ಸೋಮವಾರ, ಏಪ್ರಿಲ್ 28, 2025
HomeeducationBiography of Siddeshwar Sri: ಶಾಲಾ ಪಠ್ಯಪುಸ್ತಕದಲ್ಲಿ ಸಿದ್ದೇಶ್ವರ ಶ್ರೀಗಳ ಜೀವನ ಚರಿತ್ರೆ: ಸಿಎಂ ಘೋಷಣೆ

Biography of Siddeshwar Sri: ಶಾಲಾ ಪಠ್ಯಪುಸ್ತಕದಲ್ಲಿ ಸಿದ್ದೇಶ್ವರ ಶ್ರೀಗಳ ಜೀವನ ಚರಿತ್ರೆ: ಸಿಎಂ ಘೋಷಣೆ

- Advertisement -

ಬೆಂಗಳೂರು: (Biography of Siddeshwar Sri) ನಡೆದಾಡು ದೇವರು ಅಂತಲೇ ಕರೆಯಿಸಿಕೊಳ್ಳುತ್ತಿದ್ದ, ಪ್ರವಚನಗಳ ಮೂಲಕ ಲಕ್ಷಾಂತರ ಜನರ ಬದುಕಿಗೆ ದಾರಿ ದೀಪವಾಗಿದ್ದ, ಶತಮಾನದ ಸಂತರಾದ ಸಿದ್ದೇಶ್ವರ ಶ್ರೀಗಳ ಜೀವನದ ಕಥೆಯನ್ನು ಶಾಲಾ ಪಠ್ಯಕ್ರಮದಲ್ಲಿ ಸೇರ್ಪಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಮಾಡಿದ್ದಾರೆ.

ಶ್ರೀಗಳ ಸರಳ ಜೀವನ ಶೈಲಿಗಳು ಮುಂದಿನ ಹಾಗೂ ಈ ಪೀಳಿಗೆಯ ಮಕ್ಕಳಿಗೂ ಕೂಡ ಸ್ಪೂರ್ತಿದಾಯಕವಾಗುವಂತದ್ದು, ಸರಳ ಸಜ್ಜನಿಕೆಯ ಮಹಾನ್‌ ವ್ಯಕ್ತಿಯ ಪರಿಚಯ ಮುಂದಿನ ಪೀಳಿಗೆಯ ಎಲ್ಲರಿಗೂ ತಿಳಿಯಲೇ ಬೇಕಾದದ್ದು. ಈ ನಿಟ್ಟಿನಲ್ಲಿ ಸರಳ ಸಜ್ಜನಿಕೆಯ ಮಹಾನ್‌ ಸಂತ ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳ ಜೀವನಗಾಥೆ(Biography of Siddeshwar Sri)ಯನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಅವರು ಘೋಷಣೆ ಮಾಡಿದ್ದಾರೆ.

ನಡೆದಾಡುವ ದೇವರು ಎಂಬ ಖ್ಯಾತಿಗೆ ಪಾತ್ರರಾಗಿದ್ದ ವಿಜಯಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ವಿಧಿವಶರಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದಲೂ ಸ್ವಾಮೀಜಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಆಶ್ರಮದಲ್ಲಿ ವಿಜಯಪುರದ ಬಿಎಲ್ಡಿಇ ಆಸ್ಪತ್ರೆಯ ವೈದ್ಯರ ತಂಡ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಆದರೆ ಸೋಮವಾರ ಸಂಜೆ ಆರು ಗಂಟೆಗೆ ಅವರು ವಿಧಿವಶರಾಗಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿದ್ದೇಶ್ವರ ಸ್ವಾಮೀಜಿ ಅವರ ಅಂತ್ಯಕ್ರಿಯೆಯನ್ನು ಸಕಲ ಸರಕಾರಿ ಗೌರವದಿಂದ ನೆರವೇರಿಸಿಕೊಟ್ಟಿದ್ದಾರೆ.

ಸರಳತೆ, ಉತ್ತಮ ನಡವಳಿಕೆ ಮೂಲಕವೇ ಭಕ್ತರ ಮನದಲ್ಲಿ ನೆಲೆಸಿರುವ ಸಿದ್ದೇಶ್ವರ ಶ್ರೀಗಳು ನಡೆದಾಡುವ ದೇವರು ಎಂತಲೇ ಕರೆಯಿಸಿಕೊಳ್ಳುತ್ತಾರೆ. ಅಪರೂಪದ ತತ್ವಜ್ಞಾನಿಯಾದ ಇವರು ಬದುಕಿನ ಸೂಕ್ಷ್ಮತೆಯನ್ನು ನಿಖರವಾಗಿ, ಸ್ಪಷ್ಟವಾಗಿ ತಿಳಿದುಕೊಂಡಿದ್ದಾರೆ. ಸಾಮಾನ್ಯ ಮನುಷ್ಯನ ಸಮಸ್ಯೆಗಳಿಗೆ ಸರಳವಾಗಿ ಪರಿಹಾರ ಕೊಟ್ಟವರು.‌ ಪ್ರತಿಯೊಬ್ಬರನ್ನು ಪ್ರೀತಿ ವಿಶ್ವಾಸದಿಂದ ಕಂಡ ಒಂದು ಅದ್ಭುತ ಶಕ್ತಿ ಅವರು. ಇವರ ಜೀವನದ ಹಾದಿ ಪ್ರಿಯೊಬ್ಬರಿಗೂ ಸ್ಪೂರ್ತಿದಾಯಕವಾದದ್ದು.

ಇದನ್ನೂ ಓದಿ : Siddeshwara Swamiji passes away : ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ

ಶ್ರೀಗಳುಜೀವನಾಧಾರಿತ ಸಂದೇಶಗಳಿಂದ ಚೈತನ್ಯ ಹೊಂದಿದ್ದು, ಯಾರಿಗೂ ವಿರೋಧ ಮಾಡುತ್ತಿರಲಿಲ್ಲ. ಗೌರವ ಮತ್ತು ಬಿರುದುಗಳ ವ್ಯಾಮೋಹ ಇವರಿಗೆ ಇರಲಿಲ್ಲ. ಅವರು ತನಗೆ ಲಭಿಸಿದ ಅತ್ಯುನ್ನತ ಪ್ರಶಸ್ತಿಗಳನ್ನು ನಯವಾಗಿ ತಿರಸ್ಕರಿಸಿದ ಒಬ್ಬ ಸರಳ ಜೀವಿ. ತಮಗಾಗಿ ಒಂದು ಬಿಡಿಗಾಸನ್ನೂ ಗಳಿಸದ ವ್ಯಕ್ತಿಯ ಅಂಗಿಗೆ ಜೇಬು ಕೂಡ ಇರಲಿಲ್ಲ. ಮಹಾತ್ಮರ ಬಳಿ ಇದ್ದಿರುವುದು ಎರಡು ಜೊತೆ ಬಿಳಿ ಪಂಚೆ ಹಾಗೂ ಅಂಗಿ ಮಾತ್ರ. ಅದನ್ನೂ ಕೂಡ ಪ್ರತಿದಿನ ಅವರೇ ಸ್ವಚ್ಚಗೊಳಿಸುತ್ತಿದ್ದರು.

CM Bommai has announced that the biography of Siddeshwar Sri, the great walking god of simple gentility, will be included in the school curriculum.

RELATED ARTICLES

Most Popular