Fire disaster-6 died: ಮನೆಗೆ ಬೆಂಕಿ: ಒಂದೇ ಕುಟುಂಬದ 6 ಮಂದಿ ದುರ್ಮರಣ

ತೆಲಂಗಾಣ: (Fire disaster-6 died) ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಒಂದೇ ಕುಟುಂಬದ 6 ಮಂದಿ ಸಜೀವ ದಹನವಾಗಿರುವ ಘಟನೆ ತೆಲಂಗಾಣದ ಮಂಚರ್ಯಾಲ ಜಿಲ್ಲೆಯಲ್ಲಿ ಶನಿವಾರ ನಡೆದಿದೆ. ಅಪಘಾತದಲ್ಲಿ ಮನೆ ಮಾಲೀಕ ಶಿವಯ್ಯ (50 ವರ್ಷ), ಅವರ ಪತ್ನಿ ಪದ್ಮಾ (45 ವರ್ಷ), ಪದ್ಮಾ ಅವರ ಅಕ್ಕನ ಮಗಳು ಮೌನಿಕಾ (23 ವರ್ಷ) ಮತ್ತು ಅವರ ಇಬ್ಬರು ಪುತ್ರಿಯರು ಸಾವನ್ನಪ್ಪಿದ್ದಾರೆ.

ರಾತ್ರಿ 12:00 ರಿಂದ 12:30 ರ ನಡುವೆ ಅವರ ಮನೆಯಲ್ಲಿ ದೊಡ್ಡ ಬೆಂಕಿ(Fire disaster-6 died) ಹೊತ್ತಿಕೊಂಡಿದ್ದು, ಇದನ್ನು ನೆರೆಹೊರೆಯವರು ಗಮನಿಸಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಪೊಲೀಸರು ಬರುವಷ್ಟರೊಳಗೆ ಇಡೀ ಮನಗೆ ಸಂಪೂರ್ಣವಾಗಿ ಬೆಂಕಿ ಹೊತ್ತಿಕೊಂಡಿತ್ತು.

ಮಂದಮರಿ ಸರ್ಕಲ್ ಇನ್ಸ್‌ಪೆಕ್ಟರ್ ಆಫ್ ಪೊಲೀಸ್ ಪ್ರಮೋದ್ ಕುಮಾರ್ ಮಾತನಾಡಿ, ತೆಲಂಗಾಣದ ಮಂದಮರ್ರಿ ಮಂಡಲದ ವೆಂಕಟಾಪುರದ ಮನೆಯಲ್ಲಿ ಶಿವಯ್ಯ ಮತ್ತು ಅವರ ಪತ್ನಿ ಪದ್ಮಾ ವಾಸವಾಗಿದ್ದರು. ಎರಡು ದಿನಗಳ ಹಿಂದೆ ಪದ್ಮಾ ಅವರ ಸೊಸೆ ಮೌನಿಕಾ, ಇಬ್ಬರು ಹೆಣ್ಣುಮಕ್ಕಳು ಮತ್ತು ಶಾಂತಯ್ಯ ಎಂಬ ಮಹಿಳೆ ಮನೆಗೆ ಬಂದಿದ್ದು ಅಲ್ಲಿಯೇ ವಾಸವಾಗಿದ್ದರು ಎನ್ನಲಾಗಿದೆ.

ರಾತ್ರಿ 12:00 ರಿಂದ 12:30 ರ ನಡುವೆ ಅವರ ಮನೆಯಲ್ಲಿ ದೊಡ್ಡ ಬೆಂಕಿ ಹೊತ್ತಿಕೊಂಡಿರುವುದನ್ನು ನೆರೆಹೊರೆಯವರು ಗಮನಿಸಿದ್ದಾರೆ ಎಂದು ಕುಮಾರ್ ಹೇಳಿದರು. ಕೂಡಲೇ ಗ್ರಾಮಸ್ಥರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ತಲುಪುವಷ್ಟರಲ್ಲಿ ಇಡೀ ಮನೆಗೆ ಬೆಂಕಿ ಬಿದ್ದಿತ್ತು. ಮನೆಯಲ್ಲಿದ್ದ ಒಟ್ಟು ಆರು ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್‌ ಅಧಿಕಾರಿ ಪ್ರಮೋದ್‌ ಕುಮಾರ್‌ ತಿಳಿಸಿದ್ದಾರೆ.

ಇದನ್ನೂ ಓದಿ : Assault on student: ವಿದ್ಯಾರ್ಥಿನಿಗೆ ಕತ್ತರಿಯಿಂದ ಹಲ್ಲೆ ನಡೆಸಿ, ಶಾಲಾ ಮಹಡಿಯಿಂದ ಎಸೆದ ಶಿಕ್ಷಕಿ ಅರೆಸ್ಟ್

ಇದನ್ನೂ ಓದಿ : 5 year boy died: ನೀರಿನ ಸಂಪ್‌ ಗೆ ಬಿದ್ದು ಐದು ವರ್ಷದ ಬಾಲಕ ಸಾವು

ಏಕಾಏಕಿ ಬಂಏಕಿ ಹೊತ್ತಿಕೊಂಡಿದ್ದು, ಬೆಂಕಿ ಆಹುತಿಗೆ ಕಾರಣಗಳೇನು ಎಂದು ತಿಳಿದು ಬಂದಿಲ್ಲ. ಬೆಂಕಿ ಹೊತ್ತಿಕೊಳ್ಳಲು ಕಾರಣಗಳೇನು ಎಂದು ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

(Fire disaster-6 died) A fire broke out in a house and 6 members of the same family were burnt alive in Mancharyala district of Telangana on Saturday. The house owner Shivayya (50 years), his wife Padma (45 years), Padma’s elder daughter Mounika (23 years) and their two daughters died in the accident.

Comments are closed.