Parag Agrawal: ಟ್ವಿಟರ್​ ಸಿಇಓ ಸ್ಥಾನದಿಂದ ಕೆಳಗಳಿದ ಪರಾಗ್​ ಅಗರ್​ವಾಲ್​ಗೆ ಸಿಗುವ ಮೊತ್ತವೆಷ್ಟು ಗೊತ್ತಾ

Parag Agrawal : ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಹಾಗೂ ಕೋಟ್ಯಾಧಿಪತಿ ಎಲಾನ್​ ಮಸ್ಕ್​​ ಟ್ವಿಟರ್​ ಸಂಸ್ಥೆಯನ್ನು 44 ಬಿಲಿಯನ್​​ ಡಾಲರ್​ಗೆ ಖರೀದಿ ಮಾಡಿದ್ದಾರೆ. ಟ್ವಿಟರ್​ ಸಂಸ್ಥೆಯನ್ನು ಸಂಪೂರ್ಣವಾಗಿ ತನ್ನ ತೆಕ್ಕೆಗೆ ಹಾಕಿಕೊಂಡ ಬಳಿಕ ಎಲಾನ್​ ಮಸ್ಕ್​​​ ಟ್ವಿಟರ್​ ಸಿಇಓ ಭಾರತೀಯ ಮೂಲದ ಪರಾಗ್​ ಅಗರ್​ವಾಲ್​ರನ್ನು ವಜಾಗೊಳಿಸಿದ್ದಾರೆ. ಪರಾಗ್​ ಅಗರ್​​ವಾಲ್​​ ಟ್ವಿಟರ್​​ನ ಸಿಇಓ ಸ್ಥಾನದಿಂದ ವಜಾಗೊಂಡಿದ್ದರೂ ಸಹ ಅವರು ಖಾಲಿ ಕೈನಲ್ಲಿ ಮರಳುವುದಿಲ್ಲ. ಟ್ವಿಟರ್​ ಸಂಸ್ಥೆಯ ಜೊತೆಗಿನ ಒಪ್ಪಂದದ ಭಾಗವಾಗಿ ಅಗರ್​ವಾಲ್​​ ಬರೋಬ್ಬರಿ 42 ಮಿಲಿಯನ್​ ಡಾಲರ್​ (34,64,01,300.00ರೂ)ಹಣವನ್ನು ಪಡೆಯಲಿದ್ದಾರೆ.


ಸಂಶೋಧನಾ ಸಂಸ್ಥೆ ಈಕ್ವಿಲರ್​ ನೀಡಿರುವ ವರದಿಯ ಪ್ರಕಾರ, ಪರಾಗ್​ ಅಗರ್​ವಾಲ್​ ಅಂದಾಜು 42 ಮಿಲಿಯನ್​ ಡಾ;ರ್​​ ಹಣವನ್ನು ಗಳಿಸಲಿದ್ದಾರೆ. ಇದು ಪರಾಗ್​ ಅಗರ್​ವಾಲ್​ರ ಒಂದು ವರ್ಷದ ಮೂಲ ವೇತನ ಹಾಗೂ ಎಲ್ಲಾ ಇಕ್ವಿಟಿ ಪ್ರಶಸ್ತಿಗಳ ವೇಗವರ್ದಿತ ನಿಯೋಜನೆಯನ್ನು ಹೊಂದಿದೆ.


ಸಹ ಸಂಸ್ಥಾಪಕ ಜಾಕ್​ ಡಾರ್ಸೆ ಅನಿರೀಕ್ಷಿತವಾಗಿ ಟ್ವಿಟರ್​ನ ಸಿಇಓ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಪರಾಗ್​ ಅಗರ್​ವಾಲ್​ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಟ್ವಿಟರ್​ ಸಿಇಓ ನೇಮಕಗೊಂಡಿದ್ದರು. ಯಾವಾಗ ಎಲಾನ್​ ಮಸ್ಕ್​​ ಟ್ವಿಟರ್​​ನ ಷೇರುದಾರನಾಗಿ ಎಂಟ್ರಿ ಕೊಟ್ಟರೋ ಅಂದಿನಿಂದ ಪರಾಗ್​​ ಅಗರ್​ವಾಲ್​​ರ ಸಿಇಓ ಸ್ಥಾನಕ್ಕೆ ಕುತ್ತು ಕಾದಿದೆ ಎಂಬ ಅನುಮಾನ ಮೂಡಿತ್ತು. ಇಬ್ಬರ ನಡುವಿನ ಸಂಬಂಧ ಅಷ್ಟೊಂದು ಉತ್ತಮವಾಗಿರಲಿಲ್ಲ. ಅಂದಹಾಗೆ ಇದ್ಯಾವುದು ಜನತೆಗೆ ಗುಟ್ಟಾಗಿ ಉಳಿದಿರಲಿಲ್ಲ. ಯಾವಾಗ ಎಲಾನ್​ ಮಸ್ಕ್​​ ಟ್ವಿಟರ್​ ಮಾಲೀಕರಾಗುತ್ತಾರೋ ಅಂದೇ ಪರಾಗ್​ ಅಗರ್​ವಾಲ್​​ ಟ್ವಿಟರ್​ನಿಂದ ಕಿಕೌಟ್​ ಆಗ್ತಾರೆ ಅನ್ನೋದು ಪ್ರತಿಯೊಬ್ಬರಿಗೂ ಖಚಿತವಾಗಿ ತಿಳಿದಿತ್ತು.


ಏಪ್ರಿಲ್​ 9ರಂದು ಎಲಾನ್​ ಮಸ್ಕ್​​ ಟ್ವಿಟರ್​ ಸಾಯುತ್ತಿದೆ ಎಂದು ಹೇಳಿದ ಬಳಿಕ ಪರಾಗ್​ ಅಗರವಾಲ್​ ಹಾಗೂ ಎಲಾನ್ ಮಸ್ಕ್​ ನಡುವೆ ಶೀತಲ ಸಮರ ಆರಂಭಗೊಂಡಿತ್ತು. ಇದಕ್ಕೆ ಪ್ರತಿಕ್ರಯಿಸಿದ್ದ ಪರಾಗ್​ ಅಗರ್​ವಾಲ್​ ನೀವು ಟ್ವೀಟ್​​​ ಮಾಡಲು ಸ್ವತಂತ್ರರು. ಟ್ವಿಟರ್​ ಸಾಯುತ್ತಿದ್ದೇಯೇ..? ಪ್ರಸ್ತುತ ಸಂದರ್ಭದಲ್ಲಿ ಟ್ವಿಟರ್ ಅನ್ನು ಉತ್ತಮಗೊಳಿಸಲು ಇದು ನನಗೆ ಸಹಾಯ ಮಾಡುತ್ತಿಲ್ಲ ಎಂದು ಹೇಳುವುದು ನನ್ನ ಜವಾಬ್ದಾರಿಯಾಗಿದೆ. ಇದಕ್ಕೆ ಟಾಂಗ್​ ನೀಡಿದ್ದ ಮಸ್ಕ್​ ಕೂಡ ಟಾಂಗ್​ ನೀಡಿದ್ದರು.

ಇದನ್ನು ಓದಿ : Head Bush issue solved: ‘ಹೆಡ್ ಬುಶ್’ ವಿವಾದ ಅಂತ್ಯ; ಕ್ಷಮೆ ಕೋರಿ ಆಕ್ಷೇಪಾರ್ಹ ಪದ ತೆಗೆಯಲು ಒಪ್ಪಿದ ಚಿತ್ರತಂಡ

ಇದನ್ನೂ ಓದಿ : 13 year old Girl Dies Heart Attack: ಕುಂದಾಪುರ : ಓದುತ್ತಿದ್ದಾಗ 13 ವರ್ಷದ ಬಾಲಕಿ ಹೃದಯಾಘಾತದಿಂದ ಸಾವು

Parag Agrawal likely to receive $42 million following exit from Twitter: Report

Comments are closed.