CBSE Term 2 Exams : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ 10ನೇ ತರಗತಿ ಮತ್ತು 12ನೇ ತರಗತಿ ಎರಡನೇ ಅವಧಿಯ ಪರೀಕ್ಷೆಗಳನ್ನು ನಡೆಸಲು ಸಜ್ಜಾಗಿದೆ. ಈ ಸಂಬಂಧ ಇದೀಗ ಮಂಡಳಿಯು ಸಿಬಿಎಸ್ಇ ಟರ್ಮ್ 2 ಪರೀಕ್ಷೆಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಗಳನ್ನು ಈ ಬಾರಿ ಪರೀಕ್ಷೆಯಲ್ಲಿ ಹಾಜರಿರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಅನ್ವಯಿಸಲಾಗುತ್ತದೆ. ಮಂಡಳಿಯಿಂದ ಬಿಡುಗಡೆಗೊಂಡಿರುವ ಮಾರ್ಗಸೂಚಿಗಳ ವಿವರ ಇಲ್ಲಿದೆ ನೋಡಿ.
ಸಿಬಿಎಸ್ಇ 10ನೇ ತರಗತಿ ಪರೀಕ್ಷೆಗಳು ಏಪ್ರಿಲ್ 26ರರಿಂದ ಆರಂಭಗೊಳ್ಳಲಿವೆ. ಮೇ 24ಕ್ಕೆ ಪರೀಕ್ಷೆಗಳು ಕೊನೆಗೊಳ್ಳಲಿವೆ. ಸಿಬಿಎಸ್ಇ 12ನೇ ತರಗತಿ ಪರೀಕ್ಷೆಗಳು ಕೂಡ ಏಪ್ರಿಲ್ 26ರಿಂದ ಆರಂಭಗೊಂಡು ಜೂನ್ 15ಕ್ಕೆ ಕೊನೆಗೊಳ್ಳಲಿದೆ. ಸಿಬಿಎಸ್ಇ 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ಗಳನ್ನೂ ಸಹ ಬಿಡುಗಡೆ ಮಾಡಿದೆ.
ಸಿಬಿಎಸ್ಇ ಟರ್ಮ್ 2 ಪರೀಕ್ಷೆಗಳ ಮಾರ್ಗಸೂಚಿ ಇಲ್ಲಿದೆ ನೋಡಿ :
ಪರೀಕ್ಷಾ ಹಾಲ್ಗೆ ವಿದ್ಯಾರ್ಥಿಗಳು ಹಾಲ್ ಟಿಕಟ್ಗಳನ್ನು ಕೊಂಡೊಯ್ಯುವುದು ಕಡ್ಡಾಯವಾಗಿದೆ. ಇದರ ಜೊತೆಯಲ್ಲಿ ತಮ್ಮ ಶಾಲೆಗಳ ಐಡಿ ಕಾರ್ಡ್ಗಳನ್ನು ಕೊಂಡೊಯ್ಯುವಂತೆಯೂ ಸೂಚಿಸಲಾಗಿದೆ. ಹಾಲ್ ಟಿಕೆಟ್ಗಳ ಮೇಲೆ ಪ್ರಾಂಶುಪಾಲರ ಸಹಿ ಹಾಗೂ ವಿದ್ಯಾರ್ಥಿಗಳ ಸಹಿ ಇರಬೇಕು.
ಅನೇಕ ಸ್ಥಳಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಸಡಿಲಗೊಳಿಸಲಾಗಿದ್ದರೂ, ಅಭ್ಯರ್ಥಿಗಳು ಪರೀಕ್ಷೆಗಳನ್ನು ತೆಗೆದುಕೊಳ್ಳುವಾಗ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗುತ್ತದೆ. ಅವರು ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಮತ್ತು ಪಾರದರ್ಶಕ ಬಾಟಲಿಯಲ್ಲಿ ಸ್ಯಾನಿಟೈಸರ್ಗಳನ್ನು ತಂದುಕೊಳ್ಳಬೇಕು.
ಸಿಬಿಎಸ್ಇ 10 ಹಾಗೂ 12ನೇ ತರಗತಿಗಳ ಟರ್ಮ್ 2 ಪರೀಕ್ಷೆಗೆ 2 ಗಂಟೆಗಳ ಕಾಲಾವಕಾಶ ಇರಲಿದ್ದು ಬೆಳಗ್ಗೆ 10:30ಕ್ಕೆ ಆರಂಭಗೊಂಡು ಮಧ್ಯಾಗ್ನ 12:30ಕ್ಕೆ ಕೊನೆಗೊಳ್ಳಲಿದೆ.
ಜನಸಂದಣಿಯನ್ನು ತಪ್ಪಿಸಲು ಮತ್ತು ನಿರ್ವಹಣೆಗೆ ಸಹಕರಿಸಲು ಅಭ್ಯರ್ಥಿಗಳು ಪರೀಕ್ಷಾ ಸಮಯಕ್ಕೆ ಕನಿಷ್ಠ ಒಂದು ಗಂಟೆ ಮುಂಚಿತವಾಗಿ ಕೇಂದ್ರವನ್ನು ತಲುಪಲು ಸಲಹೆ ನೀಡಲಾಗಿದೆ. ಅಭ್ಯರ್ಥಿಗಳು ಪ್ರಶ್ನೆ ಪತ್ರಿಕೆಯನ್ನು ಓದಲು 20 ನಿಮಿಷಗಳ ಓದುವ ಸಮಯವನ್ನು ಪಡೆಯುತ್ತಾರೆ. ಈ ಸಮಯವನ್ನು ಪ್ರಶ್ನೆಪತ್ರಿಕೆ ಓದಲು ಮಾತ್ರ ಬಳಸಿಕೊಳ್ಳಬೇಕು.
ಇದನ್ನು ಓದಿ : JEE Advanced 2022 : ಜೆಇಇ ಅಡ್ವಾನ್ಸಡ್ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಸಾಧ್ಯತೆ
ಇದನ್ನೂ ಓದಿ : CBSE Term 2 2022 ರ 10 ನೇ ತರಗತಿ ಪರಿಕ್ಷೆಯ ಹಾಲ್ ಟಿಕೇಟ್ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ ಗೊತ್ತೇ?
CBSE Term 2 Exams To Begin On April 26, Check Exam Day Guidelines Here