Black Pepper: ಕಾಳು ಮೆಣಸಿನ ಈ ಭಾರಿ ಪ್ರಯೋಜನ ತಿಳಿದರೆ ನೀವೂ ಡಯಟ್‌ನಲ್ಲಿ ಇದನ್ನು ಖಂಡಿತ ಸೇರಿಸಿಕೊಳ್ತೀರಾ!

ಮುಂದಿನ ಸಲ ಕಾಳು ಮೆಣಸ(Black Pepper) ನ್ನು ನಿಮ್ಮ ಅಡುಗೆ ಮನೆಯಿಂದ ಬಿಸಾಡುವ ಮೊದಲು ಎರಡನೇ ಸಲ ಯೋಚಿಸಿ. ಏಕೆಂದರೆ ಈ ಸಾಮಾನ್ಯ ಸಾಂಬಾರ ಪದಾರ್ಥವು ನೀವು ಯೋಚಿಸಿದ್ದಕ್ಕಿಂತಲೂ ಅತೀ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿದೆ. ಹೌದು! ಕಾಳು ಮೆಣಸು ಮೊದಲಿನಿಂದಲೂ ಸಾಂಬಾರ ಪದಾರ್ಥಗಳ ಸಾಲಿನಲ್ಲಿ ನಿರಂತರವಾಗಿ ತನ್ನ ಸ್ಥಾನವನ್ನು ಕಾಯ್ದುಕೊಂಡು ಬಂದಿದೆ. ಈ ಚಿಕ್ಕ ಕಾಳನ್ನು ಬೇರೇ ಬೇರೆ ವ್ಯಂಜನಗಳಿಗೆ ತೀಕ್ಷ್ಣ ಪರಿಮಳ ಹೆಚ್ಚಿಸಲು ಸೇರಿಸುತ್ತಾರೆ. ಆದರೆ ನಿಮಗಿದು ಗೊತ್ತೇ? ಇದು ಅಗಾಧವಾದ ಸ್ವಾಸ್ಥ್ಯ ಪ್ರಯೋಜನಗಳನ್ನೂ ಹೊಂದಿದೆ ಎಂದು.

ಕಾಳು ಮೆಣಸನ್ನು ಕಾಲಿ ಮಿರ್ಚಿ, ಕರಿ ಮೆಣಸು, ಬ್ಲೆಕ್‌ ಪೆಪ್ಪರ್‌, ಎಂದೆಲ್ಲಾ ಕರೆಯುತ್ತಾರೆ. ಇದನ್ನು ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯಲ್ಲಿ ಅನೇಕ ವರ್ಷಗಳಿಂದ ಉಪಯೋಗಿಸುತ್ತಲೇ ಬಂದಿದ್ದಾರೆ. ಹಿಂದೆ ಇದನ್ನು ಉತ್ತಮ ಪೋಷಕಾಂಶಗಳಿರುವ ಸಾಂಬಾರ ಪದಾರ್ಥ ಎಂದು ಪರಿಗಣಿಸಲಾಗಿತ್ತು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನೂ ಗಳಿಸಿತ್ತು ಎಂಬುದು ಆಕರ್ಷಕ ಸಂಗತಿಯಲ್ಲವೇ? ಹಾಗಾದರೆ ಕಾಳು ಮೆಣಸಿನ ಸಾಂಬಾರ ಪದಾರ್ಥಗಳಲ್ಲೆ ಪ್ರಮುಖ ಸ್ಥಾನಗಳಿಸಿದ್ದು ಹೇಗೆ ಎಂದು ತಿಳಿಯಬೇಕೆ? ಇದನ್ನೊಮ್ಮೆ ಓದಿ.

ಕಾಳು ಮೆಣಸಿನಿಂದ ಪಡೆಯಬಹುದಾದ ಆರೋಗ್ಯ ಪ್ರಯೋಜನಗಳು:

1 ತೂಕ ಇಳಿಕೆಯಲ್ಲಿ ಸಹಾಯ :
ಕಾಳು ಮೆಣಸು ಆಹಾರದಲ್ಲಿಯ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಅದಲ್ಲದೆ ಕೊಬ್ಬಿನ ಆಕರ ಕೋಶಗಳನ್ನು ಕರಗಿಸಿ ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುವುದು. ಈ ಅಂಶಗಳು ತೂಕ ಇಳಿಕೆಯಲ್ಲಿ ಬಹಳ ಸಹಾಯ ಮಾಡುತ್ತದೆ ಎಂದು ತಿಳಿದಬಂದಿದೆ.

2 ದೇಹ ಶುದ್ಧೀಕರಣವನ್ನು ಉತ್ತೇಜಿಸುವುದು:
ಕಾಳು ಮೆಣಸು ಚಯಾಪಚಯ ಕ್ರಿಯೆಯನ್ನು ಸರಾಗಗೋಳಿಸಿ ದೇಹದ ಕಲ್ಮಶಗಳನ್ನು ಹೊರಹಾಕುವಲ್ಲಿ ಸಹಾಯಮಾಡುತ್ತದೆ. ಜೊತೆಗೆ, ಪೈಪರಿನ್‌ ಎಂಬ ಪ್ರಬಲ ಆಂಟಿಓಕ್ಸಿಡೆಂಟ್‌ ಅನ್ನೂ ಹೊಂದಿದೆ. ಈ ಪೋಷಕಾಂಶವು ಕೋಶಗಳಲ್ಲಿನ ಸ್ವತಂತ್ರ ರ್‍ಯಾಡಿಕಲ್‌ಗಳ ನಷ್ಟವನ್ನು ತಪ್ಪಿಸುತ್ತದೆ.

3 ಜೀರ್ಣಶಕ್ತಿ ಹೆಚ್ಚಿಸುವುದು:
ಕಾಳು ಮೆಣಸಿನಲ್ಲಿರುವ ಪೈಪರಿನ್‌ ಜಠರದ ಕಾರ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ನಂತರ ಇದು ಹೈಡ್ರೋಕ್ಲೋರಿಕ್‌ ಎಸಿಡ್‌ ಸ್ರವಿಸುವಂತೆ ಮಾಡಿ ಜೀರ್ಣಕ್ರಿಯಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ : Watermelon : ಬೇಸಿಗೆಯ ಬಿಸಿಲಿಗೆ ತಂಪು ನೀಡುವ ಕಲ್ಲಂಗಡಿ ಹಣ್ಣಿನ ಪ್ರಯೋಜನಗಳೇನು ಎಂಬುದು ಗೊತ್ತೇ?

4 ರೋಗನಿರೋಧಕ ಶಕ್ತಿ ಹೆಚ್ಚಿಸುವುದು:
ನೈಸರ್ಗಿಕವಾಗಿಯೇ ಆಂಟಿಬ್ಯಾಕ್ಟೀರಿಯಾ ಗುಣಹೊಂದಿರುವ ಕಾಳು ಮೆಣಸು ಆಂಟಿಬಯಾಟಿಕ್‌ ಆಗಿ ಕೆಲಸ ಮಾಡುತ್ತದೆ. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದನ್ನು ಋತುಮಾನದ ಸಾಮಾನ್ಯ ಖಾಯಿಲೆಗಳಾದ ಶೀತ ಮತ್ತು ಕೆಮ್ಮನ್ನು ಗುಣಪಡಿಸುತ್ತದೆ ಎಂದು ತಿಳಿದುಬಂದಿದೆ.

5 ರಕ್ತದೊತ್ತಡವನ್ನು ನಿರ್ವಹಿಸುವುದು:
ಜರ್ನಲ್‌ ಆಪ್‌ ಕಾರ್ಡಿಯೋವೆಸ್ಕುಲಾರ್‌ ಫಾರ್ಮಾಕಾಲಜಿ ಅಧ್ಯಯನದ ಪ್ರಕಾರ, ಕಾಳು ಮೆಣಸಿನಲ್ಲಿರುವ ಪೈಪರಿನ್‌ ಸಂಯುಕ್ತವು ಅಧಿಕ ರಕ್ತದೊತ್ತಡನ್ನು ನಿಯಂತ್ರಿಸುತ್ತದೆ ಎಂದು ತಿಳಿದುಬಂದಿದೆ. ಅದಲ್ಲದೆ, ಪೋಟ್ಯಾಸಿಯಂನ ಆಕರ ಮೂಲವಾದ ಕಾಳು ಮೆಣಸು ಸೋಡಿಯಂ ನಿಂದ ಉಂಟಾಗುವ ಕೆಟ್ಟ ಪರಿಣಾಮವನ್ನು ಹೋಗಲಾಡಿಸುತ್ತದೆ.

ಇಷ್ಟೆಲ್ಲಾ ಗುಣಗಳಿರುವ ಕಾಳು ಮೆಣಸನ್ನು ನಿಮ್ಮ ಡಯಟ್‌ನಲ್ಲಿ ಸೇರಿಸಿಕೊಳ್ಳಿ. ಸೂಪ್‌, ಅರಿಶಿನದ ಹಾಲು(ಗೋಲ್ಡನ್‌ ಮಿಲ್ಕ), ಚಾಟ್‌ಗಳಿಗೂ ಸೇರಿಸಿ ಆರೋಗ್ಯ ಕಾಪಾಡಿಕೊಳ್ಳಿ.

ಇದನ್ನೂ ಓದಿ : Fennel Seeds Benefits: ಸೋಂಪು ಕಾಳಿನ ಪ್ರಯೋಜನಗಳು ಏನೇನು ಗೊತ್ತಾ!

(Black Pepper Health Benefits of black pepper)

Comments are closed.