CBSE Term 2 Exams : ಸಿಬಿಎಸ್​ಇ ಟರ್ಮ್ 2 ಪರೀಕ್ಷೆಗಳ ಮಾರ್ಗಸೂಚಿ ಇಲ್ಲಿದೆ ನೋಡಿ

CBSE Term 2 Exams : ಸೆಂಟ್ರಲ್​ ಬೋರ್ಡ್ ಆಫ್​ ಸೆಕೆಂಡರಿ ಎಜುಕೇಷನ್​​ 10ನೇ ತರಗತಿ ಮತ್ತು 12ನೇ ತರಗತಿ ಎರಡನೇ ಅವಧಿಯ ಪರೀಕ್ಷೆಗಳನ್ನು ನಡೆಸಲು ಸಜ್ಜಾಗಿದೆ. ಈ ಸಂಬಂಧ ಇದೀಗ ಮಂಡಳಿಯು ಸಿಬಿಎಸ್​ಇ ಟರ್ಮ್​ 2 ಪರೀಕ್ಷೆಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಗಳನ್ನು ಈ ಬಾರಿ ಪರೀಕ್ಷೆಯಲ್ಲಿ ಹಾಜರಿರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಅನ್ವಯಿಸಲಾಗುತ್ತದೆ. ಮಂಡಳಿಯಿಂದ ಬಿಡುಗಡೆಗೊಂಡಿರುವ ಮಾರ್ಗಸೂಚಿಗಳ ವಿವರ ಇಲ್ಲಿದೆ ನೋಡಿ.


ಸಿಬಿಎಸ್​ಇ 10ನೇ ತರಗತಿ ಪರೀಕ್ಷೆಗಳು ಏಪ್ರಿಲ್​ 26ರರಿಂದ ಆರಂಭಗೊಳ್ಳಲಿವೆ. ಮೇ 24ಕ್ಕೆ ಪರೀಕ್ಷೆಗಳು ಕೊನೆಗೊಳ್ಳಲಿವೆ. ಸಿಬಿಎಸ್​ಇ 12ನೇ ತರಗತಿ ಪರೀಕ್ಷೆಗಳು ಕೂಡ ಏಪ್ರಿಲ್​ 26ರಿಂದ ಆರಂಭಗೊಂಡು ಜೂನ್​ 15ಕ್ಕೆ ಕೊನೆಗೊಳ್ಳಲಿದೆ. ಸಿಬಿಎಸ್​​ಇ 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಹಾಲ್​ ಟಿಕೆಟ್​​ಗಳನ್ನೂ ಸಹ ಬಿಡುಗಡೆ ಮಾಡಿದೆ.


ಸಿಬಿಎಸ್​ಇ ಟರ್ಮ್​ 2 ಪರೀಕ್ಷೆಗಳ ಮಾರ್ಗಸೂಚಿ ಇಲ್ಲಿದೆ ನೋಡಿ :


ಪರೀಕ್ಷಾ ಹಾಲ್​ಗೆ ವಿದ್ಯಾರ್ಥಿಗಳು ಹಾಲ್​ ಟಿಕಟ್​ಗಳನ್ನು ಕೊಂಡೊಯ್ಯುವುದು ಕಡ್ಡಾಯವಾಗಿದೆ. ಇದರ ಜೊತೆಯಲ್ಲಿ ತಮ್ಮ ಶಾಲೆಗಳ ಐಡಿ ಕಾರ್ಡ್​ಗಳನ್ನು ಕೊಂಡೊಯ್ಯುವಂತೆಯೂ ಸೂಚಿಸಲಾಗಿದೆ. ಹಾಲ್​ ಟಿಕೆಟ್​ಗಳ ಮೇಲೆ ಪ್ರಾಂಶುಪಾಲರ ಸಹಿ ಹಾಗೂ ವಿದ್ಯಾರ್ಥಿಗಳ ಸಹಿ ಇರಬೇಕು.


ಅನೇಕ ಸ್ಥಳಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಸಡಿಲಗೊಳಿಸಲಾಗಿದ್ದರೂ, ಅಭ್ಯರ್ಥಿಗಳು ಪರೀಕ್ಷೆಗಳನ್ನು ತೆಗೆದುಕೊಳ್ಳುವಾಗ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗುತ್ತದೆ. ಅವರು ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಮತ್ತು ಪಾರದರ್ಶಕ ಬಾಟಲಿಯಲ್ಲಿ ಸ್ಯಾನಿಟೈಸರ್​ಗಳನ್ನು ತಂದುಕೊಳ್ಳಬೇಕು.


ಸಿಬಿಎಸ್​ಇ 10 ಹಾಗೂ 12ನೇ ತರಗತಿಗಳ ಟರ್ಮ್​ 2 ಪರೀಕ್ಷೆಗೆ 2 ಗಂಟೆಗಳ ಕಾಲಾವಕಾಶ ಇರಲಿದ್ದು ಬೆಳಗ್ಗೆ 10:30ಕ್ಕೆ ಆರಂಭಗೊಂಡು ಮಧ್ಯಾಗ್ನ 12:30ಕ್ಕೆ ಕೊನೆಗೊಳ್ಳಲಿದೆ.

ಜನಸಂದಣಿಯನ್ನು ತಪ್ಪಿಸಲು ಮತ್ತು ನಿರ್ವಹಣೆಗೆ ಸಹಕರಿಸಲು ಅಭ್ಯರ್ಥಿಗಳು ಪರೀಕ್ಷಾ ಸಮಯಕ್ಕೆ ಕನಿಷ್ಠ ಒಂದು ಗಂಟೆ ಮುಂಚಿತವಾಗಿ ಕೇಂದ್ರವನ್ನು ತಲುಪಲು ಸಲಹೆ ನೀಡಲಾಗಿದೆ. ಅಭ್ಯರ್ಥಿಗಳು ಪ್ರಶ್ನೆ ಪತ್ರಿಕೆಯನ್ನು ಓದಲು 20 ನಿಮಿಷಗಳ ಓದುವ ಸಮಯವನ್ನು ಪಡೆಯುತ್ತಾರೆ. ಈ ಸಮಯವನ್ನು ಪ್ರಶ್ನೆಪತ್ರಿಕೆ ಓದಲು ಮಾತ್ರ ಬಳಸಿಕೊಳ್ಳಬೇಕು.

ಇದನ್ನು ಓದಿ : JEE Advanced 2022 : ಜೆಇಇ ಅಡ್ವಾನ್ಸಡ್​​​ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಸಾಧ್ಯತೆ

ಇದನ್ನೂ ಓದಿ : CBSE Term 2 2022 ರ 10 ನೇ ತರಗತಿ ಪರಿಕ್ಷೆಯ ಹಾಲ್‌ ಟಿಕೇಟ್‌ ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆ ಗೊತ್ತೇ?

CBSE Term 2 Exams To Begin On April 26, Check Exam Day Guidelines Here

Comments are closed.