ಅವಧಿಗೂ ಮುನ್ನ ಶಾಲಾರಂಭ: ಶಿಕ್ಷಣ ಸಂಸ್ಥೆಗಳಿಗೆ ಮಕ್ಕಳ ಹಕ್ಕು ಆಯೋಗದಿಂದ ಶಾಕ್

Summer Holiday : ಬೆಂಗಳೂರು ಹಾಗೂ ರಾಜ್ಯದಲ್ಲಿ ಶಿಕ್ಷಣ ಸಂಸ್ಥೆಗಳ ಮಾಫಿಯಾ ಜೋರಾಗಿದೆ. ಶಿಕ್ಷಣ ಇಲಾಖೆಯ ನಿಯಮಗಳಿಗೆ ಬೆಲೆ‌ಕೊಡದ ಶಿಕ್ಷಣ ಸಂಸ್ಥೆಗಳು ತಮ್ಮದೇ ಅಂಧಾ ದರ್ಬಾರ ನಡೆಸುತ್ತವೆ.

Summer Holiday : ಬೆಂಗಳೂರು ಹಾಗೂ ರಾಜ್ಯದಲ್ಲಿ ಶಿಕ್ಷಣ ಸಂಸ್ಥೆಗಳ ಮಾಫಿಯಾ ಜೋರಾಗಿದೆ. ಶಿಕ್ಷಣ ಇಲಾಖೆಯ ನಿಯಮಗಳಿಗೆ ಬೆಲೆ‌ಕೊಡದ ಶಿಕ್ಷಣ ಸಂಸ್ಥೆಗಳು ತಮ್ಮದೇ ಅಂಧಾ ದರ್ಬಾರ ನಡೆಸುತ್ತವೆ. ಶಾಲೆ‌ ಪುನರಾರಂಭಕ್ಕೆ ಶಿಕ್ಷಣ ಇಲಾಖೆ ಸಮಯ ನಿಗದಿ ಪಡಿಸಿದ್ದರೂ,ಸರ್ಕಾರದ ನಿಯಮ ಉಲ್ಲಂಘಿಸಿದ ಬೆಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಗಳು ಕಳೆದ ಒಂದು ತಿ‌ಂಗಳಿನಿಂದಲೇ ಶಾಲಾರಂಭ ಮಾಡಿದ್ದವು. ಇಂತಹ ಶಾಲೆಗಳಿಗೆ ಈಗ ಮಕ್ಕಳ ಹಕ್ಕು ಆಯೋಗ ( Child Rights Commission) ಶಾಕ್ ನೀಡಿದೆ.

Bangalore News Child Rights Commission raid for educational institutions for Early school start before summer Holiday
Image Credit to Original Source

ಶಿಕ್ಷಣ ಇಲಾಖೆ‌ ಮೇ 29 ರಿಂದ ಶೈಕ್ಷಣಿಕ ವರ್ಷಾರಂಭ ಮಾಡುವಂತೆ ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಶಾಲೆಗಳಿಗೆ ಸೂಚನೆ ನೀಡಿದೆ. ಆದರೆ ಈ ಶಿಕ್ಷಣ ಇಲಾಖೆಯ ಈ ಆದೇಶವನ್ನು ದಿಕ್ಕರಿಸಿರೋ ಶಿಕ್ಷಣ ಸಂಸ್ಥೆಗಳು ಕಳೆದ ತಿಂಗಳು ಅಂದ್ರೇ ಏಪ್ರಿಲ್‌ನಿಂದಲೇ ಶಾಲಾರಂಭ ಮಾಡಿವೆ. ಬೇಸಿಗೆ ರಜವನ್ನು ಕನಿಷ್ಠ ಅರವತ್ತು ದಿನಗಳ ಕಾಲ ನೀಡಬೇಕೆಂಬುದು ನಿಯಮ.‌ಆದರೆ ಕೆಲ ಶಾಲೆಗಳು ಮೂವತ್ತು ದಿನಗಳ ರಜೆಯನ್ನೂ ನೀಡದೇ ಶಾಲಾರಂಭ ಮಾಡಿದೆ.

ಹೀಗೆ ಸರ್ಕಾರದ ನಿಯಮ ಉಲ್ಲಂಘನೆ ಮಾಡಿದ ಶಾಲೆಗಳಿಗೆ ಬುಧವಾರ ಮಕ್ಕಳ ಹಕ್ಕು ಆಯೋಗ ಬಿಸಿ ಮುಟ್ಟಿಸಿದೆ. ನಗರದ ಹಲವು ಶಾಲೆಗಳ ಮೇಲೆ ದಾಳಿ ನಡೆಸಿದೆ. ಮಕ್ಕಳಿಗೆ ಬೇಸಿಗೆ ರಜೆ ನೀಡದೆ ಶೈಕ್ಷಣಿಕ ವರ್ಷದ ತರಗತಿಗಳನ್ನ ಆರಂಭ ಮಾಡಿದ್ದ ಶಾಲೆಗಳಿಗೆ ಬೆಳ್ಳಂಬೆಳ್ಳಗ್ಗೆ ಶಾಕ್ ಎದುರಾಗಿದೆ. ಪ್ರಾಥಮಿಕ ಹಾಗೂ ಪ್ರೌಢ ವಿದ್ಯಾರ್ಥಿಗಳಿಗೆ ಸುಡು ಬಿಸಲಿನಲ್ಲಿ ಪಾಠ ಕೇಳುವುದು ಕಷ್ಟ ಅಂತ ಹೀಗಾಗಿ ಇಲಾಖೆ ರಜೆ ನೀಡಿದೆ ಆದ್ರೆ ಕೆಲವು ಪ್ರತಿಷ್ಠಿತ ಖಾಸಗಿ ಶಾಲೆಗಳು ರಜೆ ನೀಡಿಲ್ಲ.

ಇದನ್ನೂ ಓದಿ : ರಾಜ್ಯ ಪಠ್ಯಕ್ರಮಕ್ಕೆ ಅನುಮತಿ, ಕೇಂದ್ರ ಪಠ್ಯಕ್ರಮ ಬೋಧನೆ: ಪರೀಕ್ಷಾ ಎಡವಟ್ಟಿನಿಂದ ಬಯಲಾಯ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಅಕ್ರಮ

ಬೇಸಿಗೆ ರಜೆಯಲ್ಲಿಯೂ ಮುಂದಿನ ಶೈಕ್ಷಣಿಕ ವರ್ಷದ ತರಗತಿ ಶುರು ಮಾಡಿಕೊಂಡಿವೆ ಪೋಷಕರಿಗೂ ಮಕ್ಕಳನ್ನ ಈ ಟೈಮ್ನಲ್ಲಿ ಶಾಲೆಗೆ ಕಳಿಸಲು ಇಷ್ಟವಿರಲಿಲ್ಲ. ಹೀಗಾಗಿ ಇದು ಪೋಷಕರು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ. ಈ ಎಲ್ಲ ಕಾರಣಕ್ಕೆ ಮಕ್ಕಳ‌ಹಕ್ಕು ಆಯೋಗ ದಾಳಿ ನಡೆಸಿದೆ. ರಾಜಾಜಿನಗರದ ಪ್ರತಿಷ್ಠಿತ ಶಾಲೆಗಳು,ಎಸ್ ಜೆ ಆರ್ ಶಾಲೆ, ವಿದ್ಯಾವರ್ತಕ ಶಾಲೆ, ಕಾರ್ಮೆಲ್ ಸ್ಕೂಲ್ ಸೇರಿದಂತೆ ಹಲವು ಶಾಲೆಗಳು ಈಗಾಗಲೇ ಅವಧಿಗೂ ಮುನ್ನವೇ ಶಾಲೆಗಳು ಆರಂಭಿಸಿದ್ದವು.

ಇಲಾಖೆ ಆದೇಶ ಉಲ್ಲಂಘಿಸಿ ಶಾಲೆಗಳ ಆರಂಭ ಹಿನ್ನಲೆ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ನಾಗನಗೌಡ್ ನೇತೃತ್ವದಲ್ಲಿ ದಾಳಿ ನಡೆದಿದ್ದು ಈ ವೇಳೆ ಮಕ್ಕಳನ್ನು ಮಾತನಾಡಿಸಿದ ಮಕ್ಕಳ ಹಕ್ಕು ಆಯೋಗದ ಆಧ್ಯಕ್ಷರಿಗೆ‌‌ ಮಕ್ಕಳಿಂದ ಅಚ್ಚರಿಯ ಉತ್ತರ ಸಿಕ್ಕಿದೆ. ಮಕ್ಕಳೇ ರಜೆ ಬೇಕಾ ಬೇಡ್ವಾ ಅಂತಾ ಕೇಳಿದ ಮಕ್ಕಳ ಹಕ್ಕು ಆಯೋಗದ ಅಧ್ಯಕ್ಷರಿಗೆ ಮಕ್ಕಳು ನಮಗೆ ರಜೆ ಬೇಕು.‌ಓದಿ ಓದಿ,ಬರೆದು ಬರೆದು ಸುಸ್ತಾಗಿದೆ. ಬೇಸಿಗೆ ರಜೆಯಲ್ಲಿ ಎಲ್ಲೂ ಸುತ್ತಾಡಲು, ಮನಸ್ಸಪೂರ್ತಿಯಾಗಿ ಆಟವಾಡಲು ಸಾಧ್ಯವಾಗಿಲ್ಲ. ರಜೆ ನೀಡದೇ ಮತ್ತೆ ಮುಂದಿನ ಪಾಠ ಆರಂಭಿಸಿರೋದರಿಂದ ನಮಗೆ ವಿರಾಮವೇ ಇಲ್ಲದಂತಾಗಿದೆ ಎಂದು ದೂರಿದ್ದಾರೆ.

ಇದನ್ನೂ ಓದಿ : ಕನ್ನಡದಲ್ಲೇ ಐಎಎಸ್ ಬರೆಯಬೇಕಾ ? ಇಲ್ಲಿದೆ ಸರಳವಾದ ಟಿಪ್ಸ್

ಹೀಗಾಗಿ ಶಾಲಾ ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡ ಮಕ್ಕಳ ಹಕ್ಕು ಅಯೋಗದ ಅಧ್ಯಕ್ಷರು, ಮಕ್ಕಳು ರಜೆ ಬೇಕು ಅಂತಿದ್ದಾರೆ, ಆದರೆ ನೀವು ಶಾಲಾರಂಭ ಮಾಡಿದ್ದೀರಿ ಯಾಕೆ ಎಂದು ಪ್ರಶ್ನಿಸಿದ್ದಾರೆ. ಮಾತ್ರವಲ್ಲ ಇಲಾಖೆಯ ಆದೇಶ ತೊರಿಸಿಯೇ ಪ್ರಶ್ನೆ ಮಾಡ್ತಿರೋ ಅಧ್ಯಕ್ಷರು,ನೀವು ಸರ್ಕಾರದ ಆದೇಶದ ಮೇಲೆ ಶಾಲೆ ಮಾಡ್ತೀರಾ ಇಲ್ವಾ ? ನಿಮಗೇ ಹೇಗೂ ಬೇಕು ಹಾಗೆ ಶಾಲೆ ನಡೆಸುತ್ತೀದ್ದೀರಾ..?ಯಾರು ನಿಮಗೆ ಶಾಲೆ ನಡೆಸಲು ಅವಕಾಶ ನೀಡಿದ್ದು ..? ಎಂದು ಪ್ರಶ್ನಿಸಿದ್ದಾರೆ.

Bangalore News Child Rights Commission raid for educational institutions for Early school start before summer Holiday
Image Credit to Original Source

ಅಲ್ಲದೇ ಕೆಲವು ಶಾಲೆಯ ಪ್ರಿನ್ಸಿಪಲ್ ಗೆ ತರಾಟೆಗೆ ತೆಗೆದುಕೊಂಡ ಮಕ್ಕಳ ಹಕ್ಕು ಆಯೋಗದ ಅಧ್ಯಕ್ಷರು ,ಮಕ್ಕಳಿಗೆ ಒತ್ತಡ ಆಗೋದಿಲ್ಲವಾ,ಮಕ್ಕಳು ರಜೆ ಬೇಕು ಅಂತಿದ್ದಾರಲ್ವಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಶಾಲೆಯಿಂದ‌ ಮಕ್ಕಳನ್ನು ಮನೆಗೆ ಕಳುಹಿಸಿದ್ದಾರೆ. ಇನ್ನು ಚೈತನ್ಯ ಶಾಲೆಯ ಪ್ರಿನ್ಸಿಪಾಲ್ ಸಬೂಬು ನೀಡಿದ್ದು, ನಮ್ಮ ಶಾಲೆಯಲ್ಲಿ ನೀರಿರಲಿಲ್ಲ.ಹೀಗಾಗಿ ಬೇಗ ಶಾಲೆ ಬಾಗಿಲು ಮುಚ್ಚಿದ್ದೇವು ಅದಕ್ಕೆ ಈಗ ಬೇಗ ಆರಂಭಿಸಿದ್ದೇವೆ ಎಂದು ಸಬೂಬು ನೀಡಿದರು. ಸದ್ಯ ದಾಳಿ ನಡೆಸಿರೋ ಮಕ್ಕಳ‌ಹಕ್ಕು ಆಯೋಗ ನೊಟೀಸ್ ನೀಡಲಿದ್ದು ಶಾಲೆಗಳ ವಿರುದ್ಧ ಶಿಸ್ತುಕ್ರಮಕ್ಕೆ ಇಲಾಖೆಗೆ ಶಿಫಾರಸ್ಸು ಮಾಡಲಿದೆ.

Bangalore News Child Rights Commission raid for educational institutions for Early school start before summer Holiday

Comments are closed.