CBSE Term 2 Exam : 10,12ನೇ ತರಗತಿ ಟಾಪರ್​​ಗಳ ಉತ್ತರ ಪತ್ರಿಕೆ ಬಹಿರಂಗಪಡಿಸಲು ಸಿಬಿಎಸ್​ಇ ಪ್ಲಾನ್​

CBSE Term 2 Exam : ಸೆಂಟ್ರಲ್​ ಬೋರ್ಡ್ ಆಫ್​ ಸೆಕೆಂಡರಿ ಎಜ್ಯೂಕೇಷನ್​​ 10 ಹಾಗೂ 12ನೇ ತರಗತಿಯ ಟಾಪರ್​ಗಳ ಉತ್ತರ ಪತ್ರಿಕೆಗಳನ್ನು ಫಲಿತಾಂಶ ಪ್ರಕಟಣೆಯ ಬಳಿಕ ಆನ್​ಲೈನ್​​ನಲ್ಲಿ ಅಪ್​ಲೋಡ್​ ಮಾಡಲು ಯೋಚಿಸುತ್ತಿದೆ ಎಂದು ವರದಿಗಳು ತಿಳಿಸಿವೆ. ಬೋರ್ಡ್​ನ ಅಧಿಕೃತ ವೆಬ್​ಸೈಟ್​​ cbse.gov.in, cbseresults.nic.in ನಲ್ಲಿ ಉತ್ತರ ಪತ್ರಿಕೆಗಳನ್ನು ಪರಿಶೀಲನೆ ಮಾಡಲು ಅವಕಾಶ ನೀಡುವ ಸಾಧ್ಯತೆ ಇದೆ. ಟಾಪರ್​ಗಳ ಉತ್ತರ ಪತ್ರಿಕೆಯನ್ನು ಮುಂದಿನ ಬ್ಯಾಚ್​​ನ ವಿದ್ಯಾರ್ಥಿಗಳು ಮಾದರಿ ಪತ್ರಿಕೆಗಳಾಗಿ ಬಳಸಬಹುದಾಗಿದೆ. ಈ ಸಂಬಂಧ ಸೆಂಟ್ರಲ್​ ಬೋರ್ಡ್ ಆಫ್​ ಸೆಕೆಂಡರಿ ಎಜ್ಯೂಕೇಷನ್​ ಶೀಘ್ರದಲ್ಲಿಯೇ ಅಧೀಸೂಚನೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ.


ಮಂಗಳವಾರದಂದು ಸೆಂಟ್ರಲ್​ ಬೋರ್ಡ್ ಆಫ್​ ಸೆಕೆಂಡರಿ ಎಜ್ಯೂಕೇಷನ್​​ 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಟರ್ಮ್ 2 ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ. ಇ- ಪರೀಕ್ಷಾ ಪೋರ್ಟಲ್​​ನಲ್ಲಿರುವ ಅಧಿಸೂಚನೆಗಳ ಪ್ರಕಾರ, ಪ್ರವೇಶ ಕಾರ್ಡ್​ಗಳನ್ನು ಸಂಬಂಧಪಟ್ಟ ಶಾಲೆಗಳು cbse.gov.in ನಲ್ಲಿ ಮಾತ್ರ ಡೌನ್​ಲೋಡ್​ ಮಾಡಬಹುದಾಗಿದೆ. ಶಾಲೆಯ ಅಂಗಸಂಸ್ಥೆ ಸಂಖ್ಯೆಯನ್ನು ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಹಾಲ್ ಟಿಕೆಟ್​ನ್ನು ಡೌನ್​ಲೋಡ್​ ಮಾಡಬಹುದು. ಸಿಬಿಎಸ್​ಇ ಟರ್ಮ್​ 2 ಆಫ್​​ಲೈನ್​ ಪರೀಕ್ಷೆಗಳು ಏಪ್ರಿಲ್​ 26ರಿಂದ ನಡೆಯಲಿವೆ.


ವಿದ್ಯಾರ್ಥಿಗಳು ಹಾಲ್​ಟಿಕೆಟ್​ಗಳನ್ನು ಡೌನ್​ಲೋಡ್​ ಮಾಡಲು ಈ ಮಾರ್ಗಗಳನ್ನು ಅನುಸರಿಸಬಹುದಾಗಿದೆ.


CBSE board–cbse.gov.inಗೆ ಭೇಟಿ ನೀಡಿ.


ಇ-ಪರೀಕ್ಷಾ ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ‘ಅಡ್ಮಿಟ್ ಕಾರ್ಡ್/ ಸೆಂಟರ್​ ಮಟಿರಿಯಲ್​​ ಫಾರ್​ ಎಕ್ಸಾಮಿನೇಷನ್​ 2021-22 ಆಯ್ಕೆ ಮೇಲೆ ಕ್ಲಿಕ್​ ಮಾಡಿ.


ನಿಮ್ಮ ಯೂಸರ್​ ಐಡಿ, ಪಾಸ್​ವರ್ಡ್ ಹಾಗೂ ಲಾಗಿನ್​ ಆಗಲು ಸೆಕ್ಯೂರಿಟಿ ಪಿನ್​ನ್ನು ನಮೂದಿಸಿ.


ಈಗ ನಿಮ್ಮ ಅಡ್ಮಿತ್​ ಕಾರ್ಡ್​ಗಳು ಪರದೆಯ ಮೇಲೆ ಗೋಚರವಾಗಲಿದೆ.


ಇದರ ಪ್ರಿಂಟ್​ ತೆಗೆದುಕೊಳ್ಳಿ.

ಇದನ್ನು ಓದಿ : Degree Exams Postpone : ಪದವಿ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್ : ಪರೀಕ್ಷೆ ಒಂದು ತಿಂಗಳು ಮುಂದೂಡಿಕೆ

ಇದನ್ನೂ ಓದಿ : JEE Advanced 2022 : ಜೆಇಇ ಅಡ್ವಾನ್ಸಡ್​​​ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಸಾಧ್ಯತೆ

CBSE Term 2 Exam: Board Likely To Release Class 10, 12 Exams Topper Answer Sheets | Details Here

Comments are closed.