CBSE Board Exams 2023 : ಮುಂದಿನ ಶೈಕ್ಷಣಿಕ ವರ್ಷದಿಂದ ಸಿಬಿಎಸ್​ಇ ಬೋರ್ಡ್​ ಪರೀಕ್ಷೆಯಲ್ಲಾಗಲಿದೆ ಈ ಬಹುಮುಖ್ಯ ಬದಲಾವಣೆ

CBSE Board Exams 2023 : ಸಿಬಿಎಸ್​ಇ ಬೋರ್ಡ್​ನ 10 ಹಾಗೂ 12ನೇ ತರಗತಿಯ ವಿದ್ಯಾರ್ಥಿಗಳು 2022ರ ಫಲಿತಾಂಶಕ್ಕೆ ಕುತೂಹಲದಿಂದ ಕಾಯುತ್ತಿರುವ ನಡುವೆಯೇ ಮಂಡಳಿಯು 2023ನೇ ಸಿಬಿಎಸ್​ಇ ಬೋರ್ಡ್​ ಪರೀಕ್ಷೆಗಳಲ್ಲಿ ಪ್ರಮುಖ ಬದಲಾವಣೆಗಳನ್ನು ತರಲು ನಿರ್ಧರಿಸಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಬಹು ಮುಖ್ಯ ಬದಲಾವಣೆಯನ್ನು ತರಲು ಮಂಡಳಿಯು ಯೋಚನೆ ಮಾಡುತ್ತಿದೆ. ಈ ಬದಲಾವಣೆಗಳು ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿ ಇರಲಿದೆ ಎಂದು ಮಂಡಳಿಯು ತಿಳಿಸಿದೆ.

ಸಿಬಿಎಸ್​​ಇ ಕಾರ್ಯದರ್ಶಿ ಅನುರಾಗ್​​ ತ್ರಿಪಾಠಿ ಈ ವಿಚಾರವಾಗಿ ಮಾಹಿತಿ ನೀಡಿದ್ದು ಕೆಲವು ಶಾಲೆಗಳಲ್ಲಿ ಈಗಾಗಲೇ ಹಲವು ಬದಲಾವಣೆಗಳನ್ನು ತರಲಾಗಿದೆ. ಈ ಶಾಲೆಗಳಲ್ಲಿ ಸಿಗುವ ಅನುಭವದ ಆಧಾರದ ಮೇಲೆ ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ಲಾ ಶಾಲೆಗಳು ಈ ಬದಲಾವಣೆಯನ್ನು ಅನುಕರಣೆ ಮಾಡಲಿವೆ ಎಂದು ಹೇಳಿದರು.

ಎಲ್ಲಾ ವಿಷಯಗಳಿಗೆ 20% ಆಂತರಿಕ ಮೌಲ್ಯಮಾಪನ
ಕೇವಲ ಮೂರು ಗಂಟೆ ಅವಧಿಯ ಪರೀಕ್ಷೆಯಿಂದ ಒಬ್ಬ ವಿದ್ಯಾರ್ಥಿಯ ಸಾಮರ್ಥ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ. ಮೌಲ್ಯಮಾಪನ ಎನ್ನುವುದು ಒಂದು ವರ್ಷಗಳ ಅವಧಿಯ ಒಂದು ಪ್ರಕ್ರಿಯೆ ಆಗಬೇಕು. ಹೀಗಾಗಿ ಎಲ್ಲಾ ವಿಷಯಗಳಿಗೆ 20 ಪ್ರತಿಶತ ಆಂತರಿಕ ಮೌಲ್ಯಮಾಪನದ ಅಂಕವನ್ನೂ ಪರಿಗಣಿಸಲಾಗುತ್ತದೆ ಎಂದು ಅನುರಾಗ್​ ತ್ರಿಪಾಠಿ ಹೇಳಿದ್ದಾರೆ .ಈ ವಿಚಾರವಾಗಿ ಮತ್ತಷ್ಟು ವಿವರಣೆ ನೀಡಿದ ಅವರು ಪ್ರಾಯೋಗಿಕ ಪರೀಕ್ಷೆಗಳಿಲ್ಲದ ಪತ್ರಿಕೆಗಳಲ್ಲಿ 20% ಆಂತರಿಕ ಮೌಲ್ಯಮಾಪನಗಳನ್ನು ನಡೆಸಲಾಗುತ್ತದೆ ಎಂದಿದ್ದಾರೆ .


ಹೆಚ್ಚಿನ ಆಯ್ಕೆಗಳಿಗಾಗಿ 33% ಹೆಚ್ಚಿನ ಪ್ರಶ್ನೆಗಳು
ಇನ್ನು ಇದರ ಜೊತೆಯಲ್ಲಿ ಪ್ರಶ್ನೆ ಪತ್ರಿಕೆಗಳಲ್ಲಿ 2 ರೀತಿಯ ರಚನಾತ್ಮಕ ಬದಲಾವಣೆಗಳನ್ನು ಮಾಡುವ ಬಗ್ಗೆ ಮಾತನಾಡಿದ ತ್ರಿಪಾಠಿ, ಮೊದಲ ಬದಲಾವಣೆಯ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಯನ್ನು ಹೆಚ್ಚಿನ ಆಯ್ಕೆಗಳನ್ನು ನೀಡುವ ಸಲುವಾಗಿ ಪ್ರಶ್ನೆಗಳ ಸಂಖ್ಯೆಯಲ್ಲಿ 33 ಪ್ರತಿಶತ ಏರಿಕೆ ಮಾಡಲಾಗುತ್ತದೆ. ಇದರಿಂದ ಪ್ರಶ್ನೆ ಪತ್ರಿಕೆ ಹಿಂದೆಂದಿಗಿಂತ ಉದ್ದವಾಗಿ ಇರಲಿದೆ. ಅಲ್ಲದೇ ಇದರಿಂದ ವಿದ್ಯಾರ್ಥಿಗಳಿಗೆ ಬಹು ಆಯ್ಕೆ ಸಿಕ್ಕಂತಾಗುತ್ತದೆ ಎಂದು ಹೇಳಿದರು.


ವಿಮರ್ಶಾತ್ಮಕ ಪ್ರಶ್ನೆಗಳಿಗೆ ಹೆಚ್ಚು ಆದ್ಯತೆ
ಮುಂದಿನ ಶೈಕ್ಷಣಿಕ ವರ್ಷದ ಅವಧಿಯ ಪ್ರಶ್ನೆ ಪತ್ರಿಕೆಗಳಲ್ಲಿ ಕೌಶಲ್ಯ ಆಧಾರಿತ ಹಾಗೂ ಸಾಮಾರ್ಥ್ಯ ಆಧಾರಿತ ಪ್ರಶ್ನೆಗಳಿಗೆ ಹೆಚ್ಚು ಆದ್ಯತೆಯನ್ನು ನೀಡಲಾಗುತ್ತದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಹೆಚ್ಚು ವಿಮರ್ಶಾತ್ಮಕವಾಗಿ ಯೋಚನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

3, 5 ಮತ್ತು 8 ನೇ ತರಗತಿಗಳ ವಿದ್ಯಾರ್ಥಿಗಳ ಮೌಲ್ಯಮಾಪನ ಸಮೀಕ್ಷೆ
ಇನ್ನೊಂದು ಪ್ರಮುಖ ಬದಲಾವಣೆಯ ಬಗ್ಗೆ ಮಾಹಿತಿ ನೀಡಿದ ಅನುರಾಗ್​ ತ್ರಿಪಾಠಿ, ಸಿಬಿಎಸ್​​ಇ ಮೌಲ್ಯಮಾಪನ ಪ್ರಕ್ರಿಯೆಯು 3,5 ಹಾಗೂ 8ನೇ ತರಗತಿಯ ವಿದ್ಯಾರ್ಥಿಗಳ ಮೌಲ್ಯಮಾಪನವನ್ನು ಆಧರಿಸಿದೆ ಎಂದು ಮಾಹಿತಿ ನೀಡಿದ್ದಾರೆ. 3,5 ಹಾಗೂ 8ನೇ ತರಗತಿಗಳಲ್ಲಿ ಈ ವಿದ್ಯಾರ್ಥಿಗಳ ಮೌಲ್ಯಮಾಪನ ಸಮೀಕ್ಷೆಯನ್ನು ಸಿಬಿಎಸ್​ಇ ಮಾಡಲಿದೆ. ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಗಳಿಸುವ ಅಂಕಗಳು ಸಾಮಾನ್ಯ ಪರೀಕ್ಷೆಯಂತೆ ಇರುವುದಿಲ್ಲ. ಈ ಪರೀಕ್ಷೆಗಳ ಮೂಲಕ ನಾವು ಮಗುವನ್ನ ಬುದ್ಧಿ ಮಟ್ಟ ಹಾಗೂ ಆತನ ಬುದ್ಧಿ ಎಷ್ಟು ಸುಧಾರಿಸಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು ಎಂದು ಹೇಳಿದರು.


ವಿದ್ಯಾರ್ಥಿಗಳಿಗೆ ಸಮಗ್ರ ಮೌಲ್ಯಮಾಪನ ಕಾರ್ಡ್​ಗಳು
ಈ ಬಗ್ಗೆ ಮತ್ತಷ್ಟು ವಿವರಣೆಗಳನ್ನು ನೀಡಿದ ತ್ರಿಪಾಢಿ, ಸಿಬಿಎಸ್​ಇ ವಿದ್ಯಾರ್ಥಿಗಳಿಗೆ ಸಮಗ್ರ ಮೌಲ್ಯಮಾಪನ ಕಾರ್ಡ್​ಗಳನ್ನು ನೀಡಲು ಯೋಚಿಸಿದ್ದೇವೆ. ಮಂಡಳಿಯು ಮೌಲ್ಯಮಾಪನ ಕಾರ್ಡ್​ಗಳನ್ನು ರಚಿಸಲು ಆರಂಭಿಸಿದೆ. ಪ್ರಾಯೋಗಿಕ ಹಂತವಾಗಿ ಕೆಲವು ಶಾಲೆಗಳಲ್ಲಿ ಇದು ಜಾರಿಗೆ ಬರಲಿದೆ ಎಂದು ಹೇಳಿದರು.

ಇದನ್ನು ಓದಿ : Sushmita Sen : ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಜೊತೆ ಮಾಜಿ ಐಪಿಎಲ್ ಬಾಸ್ ಲಲಿತ್ ಮೋದಿ ಡೇಟಿಂಗ್

ಇದನ್ನೂ ಓದಿ : Virat Kohli Dropped : ವಿಂಡೀಸ್ ಟಿ20 ಸರಣಿಗೆ ಟೀಮ್ ಇಂಡಿಯಾ ಪ್ರಕಟ ; ಇದೇ ಮೊದಲ ಬಾರಿ ಭಾರತ ತಂಡದಿಂದ ವಿರಾಟ್ ಕೊಹ್ಲಿ ಡ್ರಾಪ್

CBSE Board Exams 2023 Latest Update: CBSE Secretary Announces 5 Major Changes In Assessment Process From New Academic Year

Comments are closed.