Rasam Recipe : ಜ್ವರದಿಂದ ಬಾಯಿ ರುಚಿ ಕೆಟ್ಟಿದೆಯೇ : ಹಾಗಿದ್ದರೆ ಈ ರೀತಿ ರಸಂ ಮಾಡಿ

ವಾತಾವರಣದ ಬದಲಾವಣೆಯಿಂದಾಗಿ ಆಗಾಗ ಜ್ವರ, ಕೆಮ್ಮು, ಶೀತ ಮತ್ತು ಕಫ ಕಾಣಿಸಿಕೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ(Rasam Recipe) ಬಾಯಿಯು ರುಚಿ ಕೆಡುವುದು ಎಲ್ಲರಲ್ಲೂ ಸಾಮಾನ್ಯ . ಆರೋಗ್ಯ ಸರಿ ಇಲ್ಲದೇ ಇದ್ದಾಗ ಊಟ ಮತ್ತು ತಿಂಡಿಯನ್ನು ಸರಿಯಾಗಿ ಮಾಡದೇ ಇದ್ದರೆ ಕಾಯಿಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿರುತ್ತವೆ. ಕೆಲವೊಮ್ಮೆ ವಿಪರೀತ ಜ್ವರ, ಶೀತ, ಕೆಮ್ಮು ಮತ್ತು ಕಫದಿಂದಾಗಿ ವಾಕರಿಕೆ ಬಂದ ಹಾಗೆ ಆಗುತ್ತದೆ. ಇಂತಹ ಸಮಯದಲ್ಲಿ ಬಾಯಿ ರುಚಿಯನ್ನು ಹೆಚ್ಚಿಸುವ ಆಹಾರವನ್ನು ತಿನ್ನಬೇಕಾಗುತ್ತದೆ. ಹಾಗಾಗಿ ಬಾಯಿ ರುಚಿಯನ್ನು ಹೆಚ್ಚಿಸುವ ಹಾಗೂ ಆರೋಗ್ಯಕರವಾದ ರಸಂ ಅನ್ನು ತಯಾರಿಸುವ ವಿಧಾನವನ್ನು ತಿಳಿಯೋಣ.

ಬೇಕಾಗುವ ಸಾಮಾಗ್ರಿಗಳು :

  • ಟೊಮೊಟೊ
  • ತೊಗರಿಬೇಳೆ
  • ಈರುಳ್ಳಿ
  • ಹಸಿಮೆಣಸು
  • ಕಾಳು ಮೆಣಸು
  • ಎಣ್ಣೆ
  • ಬೆಳ್ಳುಳ್ಳಿ
  • ಸಾಸಿವೆ
  • ಜೀರಿಗೆ

ತಯಾರಿಸುವ ವಿಧಾನ :

ಮೊದಲಿಗೆ ಒಂದು ಕುಕ್ಕರ್‌ಗೆ ಒಂದು ಕಪ್‌ ತೊಗರಿಬೇಳೆ, ಎರಡು ಟೊಮೊಟೊ, ಒಂದು ಟೇಬಲ್‌ ಸ್ಫೂನ್‌ ಎಣ್ಣೆ ಮತ್ತು ಬೇಯಿಸಲು ಬೇಕಾದಷ್ಟು ನೀರನ್ನು ಹಾಕಿ ಮುಚ್ಚಳವನ್ನು ಮುಚ್ಚಿ ಮೂರು ಸೀಟಿಯ ಮೂಲಕ ಬೇಯಿಸಿಕೊಳ್ಳಬೇಕು. ಬೇಯಿಸಿರುವ ಟೊಮೊಟೊ ಮತ್ತು ಬೇಳೆಯನ್ನು ಚೆನ್ನಾಗಿ ಕಿವುಚಿಕೊಳ್ಳಬೇಕು. ಒಂದು ಮಿಕ್ಸಿ ಜಾರಿಗೆ ನಾಲ್ಕು ಹಸಿಮೆಣಸು, ನಾಲ್ಕು ಎಸಳು ಬೆಳ್ಳುಳ್ಳಿ, ಒಂದು ಟೇಬಲ್‌ ಸ್ಪೂನ್‌ ಕಾಳುಮೆಣಸು, ಕರಿಬೇವಿನ ಎಲೆಗಳು ಸ್ವಲ್ಪ ಮತ್ತು ಜೀರಿಗೆ ಒಂದು ಟೇಬಲ್‌ ಸ್ಪೂನ್‌ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು. ನಂತರ ಇನ್ನೊಂದು ಪಾತ್ರೆಯಲ್ಲಿ ಎರಡು ಟೇಬಲ್‌ ಸ್ಫೂನ್‌ ಎಣ್ಣೆಗೆ ಒಂದು ಟೇಬಲ್‌ ಸ್ಪೂನ್‌ನಷ್ಟು ಸಾಸಿವೆ ಜೀರಿಗೆಯನ್ನು ಹಾಕಿ ಅದು ಸಿಡಿದ ನಂತರ ನಾಲ್ಕು ಜಜ್ಜಿ ಇಟ್ಟುಕೊಂಡಿರುವ ಬೆಳ್ಳುಳ್ಳಿ ಎಸಳನ್ನು ಹಾಕಿ ಹುರಿದುಕೊಳ್ಳಬೇಕು. ನಂತರ ಅದಕ್ಕೆ ಕರಿಬೇವಿನ ಎಲೆಯನ್ನು ಹಾಕಬೇಕು. ಅದಕ್ಕೆ ಸಣ್ಣಕ್ಕೆ ಹಚ್ಚಿಕೊಂಡಿರುವ ಒಂದು ಈರುಳ್ಳಿ ಮತ್ತು ಒಂದು ಹಸಿಮೆಣಸನ್ನು ಹಾಕಿ ಪ್ರೈ ಮಾಡಿಕೊಳ್ಳಬೇಕು.

ಇದನ್ನೂ ಓದಿ : Masala Papad: ಟೀ ಟೈಮ್‌ಗೆ ಬೆಸ್ಟ್‌ ಗರಿಗರಿಯಾದ ಮಸಾಲಾ ಪಾಪಡ್‌

ಇದನ್ನೂ ಓದಿ : Chicken Pepper Dry Recipe : ಮನೆಯಲ್ಲೇ ಮಾಡಿ ಚಿಕನ್‌ ಪೆಪ್ಪರ್‌ ಡ್ರೈ ರೆಸಿಪಿ

ಇದನ್ನೂ ಓದಿ : Millets : ಚಳಿಗಾಲಕ್ಕೆ ಸಿರಿಧಾನ್ಯಗಳೇ ಬೆಸ್ಟ್‌ : ಹೇಗೆ ಅಂತೀರಾ…

ಇದನ್ನೂ ಓದಿ : Spinach Green Dal Recipe : ಪಾಲಕ್‌ ಸೊಪ್ಪಿನ ದಾಲ್‌ ಪ್ರೈ ತಿಂದಿದ್ರಾ ?

ನಂತರ ಇದಕ್ಕೆ ಪುಡಿ ಮಾಡಿ ಇಟ್ಟುಕೊಂಡ ಮಿಶ್ರಣದ ಜೊತೆಗೆ ಅರ್ಧ ಟೇಬಲ್‌ ಸ್ಪೂನ್‌ನಷ್ಟು ಅರಶಿನ ಪುಡಿಯನ್ನು ಹಾಕಿ ಮಿಕ್ಸ್‌ ಮಾಡಿಕೊಳ್ಳಬೇಕು. ಆಮೇಲೆ ಬೇಯಸಿ ಕಿವುಚಿ ಇಟ್ಟುಕೊಂಡಿರುವ ಟೊಮೊಟೊ ಮತ್ತು ಬೇಳೆ ಮಿಶ್ರಣದ ಜೊತೆಗೆ ಎರಡು ಗ್ಲಾಸ್‌ ನೀರನ್ನು ಹಾಗೂ ರುಚಿಗೆ ತಕ್ಕಷ್ಟು ಉಪ್ಪುನ್ನು ಸೇರಿಸಿಕೊಂಡು ಸ್ವಲ್ಪ ಹುಣಸೆಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು. ಕುದಿಯುತ್ತಿರುವ ರಸಂಗೆ ತುರಿದು ಇಟ್ಟುಕೊಂಡಿರುವ ಸ್ವಲ್ಪ ಶುಂಠಿಯನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು. ಕೊನೆಯಲ್ಲಿ ರಸಂಗೆ ಸಣ್ಣಕ್ಕೆ ಹಚ್ಚಿ ಇಟ್ಟುಕೊಂಡಿರುವ ಕೊತ್ತಂಬರಿ ಸೊಪ್ಪುನ್ನು ಹಾಕಿಕೊಳ್ಳಬೇಕು. ಆರೋಗ್ಯಕರವಾದ ಹಾಗೂ ಬಾಯಿ ರುಚಿಯನ್ನು ಹೆಚ್ಚಿಸುವ ರಸಂ ಸಿದ್ದ. ಈ ರಸಂ ಬಿಸಿ ಬಿಸಿ ಇರುವಾಗ ಕುಡಿಯುವುದರಿಂದ ಶೀತ, ಕಫ, ಮತ್ತು ಕೆಮ್ಮು ಇರುವವರಿಗೆ ಅದರಿಂದ ಸ್ವಲ್ಪ ಮಟ್ಟಿಗೆ ಸುಧಾರಿಸಿದ ಅನುಭವವಾಗುತ್ತದೆ. ಅಷ್ಟೇ ಅಲ್ಲದೇ ಏನನ್ನೂ ತಿನ್ನಲು ಆಗದೇ ಇದ್ದಾಗ ಈ ರಸಂನ್ನು ಕುಡಿಯುವುದರಿಂದ ಬಾಯಿಗೆ ಹಿತವಾಗಿರುತ್ತದೆ. ಇದನ್ನು ಊಟದ ಜೊತೆಗೂ ಕೂಡ ಸೇವಿಸಬಹುದಾಗಿದೆ.

Rasam Recipe Do you have a bad taste in your mouth due to fever : If so, make rasam like this

Comments are closed.