ಮಂಗಳವಾರ, ಏಪ್ರಿಲ್ 29, 2025
HomeeducationByju's Turmoil : ನಷ್ಟದ ಸುಳಿಯಲ್ಲಿ ಬೈಜುಸ್, ಕೇರಳದ ಕಚೇರಿ ಬಂದ್ : ಉದ್ಯೋಗಿಗಳ ವಜಾ

Byju’s Turmoil : ನಷ್ಟದ ಸುಳಿಯಲ್ಲಿ ಬೈಜುಸ್, ಕೇರಳದ ಕಚೇರಿ ಬಂದ್ : ಉದ್ಯೋಗಿಗಳ ವಜಾ

- Advertisement -

ತಿರುವನಂತಪುರಂ : (Byju’s Turmoil )ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ edutech ಕಂಪನಿ Byju’s (BYJU) ತನ್ನ ಅಂಗಸಂಸ್ಥೆಯಾದ ಆಕಾಶ್ ಎಜುಕೇಷನಲ್ ಸರ್ವಿಸಸ್ ನಿಂದ 300 ಕೋಟಿ ರೂ. ಸಾಲ ಪಡೆದಿರುವ ಕುರಿತು ವರದಿಯಾಗಿದೆ. ಪ್ರಮುಖ ವ್ಯಾಪಾರ ಚಟುವಟಿಕೆಗಳಿಗೆ ಅಗತ್ಯವಿರುವ ಹಣವನ್ನು ಸಾಲದ ರೂಪದಲ್ಲಿ ಪಡೆಯಲಾಗಿದೆ ಎಂದು ಕಂಪನಿ ಹೇಳಿಕೊಂಡಿತ್ತು. ಈ ನಡುವಲ್ಲೇ ಬೈಜುಸ್(Byju’s Turmoil ) ತನ್ನ ಕೇರಳದ ಕಚೇರಿಯನ್ನು ಮುಚ್ಚಿದ್ದು, ಉದ್ಯೋಗಿಗಳಿಂದ ಬಲವಂತವಾಗಿ ರಾಜೀನಾಮೆ ಪಡೆಯುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.

ಬೈಜುಸ್ ತಿರುವನಂತಪುರಂನ ಟೆಕ್ನೋಪಾರ್ಕ್‌ನಲ್ಲಿರುವ ತನ್ನ ಕಚೇರಿಯನ್ನು ಮುಚ್ಚಿದೆ. ಹಾಗಾಗಿ ನೌಕರರನ್ನು ರಾಜೀನಾಮೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬೈಜುಸ್(Byju’s Turmoil ) ನೌಕರರು ಐಟಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳೊಂದಿಗೆ ಸಚಿವರನ್ನು ಭೇಟಿ ಮಾಡಿ ತಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದಾರೆ. ಈ ಪ್ರಕರಣವನ್ನು ಕಾರ್ಮಿಕ ಇಲಾಖೆ ಗಂಭೀರವಾಗಿ ಪರಿಗಣಿಸಿ ಪರಿಶೀಲನೆ ನಡೆಸಲಿದೆ ಎಂಬ ಭರವಸೆಯನ್ನು ಸಚಿವರು ಕೊಟ್ಟಿದ್ದಾರೆ. ಕೊಚ್ಚಿ ಹೊರತು ಪಡಿಸಿ ಈಗಾಗಲೇ ಕೇರಳದ ಬಹುತೇಕ ಕಡೆಗಳಲ್ಲಿರುವ ಬೈಜುಸ್ ಕಚೇರಿಗಳನ್ನು ಈಗಾಗಲೇ ಮುಚ್ಚಲಾಗಿದ್ದು, ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆ ನಡೆಯುತ್ತಿವೆ ಎಂದು ಆಂತರಿಕ ಮೂಲಗಳನ್ನು ಆಧರಿಸಿ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ : Robin Uthappa : ಟಿ20 ವಿಶ್ವಕಪ್‌ನಲ್ಲಿ ಮಿಂಚುತ್ತಿದ್ದಾರೆ ಕೊಡಗಿನ ವೀರ ರಾಬಿನ್ ಉತ್ತಪ್ಪ

ಇದನ್ನೂ ಓದಿ : Rasam Recipe : ಜ್ವರದಿಂದ ಬಾಯಿ ರುಚಿ ಕೆಟ್ಟಿದೆಯೇ : ಹಾಗಿದ್ದರೆ ಈ ರೀತಿ ರಸಂ ಮಾಡಿ

ಬೈಜುಸ್ ನ ಇತ್ತೀಚಿನ ಬೆಳವಣಿಗೆಗಳು ;

ಮಾರಾಟ ತಂಡಗಳ ಗುರಿಯ ಅವಧಿಯನ್ನು ಈಗಾಗಲೇ 12 ವಾರಗಳಿಂದ 8 ವಾರಗಳಿಗೆ ಇಳಿಸಲಾಗಿದೆ. ಅಲ್ಲದೇ ವಾರದ ಕೆಲಸದ ದಿನಗಳನ್ನು 5 ರಿಂದ 6 ಕ್ಕೆ ಹೆಚ್ಚಿಸಲಾಗಿದೆ. ಉತ್ತಮವಾಗಿ ಕಾರ್ಯನಿರ್ವಹಿಸದ ಕಾರಣ ನೀಡಿ ಉದ್ಯೋಗಿಗಳ ವಜಾಕ್ಕೆ ಸಿದ್ದತೆ ನಡೆಸಿದೆ ಎನ್ನಲಾಗುತ್ತಿದೆ. ಇನ್ನುಅಕ್ಟೋಬರ್ ತಿಂಗಳ ವೇತನವನ್ನು ಒಂದೇ ಬಾರಿಗೆ ಪಾವತಿಸುವಂತೆ ಬೈಜುಸ್‌ ನೌಕರರು ಒತ್ತಾಯಿಸಿದ್ದಾರೆ. ನವೆಂಬರ್‌ ನಿಂದ ಜನವರಿ 2023 ರವರೆಗಿನ ವೇತನವನ್ನು ಒಂದೇ ಬಾರಿಗೆ ಪಾವತಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ಗಳಿಕೆಯ ರಜೆಯನ್ನು ಎನ್‌ಕ್ಯಾಶ್‌ಮೆಂಟ್ ಮಾಡಲು ಮತ್ತು ವೇರಿಯಬಲ್ ವೇತನವನ್ನು ಪಾವತಿಸಲು ಒತ್ತಾಯಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ : RPSC FSO Recruitment 2022 : RPSC ಆಯೋಗದ FSO ಹುದ್ದೆಗೆ ನೇಮಕಾತಿ ಆರಂಭ ; 200 ಹುದ್ದೆಗಳಿಗೆ ಅರ್ಜಿ ಅಹ್ವಾನ

ನಷ್ಟದ ಸುಳಿಯಲ್ಲಿ ಬೈಜುಸ್ ಕಂಪೆನಿ ;

ಬೈಜುಸ್ ಕಂಪನಿ FY21 ರಲ್ಲಿ 4,588 ಕೋಟಿ ರೂಪಾಯಿ ನಷ್ಟವನ್ನು ಘೋಷಿಸಿಕೊಂಡಿದೆ. 18 ತಿಂಗಳ ವಿಳಂಭದ ನಂತರ ಈ ವರದಿಯನ್ನು ಪ್ರಕಟಿಸಲಾಗಿದೆ. ಬಹುನಿರೀಕ್ಷಿತ IPO (ಆರಂಭಿಕ ಸಾರ್ವಜನಿಕ ಕೊಡುಗೆ) ಯನ್ನು ಬೈಜ್ಯೂಸ್ ವಿಳಂಭಗೊಳಿಸುತ್ತಿದೆ. ಜನರಿಂದ ಉತ್ತಮ ಸ್ಪಂದನೆ ಸಿಗುವುದಿಲ್ಲ ಎಂಬ ಆತಂಕದಲ್ಲಿ ಈ ರೀತಿ ಮಾಡಲಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ

(Byju’s Turmoil) The edutech company Byju’s (BYJU), which is in dire financial straits, has received Rs 300 crore from its subsidiary Akash Educational Services. A loan has been reported. The company claimed that the funds required for major business activities were obtained in the form of loans. In the meantime, Byju’s Turmoil has closed its Kerala office and there are complaints that employees are being forced to resign.

RELATED ARTICLES

Most Popular