Bhagavad Gita : ಪಠ್ಯಕ್ರಮದಲ್ಲಿ ಭಗವದ್ಗೀತೆ : ಹೊಸ ವಿವಾದಕ್ಕೆ ನಾಂದಿ ಹಾಡ್ತಿದೆ ರಾಜ್ಯ ಬಿಜೆಪಿ

ಬೆಂಗಳೂರು : ಎಲ್ಲದರಲ್ಲೂ ಗುಜರಾತ್ ಮಾದರಿಯನ್ನು ಅನುಸರಿಸಲು ಮುಂದಾಗಿರುವ ರಾಜ್ಯ ಸರ್ಕಾರ ಈಗ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಹಿಂದುತ್ವದ ಅಜೆಂಡಾ ರೂಪದಲ್ಲಿ ಭಗವದ್ಗೀತೆಯನ್ನು ಬಳಸಿಕೊಳ್ಳಲು ಮುಂದಾಂತಿದೆ. ಗುಜರಾತನಲ್ಲಿ ಶಾಲಾ ಪಠ್ಯಕ್ರಮದಲ್ಲಿ ಭಗವದ್ಘೀತೆಯನ್ನು (Bhagavad Gita ) ಸೇರಿಸುವ ಪ್ರಸ್ತಾಪ ಅಂತಿಮಹಂತ ತಲುಪಿದ್ದು ಈಗ ಇದೇ ಮಾದರಿ ಕರ್ನಾಟಕದಲ್ಲೂ (Karnataka) ಅನುಕರಣೆಯಾಗುತ್ತಾ ಅನ್ನೋ ಪ್ರಶ್ನೆ ಮೂಡಿದೆ.

ಈ ಹಿನ್ನೆಲೆ ರಾಜ್ಯದಲ್ಲಿನ ಶಾಲಾ ಪಠ್ಯಕ್ರಮದಲ್ಲೂ ಭಗವದ್ಗೀತೆ ಸೇರಿಸುವ ವಿಚಾರದ ಪರ ಹಾಗೂ ವಿರೋಧದ ಚರ್ಚೆ ಜೋರಾಗಿ ನಡೀತಿದೆ. ಈ‌ ವಿಚಾರವೀಗ ರಾಜಕೀಯ ಜಿದ್ದಾಜಿದ್ದಿಗೆ ಎಡೆ ಮಾಡಿಕೊಟ್ಟಿದೆ. ಈ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಗುಜರಾತ್ ‌ನಲ್ಲಿ 6-8 ನೇ ತರಗತಿಯ ಪಠ್ಯದಲ್ಲಿ ಭಗವದ್ಗೀತೆಯನ್ನ ಸೇರಿಸಲಾಗಿದೆ. ಇದೇ ಮಾದರಿಯಲ್ಲಿ ರಾಜ್ಯದ ಪ್ರಾಥಮಿಕ ಶಾಲಾ ಹಂತದ ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ಸೇರಿಸುವ ಕುರಿತು ಚರ್ಚೆ ಶುರುವಾಗಿದೆ.

ಬಿಜೆಪಿ ಹಿಂದುತ್ವದ ಅಜೆಂಡಾವನ್ನೇ ಗಟ್ಟಿಯಾಗಿಟ್ಟುಕೊಂಡು 2023 ರ ವಿಧಾನಸಭಾ ಚುನಾವಣೆ ಎದುರಿಸಲು ಸಿದ್ಧವಾಗುತ್ತಿದೆ. ಹೀಗಾಗಿ‌‌ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಭಗವದ್ಘಿತೆಯನ್ನು ಅಳವಡಿಸುವ ಚಿಂತನೆ ನಡೆದಿದೆ ಎಂದು ಬಿಜೆಪಿ ತನ್ನ ಉದ್ದೇಶವನ್ನು ಸಮರ್ಥಿಸಿಕೊಳ್ಳಲು ಆರಂಭಿಸಿದೆ.

ಆದರೆ ಈ ಪ್ರಸ್ತಾಪದ ಬಗ್ಗೆ ಬೆಂಗಳೂರಿನಲ್ಲಿ ‌ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿಸಿ ನಾಗೇಶ್, ಮಕ್ಕಳಲ್ಲಿ ನೀತಿಪಾಠ ಹೆಚ್ಚಿಸುವ ಸಲುವಾಗಿ ಪಠ್ಯಕ್ರಮ ಅಳವಡಿಸುವ ಬಗ್ಗೆ ಪ್ರಸ್ತಾಪ ಇದೆ. ಅದರಲ್ಲಿ ಏನಿರಬೇಕು ಅನ್ನೋದನ್ನ ಸಿಎಂ ಜೊತೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ.‌ ಅದಾಗಿಯೂ ಈ ಸಾಲಿನ ಪಠ್ಯದಲ್ಲಿ ಸೇರಿಸುವುದಿಲ್ಲ. ಸೇರಿಸುವುದಾದರೂ ಮುಂದಿನ ಶೈಕ್ಷಣಿಕ ವರ್ಷದಿಂದ ಎಂದಿದ್ದಾರೆ.

ಆದರೆ ಈ ಪ್ರಸ್ತಾಪಕ್ಕೆ ನೀರಿಕ್ಷಿತವೆಂಬಂತೆ ವಿರೋಧ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನ ನಾನು ಆರಂಭದಲ್ಲೇ ವಿರೋಧ ಮಾಡಿದ್ದೆ. ಆದ್ರೆ ಎಲ್ಲಾ ತಿಳಿದವರು ಸೇರಿ ಪಠ್ಯ ಕ್ರಮ ರಚನೆ ಮಾಡಿದ್ದಾರೆ. ಹೊಸದಾಗಿ ಏನನ್ನೂ ಸೇರಿಸುವ ಅಗತ್ಯ ಇಲ್ಲ. ಎಲ್ಲಾ ಧರ್ಮದ ಆಚಾರ ವಿಚಾರಗಳನ್ನ ಜನ ತಿಳಿದುಕೊಳ್ಳೊದ್ರಲ್ಲಿ ತಪ್ಪಿಲ್ಲ. ಈಗಾಗಲೇ ಭಗವದ್ಗೀತೆ, ರಾಮಾಯಣ ಇತರ ಧರ್ಮದ ವಿಚಾರಗಳು ಪಠ್ಯದಲ್ಲಿ ಇವೆ.

ಕೆಂಗಲ್ ಹನುಮಂತಯ್ಯ ಮುಖ್ಯಮಂತ್ರಿ ಆಗಿದ್ದಾಗಲೇ ಎರಡು ರುಪಾಯಿ ಗೆ ಭಗವದ್ಗೀತೆ ಪುಸ್ತಕ ಕೊಟ್ಟಿದ್ರು. ಆದ್ರೆ ಬಿಜೆಪಿಯವರು ಹೊಸದಾಗಿ ಕ್ರೆಡಿಟ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದಿದ್ದಾರೆ. ಇತ್ತೀಚಿಗಷ್ಟೇ ವಿವಾದಕ್ಕೆ ಕಾರಣವಾಗಿದ್ದ ಹಿಜಾಬ್ ಸದ್ಯ‌ಸ್ವಲ್ಪ ತಣ್ಣಗಿದೆ. ಅದರ ಬೆನ್ನಲ್ಲೇ ಬಿಜೆಪಿ ಸರ್ಕಾರ ಮತ್ತೆ ಭಗವದ್ಘಿತೆ ಹೆಸರಿನಲ್ಲಿ ಕಿಚ್ಚು ಹಚ್ಚಲು ಸಿದ್ಧವಾಗಿದ್ದು, ಈ ಪ್ರಸ್ತಾಪ ಏನೆಲ್ಲ ವಿವಾದ ಸೃಷ್ಟಿಸುತ್ತೆ ಕಾದು ನೋಡಬೇಕಿದೆ.

ಇದನ್ನೂ ಓದಿ : ಶಿಕ್ಷಕರ ಬೇಸಿಗೆ ರಜೆ ಕಡಿತ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದೇನು ಗೊತ್ತಾ ?

ಇದನ್ನೂ ಓದಿ :  ಗೇಟ್ ಫಲಿತಾಂಶ 2022 ಪ್ರಕಟ : ಉತ್ತರ ಕೀ, ಟಾಪರ್‌ಗಳ ಪಟ್ಟಿ, ಇತರ ವಿವರಗಳನ್ನು ಪರಿಶೀಲಿಸಿ

(In the curriculum Bhagavad Gita is a new controversy in Karnataka)

Comments are closed.