾಗಿ ಮಕ್ಕಳಲ್ಲಿ ಮೊಬೈಲ್‌ ಚಟ ಹೆಚ್ಚಾಗಿರುತ್ತದೆ. ಶಾಲೆ ತೆಗೆಯಿರಿ ಎಂದು ಯುನಿಸೆಫ್‌ ಹೇಳಿದಾಗಲೂ ಶಾಲೆ ಮುಚ್ಚಿದ್ದರು.ವಿದ್ಯಾರ್ಥಿಗಳ ಮೊಬೈಲ್‌ ಗೀಳಿಗೆ ಆನ್ಲೈನ್‌ ಶಿಕ್ಷಣವೇ ಕಾರಣ ಎಂದಿದ್ದಾರೆ.

ಮಕ್ಕಳಿಗೆ ಅಗತ್ಯವಿರುವುದು ಸರಿಯಾದ ಕೌನ್ಸಿಲಿಂಗ್‌ ಹೊರತು ಧ್ಯಾನವಲ್ಲ. ಶಾಲೆಗಳಲ್ಲಿ ಕೌನ್ಸಿಲರ್‌ ಗಳನ್ನು ನೇಮಕ ಮಾಡಿಕೊಳ್ಳಬೇಕು. ಮಕ್ಕಳ ಸಮಸ್ಯೆಗಳಿಗೆ ಕೌನ್ಸಿಲಿಂಗ್‌ ಮೂಲಕ ಪರಿಹಾರ ಸಿಗುತ್ತದೆ. ಶಿಕ್ಷಣದ ಮಾರ್ಗ ಸೂಚಿಗಳಲ್ಲಿ ಧ್ಯಾನ ಮಾಡಬೇಕೆಂದು ಎಲ್ಲೂ ಸೂಚಿಸಿಲ್ಲ. ಶಿಕ್ಷಣ ಸಚಿವರು ತಮ್ಮ ಜವಾಬ್ದಾರಿಯಿಂದ ನುಣಚಿಕೊಳ್ಳಲು ಧ್ಯಾನ ಮಾಡಲು ಸೂಚಿಸಿದ್ದಾರೆ. ಸಚಿವರು ಮತ್ತು ಸರಕಾರ ಜವಾಬ್ದಾರಿ ಮರೆಯುತ್ತಿದೆ ಎಂದು ಡಾ.ಪಿ.ವಿ.ಭಂಡಾರಿ ಹೇಳಿದ್ದಾರೆ.

ಮಕ್ಕಳು ಮೊಬೈಲ್‌ಗೆ ಯಾಕೆ ಬಲಿಯಾಗುತ್ತಿದ್ದಾರೆ ಎಂದು ಮೊದಲು ಗಮನಿಸಬೇಕು. ಆ ಕುರಿತು ಮನೋರೋಗ ತಜ್ಞರು ಮನೋವೈದ್ಯಕೀಯ ಸಂಘಗಳು ಅನೇಕ ಬಾರಿ ಸೂಚನೆಯನ್ನು ನೀಡಿದ್ದಾರೆ. ಯಾವುದೇ ಮನೋರೋಗ ತಜ್ಞರನ್ನು ಕೇಳಿ ಈ ನಿರ್ಧಾರ ಮಾಡಿಲ್ಲ. ವೈಜ್ಞಾನಿಕ ಆಧಾರವಿಲ್ಲದೆ ಸರಕಾರ ಈ ರೀತಿ ನಿರ್ಧಾರ ಕೈಗೊಳ್ಳುತ್ತಿದೆ. ಹತ್ತು ನಿಮಿಷದ ಧ್ಯಾನದಿಂದ ಸಮಸ್ಯೆ ಬಗೆ ಹರಿಯುತ್ತದೆಯೇ ? ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ಗೆ ಮನೋವೈದ್ಯ ಡಾ.ಪಿ.ವಿ.ಭಂಡಾರಿ (Dr. PV Bhandari)ಪ್ರಶ್ನಿಸಿದ್ದಾರೆ.

ಸುಮ್ಮನೆ ನಿರ್ಧಾರಗಳನ್ನು ಕೈಗೊಳ್ಳಬೇಡಿ, ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ನಿರ್ಧಾರಗಳಿಗೆ ವೈಜ್ಞಾನಿಕ ತಳಹದಿ ಇರಬೇಕು. ಈ ಹಿಂದೆ ಮೊಟ್ಟೆಯನ್ನು ಕೊಡುವ ವಿಚಾರದಲ್ಲೂ ನಾವು ಸರಕಾರಕ್ಕೆ ಪತ್ರ ಬರೆದಿರುತ್ತೇವೆ. ದೇಶಾದ್ಯಂತ ತಜ್ಞರು ಮೊಟ್ಟೆ ನೀಡಬೇಕು ಎಂದು ಹೇಳುತ್ತಿದ್ದರು. ಆದರೆ ತಜ್ಞರ ಅಭಿಪ್ರಾಯ ಪಡೆಯದೆ ಕೇವಲ ಸಸ್ಯಹಾರಿ ಆಹಾರ ಮಾತ್ರ ಮಕ್ಕಳಿಗೆ ಯೋಗ್ಯ ಎಂದು ಸರಕಾರ ಹೇಳಿತ್ತು . ಹತ್ತು ನಿಮಿಷ ಧ್ಯಾನದಿಂದ ಮಕ್ಕಳ ಒತ್ತಡ ಕಡಿಮೆ ಆಗುವುದಿದ್ದರೆ ಮಾಡಿ. ನಾನು ವಿರೋಧ ಮಾಡುತ್ತೀರುವುದು ರಾಜಕೀಯ ಕಾರಣಗಳಿಗೆ ಅಲ್ಲ. ಈ ಹಿಂದೆ ಸರಕಾರಗಳು ಇದ್ದಾಗ ಕೂಡ ಜನರ ಆರೋಗ್ಯ ಹಾಗೂ ಮಕ್ಕಳ ಶಿಕ್ಷಣದ ವಿಚಾರದಲ್ಲಿ ತಪ್ಪು ನಿರ್ಧಾರ ತೆಗೆದುಕೊಂಡಾಗ ಸಹ ಟೀಕಿಸಿರುತ್ತೇನೆ. ಧ್ಯಾನಕ್ಕೆ ಸೂಚಿಸುವುದರ ಬದಲಾಗಿ ಮಕ್ಕಳಲ್ಲಿ ಮಾನಸಿಕ ಸಮಸ್ಯೆ ಕಡಿಮೆ ಮಾಡಲು ಆಟೋಟಗಳನ್ನು ವ್ಯವಸ್ಥೆ ಮಾಡಿ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ : School Close : ನಾಳೆಯಿಂದ ಪ್ರಾಥಮಿಕ ಶಾಲೆಗಳು ಬಂದ್‌

ಇದನ್ನೂ ಓದಿ : Meditation: ಪ್ರತಿದಿನ ವಿದ್ಯಾರ್ಥಿಗಳಿಂದ ಕಡ್ಡಾಯವಾಗಿ 10 ನಿಮಿಷ ಧ್ಯಾನ ಮಾಡಿಸಲು ಅಗತ್ಯ ಕ್ರಮ ಕೈಗೊಳ್ಳಿ: ಸಚಿವ ಬಿ.ಸಿ.ನಾಗೇಶ್

ಪಿಯುಸಿ ಕಾಲೇಜಿನಲ್ಲಿ ಆಟೋಟಕ್ಕೆ ಯಾವುದೇ ಪ್ರೋತ್ಸಾಹ ಇರುವುದಿಲ್ಲ. ದಿನವಿಡೀ ಶಿಕ್ಷಣದಲ್ಲೇ ವಿದ್ಯಾರ್ಥಿಗಳು ಮುಳುಗಿರುತ್ತಾರೆ. ಸಂಜೆಯ ವೇಳೆ ಪಿಯುಸಿ ಮಕ್ಕಳಿಗೆ ಸಿಇಟಿ, ನೀಟ್‌ ತರಗತಿಯ ಒತ್ತಡಗಳಿರುತ್ತದೆ. ಮಕ್ಕಳಿಗೆ ಮಾನಸಿಕ ಒತ್ತಡ ನೀಡದಂತೆ ಶಿಕ್ಷಣ ರೂಪಿಸುವುದಕ್ಕೆ ಸರಕಾರ ಬೇಕಾಗಿರುವುದಿಲ್ಲ. ಒಂದು ವೇಳೆ ಶಿಕ್ಷಕರೇ ಧ್ಯಾನ ನಡೆಸಲು ಸೂಚಿಸಿದ್ದರೆ ನಾನು ಸ್ವಾಗತಿಸುತ್ತೇನೆ. ನಾನಂತೂ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ವಿರೋಧ ವ್ಯಕ್ತಪಡಿಸುತ್ತಿಲ್ಲ. ಸರಕಾರ ನಿರ್ಧಾರಗಳು ಮತ್ತು ಅದನ್ನು ವಿರೋಧಿಸುವವರಿಗೆ ಏನಾದರೂ ಅಜೆಂಡಾ ಇರುತ್ತದೆ. ಯಾರಿಗೂ ಜನರ ಅಥವಾ ಮಕ್ಕಳ ಹಿತಾಸಕ್ತಿ ಬೇಕಾಗಿಲ್ಲ ಎಂದಿದ್ದಾರೆ.

B. C. Nagesh Ten Minute Meditation in Schools: Famous Psychiatrist Dr. PV Bhandari Objection

Comments are closed.