ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ : ರಾಜ್ಯಮಟ್ಟಕ್ಕೆ ಆಯ್ಕೆ- ಮೈಸೂರು ವಿಭಾಗ ಮಟ್ಟದಲ್ಲಿ ದ್ವಿತೀಯ

ಶ್ರೀ ವಿಧ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ, ಬಾರಕೂರು ನ ವಿದ್ಯಾರ್ಥಿಗಳು ಮೈಸೂರು ವಿಭಾಗ ಮಟ್ಟದ14 ವಯೋಮಾನದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಕೊಡಗು ಜಿಲ್ಲೆ, ಚಿಕ್ಕಮಂಗಳೂರು ಜಿಲ್ಲೆಯನ್ನು ಸೋಲಿಸಿ, ಫೈನಲ್ ಪಂದ್ಯಾಟವನ್ನು ಬಲಿಷ್ಠ ತಂಡ ವಾದಂತಹ ಮಂಡ್ಯ ಜಿಲ್ಲೆಯೊಂದಿಗೆ ಪಂದ್ಯಾಟ ವಾಡಿ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ, ಉಪ ನಿರ್ದೇಶಕರ ಕಛೇರಿ, ಚಾಮರಾಜನಗರ. ಮತ್ತು ಜೆ.ಎಸ್.ಎಸ್. ಶಿಕ್ಷಣ ಸಂಸ್ಥೆ, ಚಾಮರಾಜನಗರ. ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ 14 ವಯೋಮಾನದ ಬಾಲಕರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಉಡುಪಿ ಜಿಲ್ಲೆಯ ಶ್ರೀ ವಿಧ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ -ಬಾರಕೂರು (Shree Vidyesh Vidya Manya National English Medium School) (Heradi-Barakuru) ನ ಬಾಲಕರು ಮೈಸೂರು ವಿಭಾಗ ಮಟ್ಟದಲ್ಲಿ ದ್ವಿತೀಯ ಬಹುಮಾನವನ್ನು ಪಡೆದು, ಇಬ್ಬರು ವಿದ್ಯಾರ್ಥಿಗಳು ರಾಜ್ಯಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.

ಶ್ರೀ ವಿಧ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ, ಬಾರಕೂರು ನ ವಿದ್ಯಾರ್ಥಿಗಳು ಮೈಸೂರು ವಿಭಾಗ ಮಟ್ಟದ14 ವಯೋಮಾನದ ಬಾಲ್ ಬ್ಯಾಡ್ಮಿಂಟನ್ (Ball Badminton) ಪಂದ್ಯಾಟದಲ್ಲಿ ಕೊಡಗು ಜಿಲ್ಲೆ, ಚಿಕ್ಕಮಂಗಳೂರು ಜಿಲ್ಲೆಯನ್ನು ಸೋಲಿಸಿ, ಫೈನಲ್ ಪಂದ್ಯಾಟವನ್ನು ಬಲಿಷ್ಠ ತಂಡ ವಾದಂತಹ ಮಂಡ್ಯ ಜಿಲ್ಲೆಯೊಂದಿಗೆ ಪಂದ್ಯಾಟ ವಾಡಿ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿದೆ.

Ball Badminton tournament select for state level
Image Credit To Nagendra Achar

ಇದನ್ನೂ ಓದಿ :  5,8,9ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ : ರಾಜ್ಯ ಸರಕಾರದಿಂದ ಅಧಿಸೂಚನೆ ಪ್ರಕಟ

ಶಾಲೆಯ ಅಜಯ್ ಮತ್ತು ಲಾಕ್ಷೀನ್ ಇಬ್ಬರು ವಿದ್ಯಾರ್ಥಿಗಳು ಹಾಸನದಲ್ಲಿ ನಡೆಯುವ ರಾಜ್ಯಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ. ತಂಡಲ್ಲಿ ನಾಯಕ ಅಜಯ್, ಅಜೇಶ್, ಲಾಕ್ಷೀನ್, ಪ್ರತ್ವಿಕ್, ಮನ್ವಿತ್,ಪ್ರಥ್ವಿಶ್, ಮದನ್,ಆರ್ಯನ್ ವಿ. ಕೆ. ಶ್ರೇಯಸ್, ಆರ್ಯನ್, ಚೇತನ್ ಇದ್ದಿದ್ದರು.

ಇದನ್ನೂ ಓದಿ : CBSE 10 12 ನೇ ತರಗತಿ ಪರೀಕ್ಷೆ 2024: ನವೀಕರಿಸಿದ ವೇಳಾಪಟ್ಟಿ

14ರ ವಯೋ ಮಾನದಲ್ಲಿ ಮೈಸೂರ್ ವಿಭಾಗ (Mysuru Division) ಮಟ್ಟದ ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ದಲ್ಲಿ ಶ್ರೀ ವಿಧ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ -ಬಾರಕೂರು ನ ತಂಡ ವು ಗಳು ಚಿಕ್ಕಮಂಗಳೂರು ಜಿಲ್ಲೆ ಯ ತಂಡ ದೊಂದಿಗೆ ಪಂದ್ಯಾಟ ವಾಡಿ ಪರಭವ ಗೊಂಡಿತ್ತು.ತಂಡಲ್ಲಿ ನಾಯಕಿ ಶರಣ್ಯ,ತನುಶ್ರೀ ಅಶ್ವಿತಾ, ಸ್ವಪ್ನ, ಪೂರ್ವಿ,ವರ್ಷ ಯಕ್ಷಿತಾ, ಸಾನ್ವಿ, ಮಾನ್ವಿ, ಶ್ರೇಯ ಇದದ್ದಿದ್ದರು.

Ball Badminton tournament select for state level
Image Credit To Original Source

ಇದನ್ನೂ ಓದಿ : ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿಗೆ ವರ್ಷದಲ್ಲಿ 3 ಬಾರಿ ಪರೀಕ್ಷೆ : ಸಚಿವ ಮಧು ಬಂಗಾರಪ್ಪ ಮಹತ್ವದ ಘೋಷಣೆ

17 ವಯೋಮನದ ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ನಲ್ಲಿ ಮೈಸೂರು ವಿಭಾಗ ಮಟ್ಟಕ್ಕೆ ಶಾಲೆ ಯಿಂದ ಖುಷಿ, ಪೂಜಾ, ಅನಿಷಾ ಆಯ್ಕೆ ಯಾಗಿದ್ದರು.
ಧೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಸುರೇಶ ಶೆಟ್ಟಿ ಮತ್ತು ಶ್ರೀಮತಿ ಜ್ಯೋತಿ ತರಭೇತಿ ನೀಡಿದರು, ತಂಡದ ಮೇಲ್ವಿಚಾರಕರಾಗಿ ಶಿಕ್ಷಕ ಶ್ರೀ ನಾಗೇಂದ್ರ ಆಚಾರ್ ಮತ್ತು ಶಿಕ್ಷಕಿ ಶ್ರೀಮತಿ ಚಂದ್ರ ಕಲಾ ಮತ್ತು ಶಾಲಾ ಸಿಬ್ಬಂದಿ ಶ್ರೀಕಾಂತ್ ಮತ್ತು ಸುಧೀರ್ ಜೊತೆಗೆ ಇದ್ದಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಲಿಖಿತಾ ಕೊಠಾರಿ, ಶಾಲಾ ಸಂಚಾಲಕರು, ಬಾರಕೂರು ವಿದ್ಯಾಭಿವರ್ದಿನಿ ಸಂಘ(ರಿ ) ಬಾರಕೂರು ಇದರ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸದಸ್ಯರು ಮತ್ತು ಶಾಲೆಯ ಶಿಕ್ಷಕರು ಮತ್ತು ಶಿಕ್ಷಕೇತರರು, ಹಳೆ ವಿದ್ಯಾರ್ಥಿ ಗಳು, ಪೋಷಕರು ಶುಭಾಶಯವನ್ನು ಸಲ್ಲಿಸಿದರು.

Comments are closed.