CBSE Term 2 Exam : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜ್ಯೂಕೇಷನ್ 10 ಹಾಗೂ 12ನೇ ತರಗತಿಯ ಟಾಪರ್ಗಳ ಉತ್ತರ ಪತ್ರಿಕೆಗಳನ್ನು ಫಲಿತಾಂಶ ಪ್ರಕಟಣೆಯ ಬಳಿಕ ಆನ್ಲೈನ್ನಲ್ಲಿ ಅಪ್ಲೋಡ್ ಮಾಡಲು ಯೋಚಿಸುತ್ತಿದೆ ಎಂದು ವರದಿಗಳು ತಿಳಿಸಿವೆ. ಬೋರ್ಡ್ನ ಅಧಿಕೃತ ವೆಬ್ಸೈಟ್ cbse.gov.in, cbseresults.nic.in ನಲ್ಲಿ ಉತ್ತರ ಪತ್ರಿಕೆಗಳನ್ನು ಪರಿಶೀಲನೆ ಮಾಡಲು ಅವಕಾಶ ನೀಡುವ ಸಾಧ್ಯತೆ ಇದೆ. ಟಾಪರ್ಗಳ ಉತ್ತರ ಪತ್ರಿಕೆಯನ್ನು ಮುಂದಿನ ಬ್ಯಾಚ್ನ ವಿದ್ಯಾರ್ಥಿಗಳು ಮಾದರಿ ಪತ್ರಿಕೆಗಳಾಗಿ ಬಳಸಬಹುದಾಗಿದೆ. ಈ ಸಂಬಂಧ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜ್ಯೂಕೇಷನ್ ಶೀಘ್ರದಲ್ಲಿಯೇ ಅಧೀಸೂಚನೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ಮಂಗಳವಾರದಂದು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜ್ಯೂಕೇಷನ್ 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಟರ್ಮ್ 2 ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ. ಇ- ಪರೀಕ್ಷಾ ಪೋರ್ಟಲ್ನಲ್ಲಿರುವ ಅಧಿಸೂಚನೆಗಳ ಪ್ರಕಾರ, ಪ್ರವೇಶ ಕಾರ್ಡ್ಗಳನ್ನು ಸಂಬಂಧಪಟ್ಟ ಶಾಲೆಗಳು cbse.gov.in ನಲ್ಲಿ ಮಾತ್ರ ಡೌನ್ಲೋಡ್ ಮಾಡಬಹುದಾಗಿದೆ. ಶಾಲೆಯ ಅಂಗಸಂಸ್ಥೆ ಸಂಖ್ಯೆಯನ್ನು ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಹಾಲ್ ಟಿಕೆಟ್ನ್ನು ಡೌನ್ಲೋಡ್ ಮಾಡಬಹುದು. ಸಿಬಿಎಸ್ಇ ಟರ್ಮ್ 2 ಆಫ್ಲೈನ್ ಪರೀಕ್ಷೆಗಳು ಏಪ್ರಿಲ್ 26ರಿಂದ ನಡೆಯಲಿವೆ.
ವಿದ್ಯಾರ್ಥಿಗಳು ಹಾಲ್ಟಿಕೆಟ್ಗಳನ್ನು ಡೌನ್ಲೋಡ್ ಮಾಡಲು ಈ ಮಾರ್ಗಗಳನ್ನು ಅನುಸರಿಸಬಹುದಾಗಿದೆ.
CBSE board–cbse.gov.inಗೆ ಭೇಟಿ ನೀಡಿ.
ಇ-ಪರೀಕ್ಷಾ ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ‘ಅಡ್ಮಿಟ್ ಕಾರ್ಡ್/ ಸೆಂಟರ್ ಮಟಿರಿಯಲ್ ಫಾರ್ ಎಕ್ಸಾಮಿನೇಷನ್ 2021-22 ಆಯ್ಕೆ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಯೂಸರ್ ಐಡಿ, ಪಾಸ್ವರ್ಡ್ ಹಾಗೂ ಲಾಗಿನ್ ಆಗಲು ಸೆಕ್ಯೂರಿಟಿ ಪಿನ್ನ್ನು ನಮೂದಿಸಿ.
ಈಗ ನಿಮ್ಮ ಅಡ್ಮಿತ್ ಕಾರ್ಡ್ಗಳು ಪರದೆಯ ಮೇಲೆ ಗೋಚರವಾಗಲಿದೆ.
ಇದರ ಪ್ರಿಂಟ್ ತೆಗೆದುಕೊಳ್ಳಿ.
ಇದನ್ನು ಓದಿ : Degree Exams Postpone : ಪದವಿ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್ : ಪರೀಕ್ಷೆ ಒಂದು ತಿಂಗಳು ಮುಂದೂಡಿಕೆ
ಇದನ್ನೂ ಓದಿ : JEE Advanced 2022 : ಜೆಇಇ ಅಡ್ವಾನ್ಸಡ್ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಸಾಧ್ಯತೆ
CBSE Term 2 Exam: Board Likely To Release Class 10, 12 Exams Topper Answer Sheets | Details Here