CBSE declares Class 10 results : ಸಿಬಿಎಸ್​ಇ 10ನೇ ತರಗತಿ ಫಲಿತಾಂಶ ಪ್ರಕಟ : ಫಲಿತಾಂಶ ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ

CBSE declares Class 10 results : ಇಂದು ಬೆಳಗ್ಗೆಯಷ್ಟೇ 12ನೇ ತರಗತಿ ಫಲಿತಾಂಶವನ್ನು ಪ್ರಕಟಿಸಿದ್ದ ಸೆಂಟ್ರಲ್​ ಬೋರ್ಡ್ ಆಫ್​ ಎಜುಕೇಷನ್​​ 10ನೇ ತರಗತಿ ವಿದ್ಯಾರ್ಥಿಗಳ ಬೋರ್ಡ್​ ಪರೀಕ್ಷೆ ಫಲಿತಾಂಶವನ್ನೂ ಪ್ರಕಟಿಸಿದೆ. ಕೊನೆಯ ಬಾರಿಗೆ 2019ರಲ್ಲಿ ಎಲ್ಲಾ ವಿಷಯಗಳ ಬೋರ್ಡ್ ಪರೀಕ್ಷೆ ನಡೆದಿತ್ತು. ಈ ವರ್ಷದಂದು ಶೇಕಡಾ 94.4ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 2019ಕ್ಕೆ ಹೋಲಿಕೆ ಮಾಡಿದರೆ ಒಟ್ಟಾರೆ ಫಲಿತಾಂಶದಲ್ಲಿ 3.3 ಪ್ರತಿಶತ ಏರಿಕೆ ಕಂಡು ಬಂದಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು https://cbseresults.nic.in ವೆಬ್​ಸೈಟ್​ ಮೂಲಕ ವೀಕ್ಷಿಸಬಹುದಾಗಿದೆ.

ಈ ವರ್ಷ ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಗೆ 20,93,978 ವಿದ್ಯಾರ್ಥಿಗಳು ಹಾಜರಾಗಿದ್ದು ಇವರಲ್ಲಿ 19,76,668 ಮಂದಿ ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಉತ್ತೀರ್ಣ ಶೇಕಡಾ 94.4 ರಷ್ಟು ದಾಖಲಾಗಿದೆ. ಕಳೆದ ವರ್ಷ ಶೇ.99.04ರಷ್ಟು ಉತ್ತೀರ್ಣರಾಗಿದ್ದರು. ಆದಾಗ್ಯೂ, ದೇಶದಲ್ಲಿ ಎರಡನೇ ಕೋವಿಡ್ -19 ಅಲೆಯ ಕಾರಣದಿಂದಾಗಿ ಕಳೆದ ವರ್ಷ ಯಾವುದೇ ಬೋರ್ಡ್ ಪರೀಕ್ಷೆಗಳು ನಡೆದಿರಲಿಲ್ಲ.

ಕಳೆದ ವರ್ಷದಂತೆ ಈ ರ್ವ ಕೂಡ ಬಾಲಕಿಯರೇ ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆಗೆ ಹಾಜರಾದವರಲ್ಲಿ 95.21 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದರೆ, 93.8 ಪ್ರತಿಶತ ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಯಲ್ಲಿ ಪಾಸ್​ ಆಗಿದ್ದಾರೆ. ಇನ್ನುಳಿದಂತೆ ತೃತೀಯ ಲಿಂಗಿ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಶೇಕಡಾ 90ರಷ್ಟಿದೆ. ಕಳೆದ ವರ್ಷದ ತೃತೀಯ ಲಿಂಗಿ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಶೇಕಡಾ 100 ಇತ್ತು.

ಕಳೆದ ವರ್ಷ 10 ಹಾಗೂ 11ನೇ ತರಗತಿಗಳ ಅಂತಿಮ ಪರೀಕ್ಷೆ ಹಾಗೂ 12ನೇ ತರಗತಿಯ ಮಧ್ಯ ವರ್ಷದ ಪರೀಕ್ಷೆಗಳ ಆಧಾರದ ಮೇಲೆ ವಿದ್ಯಾರ್ಥಿಗಳ ಮೌಲ್ಯಮಾಪನವನ್ನು ಮಾಡಲಾಗಿತ್ತು. ಸಿಬಿಎಸ್​ಇ ನಿಗದಿಪಡಿಸಿದ್ದ 30-30-40 ಸೂತ್ರವನ್ನು ಬಳಸಿಕೊಂಡು ಶಾಲೆಗಳು ಅಂತಿಮ ಸ್ಕೋರ್​ ರಚಿಸಿದ್ದವು. ಆದರೆ ಈ ಬಾರಿ ಸಿಬಿಎಸ್​ಇ ಬೋರ್ಡ್ ಪರೀಕ್ಷೆಗಳನ್ನು ನಡೆಸಿತ್ತು.

ಇದನ್ನು ಓದಿ : Mysore Tourist Places: ಮೈಸೂರಿನ ಈ ಅದ್ಭುತ ಪ್ರವಾಸ ತಾಣಗಳನ್ನ ಮಿಸ್ ಮಾಡದೇ ಭೇಟಿ ನೀಡಿ

ಇದನ್ನೂ ಓದಿ : CBSE class 12 Results declared : CBSE 12 ನೇ ತರಗತಿ ಫಲಿತಾಂಶ 2022 ಪ್ರಕಟ : ಫಲಿತಾಂಶ ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ

CBSE declares Class 10 results, 94.4% students pass

Comments are closed.