Call for college bandh: ಸರಕಾರದ ವಿರುದ್ದ ಸಿಡಿದೆದ್ದ ವಿದ್ಯಾರ್ಥಿಗಳ : ರಾಜ್ಯದಾದ್ಯಂತ ಕಾಲೇಜು ಬಂದ್ ಗೆ ಕರೆ

ಬೆಂಗಳೂರು: (Call for college bandh) ರಾಜ್ಯದ ಸರಕಾರಿ, ಅನುದಾನಿತ ಹಾಗೂ ಸಂಯೋಜಿತ ಕಾಲೇಜ್ ಬಂದ್ ಗೆ ವಿದ್ಯಾರ್ಥಿ ಸಂಘಟನೆ ಕರೆ ನೀಡಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿ, ಪದವಿ ಕಾಲೇಜುಗಳು ಬಂದ್ ಮಾಡಲು ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕ ರಾಷ್ಟ್ರೀಯ ವಿದ್ಯಾರ್ಥಿ ಸಂಘ ಕರೆ ಕೊಟ್ಟಿದೆ. ವಿದ್ಯಾರ್ಥಿಗಳಿಗೆ ಸರಕಾರದಿಂದ ಆಗುತ್ತಿರುವ ಕೆಲವು ಸಮಸ್ಯೆಗಳನ್ನು ಖಂಡಿಸಿ ವಿದ್ಯಾರ್ಥಿ ಸಂಘಟನೆಗಳು ಇಂದು ಬೀದಿಗಿಳಿದಿದ್ದು, ಯಾವುದೇ ಕಾರಣಕ್ಕೂ ಕಾಲೇಜುಗಳನ್ನು ಆರಂಭಗೊಳಿಸುವಂತಿಲ್ಲ ಎಂದು ಎನ್‌ಎಸ್‌ಯುಐ ಹೇಳಿಕೊಂಡಿದೆ. ವಿದ್ಯಾರ್ಥಿಗಳು ಸರಕಾರದ ಮುಂದೆ ಹಲವು ಬೇಡಿಕೆಗಳನ್ನಿಟ್ಟಿದ್ದು, ರಾಜ್ಯಾದ್ಯಂತ ಕಾಲೇಜುಗಳ ಬಂದ್‌ ಗೆ ಕರೆ (Call for college bandh) ಕೊಟ್ಟಿದೆ.

ವಿದ್ಯಾರ್ಥಿಗಳ ಸಮಸ್ಯೆಗಳು
*ವಿಶ್ವವಿದ್ಯಾಲಯಗಳಲ್ಲಿ ಪರೀಕ್ಷೆ ಫಲಿತಾಂಶದಲ್ಲಿ ವಿಳಂಬ
*ರಾಷ್ಟ್ರೀಯ ಶೀಕ್ಷಣ ನೀತಿಯ ಅಸಂಘಟಿತ ಮತ್ತು ಅವೈಜ್ಞಾನಿಕ ಅನುಷ್ಠಾನ
*ವಿದ್ಯಾರ್ಥಿವೇತನ ಮಂಜೂರು ವಿಳಂಬ
*ಬಸ್‌ ಸಾರಿಗೆ ಸಮಸ್ಯೆ
*ಸರಕಾರಿ ಕಾಲೇಜು ಶುಲ್ಕ ಹೆಚ್ಚಳ

ವಿದ್ಯಾರ್ಥಿಗಳು ಸರಕಾರದ ಮುಂದಿಟ್ಟಿರುವ ಬೇಡಿಕೆಗಳು ಇಂತಿವೆ:
*ಸರಿಯಾದ ಸಮಯಕ್ಕೆ ಫಲಿತಾಂಶ ನೀಡಬೇಕು
*ವಿದ್ಯಾರ್ಥಿ ವೇತನ ಕೂಡಲೇ ಬಿಡುಗಡೆ ಮಾಡಬೇಕು
*ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡಬೇಕು
*ಸರಕಾರಿ ಕಾಲೇಜು ಶುಲ್ಕ ಕಡಿಮೆ ಮಾಡಬೇಕು

ಈ ಎಲ್ಲಾ ಬೇಡಿಕೆಗಳನ್ನು ಸರಕಾರದ ಮುಂದಿಟ್ಟು, ಮೂರು ಸಾವಿರ ಕಾಲೇಜುಗಳಿಗೆ ಈಗಾಗಲೇ ಬಂದ್‌ ಗೆ ಕರೆ ಕೊಟ್ಟಿದೆ. ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡದೆ ಸತಾಯಿಸುತ್ತಿದ್ದು, ಅಂಕಪಟ್ಟಿ ಬಾರದ ಹಿನ್ನಲೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಲು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಹಲವು ವಿದ್ಯಾರ್ಥಿಗಳು ವಿದ್ಯಾರ್ಥಿವೇತನವನ್ನೆ ತಮ್ಮ ವಿದ್ಯಾಭ್ಯಾಸಕ್ಕಾಗಿ ಬಳಸಿಕೊಳ್ಳುತ್ತಿದ್ದು, ಅಂತಹ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗುತ್ತಿದೆ. ಮೌಲ್ಯಮಾಪನವನ್ನು ಸೂಕ್ತ ಸಮಯದಲ್ಲಿ ನಡೆಸದೇ ಇರುವುದು, ಮರು ಪರೀಕ್ಷೆ ಹಾಗೂ ಮರುಮೌಲ್ಯಮಾಪನಗಳಲ್ಲಿ ಗೊಂದಲ, ಮರು ಮೌಲ್ಯಮಾಪನದಲ್ಲಿ ಶುಲ್ಕ ಮರುಪಾವತಿಗೆ ನಿಗದಿ ಪಡಿಸಿದಷ್ಟು ಅಂಕ ಬಂದರೂ ಸಹ ಕಟ್ಟಿದ ಶುಲ್ಕವು ಮರುಪಾವತಿಯಾಗಿಲ್ಲ. ಇದರ ಜೊತೆಗೆ ಎನ್.ಇ.ಪಿ ಜಾರಿಯಾದ ನಂತರ ಮೊದಲನೇ ವರ್ಷಕ್ಕೆ ಸೇರ್ಪಡೆಯಾದ ವಿದ್ಯಾರ್ಥಿಗಳು ಪ್ರಸ್ತುತ ದ್ವಿತೀಯ ವರ್ಷದಲ್ಲಿ ಇದ್ದರೂ ಕೂಡ ಪ್ರಥಮ ಹಾಗೂ ದ್ವಿತೀಯ ಸೆಮಿಸ್ಟರ್ ನ ಮೌಲ್ಯಮಾಪನ ಈವರೆಗೂ ನಡೆದಿಲ್ಲ. ಆದರೂ ಕೂಡ ತೃತೀಯ ಸೆಮಿಸ್ಟರ್ ನಲ್ಲಿರುವ ವಿದ್ಯಾರ್ಥಿಗಳಿಗೆ ಈ ಹಿಂದಿನ ಎರಡು ಸೆಮಿಸ್ಟರ್ ನ ಫಲಿತಾಂಶ ನೀಡದಿದ್ದರೂ ಮೂರನೇ ಸೆಮಿಸ್ಟರ್ ನ ಪರೀಕ್ಷಾ ಶುಲ್ಕವನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕಾಲೇಜುಗಳಿಗೆ ಹೋಗಲು ಸರಿಯಾದ ಬಸ್‌ ವ್ಯವಸ್ಥೆ ಕೂಡ ಇಲ್ಲ. ಹೀಗಿದ್ದಾಗ ಬಡವರು, ಹಿಂದುಳಿದ ಮಕ್ಕಳು ಓದುವುದು ಹೇಗೆ ಎಂದು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕೀರ್ತಿ ಗಣೇಶ್‌ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : UG-exam result 2021-22: ಡಿಸೆಂಬರ್‌ ಅಂತ್ಯದೊಳಗೆ ನಾಲ್ಕನೇ ಸೆಮಿಸ್ಟರ್‌ ಯುಜಿ ಪರೀಕ್ಷೆಯ ಫಲಿತಾಂಶ ಪ್ರಕಟ

ಇದನ್ನೂ ಓದಿ : Students protest against board: ಅಂಕಪಟ್ಟಿಯಲ್ಲಿ ವಿಳಂಬ: ಮಂಗಳೂರು ವಿವಿ ವಿರುದ್ದ ಬೀದಿಗಿಳಿದ ವಿದ್ಯಾರ್ಥಿಗಳು

ಇನ್ನು ಬಂದ್ ಕರೆ ನೀಡಿರುವ ನಡುವೆಯೂ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ಬೆಳಗ್ಗೆ ಕಾಲೇಜಿನಲ್ಲಿ ತರಗತಿಗಳು ಆರಂಭಗೊಂಡಿವೆ. ಹೀಗಾಗಿ ಎನ್​ಎಸ್​ಯುಐ ಕಾಲೇಜು ಒಳಗೆ ಪ್ರವೇಶಿಸಲು ಮುಂದಾಗಿದೆ. ಕಳೆದು ಎರಡು ಮೂರು ದಿನಗಳಿಂದ ಎನ್ಎಸ್​ಯುಐ ಸಂಘಟನೆ ಬಂದ್ ಕುರಿತಾದ ಭಿತ್ತಿಪತ್ರಗಳನ್ನು ವಿತರಣೆ ಮಾಡುವ ಕೆಲಸ ಮಾಡಿದೆ. ಆದರೆ ಬಂದ್ ಬಗ್ಗೆ ಸ್ಪಷ್ಟ ಚಿತ್ರಣ ಸಿಗದ ಹಿನ್ನೆಲೆ ಕೆಲವು ಕಡೆ ವಿದ್ಯಾರ್ಥಿಗಳು ಕಾಲೇಜಿನತ್ತ ಆಗಮಿಸುತ್ತಿದ್ದಾರೆ.

(Call for college bandh) The student organization has called for a state government, aided and affiliated college bandh. The National Student Union, the student body of the Congress, has called for the closure of universities and graduate colleges demanding the fulfillment of various demands.

Comments are closed.