CBSE Result : 40:30:30 ಆಧಾರದಲ್ಲಿ ಪಾಸ್ : ಫಲಿತಾಂಶಕ್ಕೆ ಫಾರ್ಮುಲ ಸಿದ್ದಪಡಿಸಿದ ಸಿಬಿಎಸ್ಇ

ನವದೆಹಲಿ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಸಿಬಿಎಸ್ಇ 12ನೇ ತರಗತಿ ಫಲಿತಾಂಶ ಪ್ರಕಟಿಸಲು ಫಾರ್ಮುಲ ಸಿದ್ದ ಪಡಿಸಿದ್ದು, ಇಂದು ಸಿಬಿಎಸ್ಇ ಬೋರ್ಡ್ ಸುಪ್ರೀಂ ಕೋರ್ಟ್ ಗೆ ಈ ಕುರಿತು ‌ಮಾಹಿತಿ‌ ನೀಡಲಿದೆ.

ಸಿಬಿಎಸ್ಇ ಬೋರ್ಡ್ ಕೇಂದ್ರ ಸರಕಾರದ ಸಲಹೆಯ ಮೇರೆಗೆ 12ನೇ ತರಗತಿ ಪರೀಕ್ಷೆ ನಡೆದಿರಲು‌ ತೀರ್ಮಾನಕ್ಕೆ ಬಂದಿತ್ತು. ಪರೀಕ್ಷೆ ರದ್ದು ಮಾಡಿದ ಬೆನ್ನಲ್ಲೇ ಫಲಿತಾಂಶ ಪ್ರಕಟದ ಕುರಿತು ವಿವಾದ ತಲೆದೋರಿತ್ತು. ಇದೀಗ ಸಿಬಿಎಸ್ಇ ಬೋರ್ಡ್ 13 ಮಂದಿ ಶಿಕ್ಷಣ ತಜ್ಞರ ಸಮಿತಿ 12 ನೇ ತರಗತಿ ಫಲಿತಾಂಶಕ್ಕೆ ಫಾರ್ಮುಲವೊಂದನ್ನು ಸಿದ್ದಪಡಿಸಿದ್ದಾರೆ.

12ನೇ ತರಗತಿಯ ಫಲಿತಾಂಶಕ್ಕೆ 10, 11 ಹಾಗೂ 12 ನೇ ತರಗತಿಯ ಅಂಕಗಳನ್ನು ಪರಿಗಣಿಸಲು ಮುಂದಾಗಿದೆ. ಈ ಪೈಕಿ 12 ನೇ ತರಗತಿ ಯಲ್ಲಿ ಪ್ರಿಪರೇಟರಿಯಲ್ಲಿ ಅಂಕದಲ್ಲಿ 40 ಅಂಕ, 11ನೇ ತರಗತಿಯಲ್ಲಿ ಪಡೆದ ಅಂಕದಲ್ಲಿ 30 ಹಾಗೂ 10 ನೇ‌ ತರಗತಿಯಲ್ಲಿ ಪಡೆದ ಅಂಕದ ಪೈಕಿ 30 ಅಂಕಗಳನ್ನು ಪರಿಗಣಿಸಲು ಬೋರ್ಡ್ ನಿರ್ಧಾರ ಮಾಡಿದ್ದು, 40:30:30 ಅನುಪಾತದಲ್ಲಿ ಫಲಿತಾಂಶ ಪ್ರಕಟ ವಾಗಲಿದೆ. ಈ ಕುರಿತು ಮಾಹಿತಿಯನ್ನು ಸಿಬಿಎಸ್ಇ ಬೋರ್ಡ್ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಲಿದೆ. ಸುಪ್ರೀಂ ಒಪ್ಪಿಗೆ ಕೊಟ್ಟ ಕೂಡಲೇ ಫಲಿತಾಂಶ ಪ್ರಕಟಿಸಲಿದೆ.

Comments are closed.