Delhi Pollution:ದೆಹಲಿಯಲ್ಲಿ ಹೆಚ್ಚಿದ ಮಾಲಿನ್ಯ : ವಾಹನ ಸಂಚಾರ ನಿಷೇಧ, ತಪ್ಪಿದ್ರೆ 20,000 ರೂ. ದಂಡ

ನವದೆಹಲಿ:(Delhi Pollution) ಅತಿಯಾಗಿ ಹವಾಮಾನ ಹದಗೆಡುತ್ತಿದ್ದು,ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ದೆಹಲಿ ಸರಕಾರ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿದೆ. ಒಂದೊಮ್ಮೆ ರೂಲ್ಸ್ ಬ್ರೇಕ್ ಮಾಡಿ ವಾಹನಗಳನ್ನು ರಸ್ತೆ ಇಳಿಸಿದ್ರೆ 20,000 ರೂಪಾಯಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ರಾಷ್ಟ್ರ ರಾಜಧಾನಿಯಲ್ಲಿ ಹವಾಮಾನ ಹದಗೆಡುತ್ತಿದೆ. ಗಾಳಿಯ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ವಾಯು ಗುಣಮಟ್ಟ ನಿರ್ವಹಣಾ ಆಯೋಗ(CAQM) ವಾಹನ ನಿಷೇಧಕ್ಕೆ ಶಿಫಾರಸ್ಸು ಮಾಡಿದೆ. ವಾಹನ ನಿಷೇಧ ನಿಯಮ ಉಲ್ಲಂಘನೆ ಮಾಡುವವರಿಗೆ ಮೋಟಾರು ವಾಹನ ಕಾಯ್ದೆಯ ಅಡಿಯಲ್ಲಿ 20,000 ರೂಪಾಯಿ ದಂಡ ವಿಧಿಸಲಾಗುತ್ತದೆ.ಅಗತ್ಯ ಸೇವೆಗಳನ್ನು ಒದಗಿಸುವ ವಾಹನ, ಸರಕುಗಳನ್ನು ಸಾಗಿಸುವ ವಾಹನಗಳು ಯಾವುದೇ ಡಿಸೇಲ್‌ ಗಾಡಿಗಳು ದೆಹಲಿಗೆ ಪ್ರವೇಶಿಸುವಂತಿಲ್ಲ. ಆದರೆ ಸಿ ಎನ್‌ ಜಿ ಮತ್ತು ಎಲೆಕ್ಟ್ರಿಕಲ್‌ ಟ್ರಕ್ ಗಳಿಗೆ ಮಾತ್ರ ದೆಹಲಿಯನ್ನು ಪ್ರವೇಶಿಸುವುದಕ್ಕೆ ಅನುಮತಿಸಲಾಗಿದೆ.

ದೆಹಲಿಯ ವಾಯು ಗುಣಮಟ್ಟವು ತೀವ್ರವಾಗಿ ಹದಗೆಡುತ್ತಿದೆ. ಕೃಷಿ ಬೆಂಕಿಯಿಂದಾಗಿ ಶೇಕಡಾ 30 ರಷ್ಟು ವಾಯುಮಾಲಿನ್ಯ ಹೆಚ್ಚಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಸಚಿವಾಲಯ ಅಡಿಯಲ್ಲಿ ಮುನ್ಸೂಚಕ ಎಜೆನ್ಸಿಯಾದ SAFAR ಮಾಹಿತಿಯನ್ನು ನೀಡಿದೆ. ಹಾಗಾಗಿ ದೆಹಲಿಯಲ್ಲಿ ವಾಹನ ಸಂಚಾರದ ನಿಷೇದವನ್ನು ಹೆರಲಾಗಿದೆ ಮತ್ತು 50 ರಷ್ಟು ಸಿಬ್ಬಂದಿಗಳಿಗೆ ಮನೆಯಲ್ಲೇ ಕೆಲಸ ಮಾಡುವಂತೆ ಆದೇಶವನ್ನು ಹೊರಡಿಸಲಾಗಿದೆ. EURO 6/IV ವಾಹನಗಳನ್ನು ಹೊರತುಪಡಿಸಿ ಎಲ್ಲಾ ವಾಹನಗಳ ಸಂಚಾರಕ್ಕೆ ನಿರ್ಬಂಧವನ್ನು ಹೆರಲಾಗಿದೆ.

ಇದನ್ನೂ ಓದಿ:Student’s mysterious death : ತರಗತಿಯಲ್ಲಿ ವಿದ್ಯಾರ್ಥಿನಿ ನಿಗೂಢ ಸಾವು

ಇದನ್ನೂ ಓದಿ:Red Moon During Lunar Eclipse : ಚಂದ್ರ ಗ್ರಹಣದ ಸಂದರ್ಭದಲ್ಲಿ ಚಂದ್ರ ಕೆಂಪಾಗುವುದೇಕೆ? ಇದರ ಹಿಂದಿರುವ ಕಾರಣ ಹೇಳಿದ ನಾಸಾ

ದೆಹಲಿ ಸಾರಿಗೆ ಇಲಾಖೆ ಹೊರಡಿಸಿದ ಆದೇಶದಲ್ಲಿ BS-III ಪೆಟ್ರೋಲ್ ಮತ್ತು BS-IV ಡೀಸೆಲ್‌ ಲೈಟ್‌ ಮೋಟಾರು ವಾಹನಗಳನ್ನು ದೆಹಲಿಯ NCT ಯ ವ್ಯಾಪ್ತಿಯ ಪ್ರದೇಶಗಳಲ್ಲಿ ಸಂಚರಿಸುವುದಕ್ಕೆ ನಿಷೇಧ ಹೆರಲಾಗಿದೆ. ಈ ನಿರ್ಬಂಧಗಳನ್ನು ಉಲ್ಲಂಘಿಸಿದರೆ ಮೋಟಾರು ವಾಹನ ಕಾಯ್ದೆಯ ಅಡಿಯಲ್ಲಿ 20,000 ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ. ಪ್ರಯಾಣಿಕರ ಅನೂಕೂಲಕ್ಕಾಗಿ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಹೆಚ್ಚಿಸಲಾಗಿದೆ. ಸಾರಿಗೆ ಇಲಾಖೆಯು 60 ದಿನಗಳವರೆಗೆ DTC ಮೂಲಕ 1000 ಖಾಸಗಿ CNG ಕಾಂಟ್ರಾಕ್ಟ ಕ್ಯಾರೇಜ್‌ ಬಸ್ ಗಳನ್ನು ಬಾಡಿಗೆಗೆ ಪಡೆಯಲಿದೆ ಎಂದು ತಿಳಿಸಿದೆ. ಮೊದಲ ಹಂತದಲ್ಲಿ 500 ಬಸ್‌ ಗಳನ್ನು ಬಾಡಿಗೆಗೆ ಪಡೆಯಲಾಗುವುದು ನಂತರ ಇನ್ನಷ್ಟು ಬಸ್‌ ಗಳನ್ನು ಖರೀದಿಸಲಾಗುತ್ತದೆ ಎಂದು ಸಾರಿಗೆ ಇಲಾಖೆ ಮಾಹಿತಿಯನ್ನು ನೀಡಿದೆ. ವಾಯು ಗುಣಮಟ್ಟ ನಿರ್ವಹಣೆಗೆ ಆಯೋಗ ಮುಂದಿನ ಆದೇಶದವರೆಗೆ ಈ ಯೋಜನೆ ಜಾರಿಯಲ್ಲಿರುತ್ತದೆ.

Increased pollution in Delhi: Vehicular traffic ban, Rs 20,000 for violation. penalty

Comments are closed.