CET rules : ಸಿಇಟಿಗೆ ನೋ ಹಿಜಾಬ್, ಆಭರಣ ಧರಿಸಿಯೂ ಪರೀಕ್ಷೆ ಬರೆಯುವಂತಿಲ್ಲ

ಬೆಂಗಳೂರು : ರಾಜ್ಯದಲ್ಲಿ ಮತ್ತೆ ಹಿಜಾಬ್ ವಿವಾದ ಗರಿಗೆದರಿಗೆ ಈ ಮಧ್ಯೆ ದ್ವಿತೀಯ ಪಿಯುಸಿ ಪರೀಕ್ಷೆಯಿಂದ ಹಿಜಾಬ್ ನ್ನು ದೂರವಿಟ್ಟ ಸರ್ಕಾರ ಮುಂಬರುವ ಸಿಇಟಿ ಪರೀಕ್ಷೆಯಿಂದಲೂ (CET rules) ಹಿಜಾಬ್ ಗೇಟ್ ಪಾಸ್ ನೀಡಿದೆ. ಹಿಜಾಬ್ (Hijab) ಧರಿಸಿ ಬಂದ್ರೆ ಸಿಇಟಿ ಪರೀಕ್ಷೆಗೆ ಎಂಟ್ರಿ ಇಲ್ಲ ಎಂದೂ ಶಿಕ್ಷಣ ಇಲಾಖೆ ಸ್ಪಷ್ಟವಾಗಿ ಸೂಚಿಸಿದೆ. ಹಿಜಾಬ್ ಧರಿಸಿ ಸಿಇಟಿ ಪರೀಕ್ಷೆಯಲು ಅವಕಾಶ ಇಲ್ಲ ಎಂದಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ SSLC ಮತ್ತು ದ್ವಿತೀಯ ಪಿಯುಸಿ ಮಾದರಿಯಲ್ಲೇ ಸಿಇಟಿ ಪರೀಕ್ಷೆಯೂ ನಡೆಯಲಿದೆ ಎಂದು ಸ್ಪಷ್ಟಪಡಿಸಿದೆ.

ಈಗಾಗಲೇ ಸರ್ಕಾರ ಹಾಗೂ ಹೈಕೋರ್ಟ್ ಎರಡೂ ಧರ್ಮಸೂಚಕ ವಸ್ತ್ರಗಳನ್ನು ತರಗತಿ ಒಳಗೆ ಬಳಸುವಂತಿಲ್ಲ ಎಂದು ಅದೇಶಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಹೈಕೋರ್ಟ್ ಆದೇಶ ಪಾಲನೆಗೆ ಕೆಇಎ ಮುಂದಾಗಿದ್ದು, ಯಾವುದೇ ಧರ್ಮ ಸೂಚಕ ವಸ್ತ್ರ ಧರಿಸಿ ಸಿಇಟಿ ಪರೀಕ್ಷೆಗೆ ಬರುವಂತಿಲ್ಲ ಎಂದು ಸೂಚಿಸಿದೆ. ಸದ್ಯದಲ್ಲೇ ಸಮವಸ್ತ್ರದ ಪಾಲನೆಯ ನಿಯಮ ಪ್ರಕಟಿಸಲಿರುವ ಕೆಇಎ ಪರೀಕ್ಷೆಗೂ ಮುನ್ನ ಮಾರ್ಗಸೂಚಿ ಬಿಡುಗಡೆ ಮಾಡಿ ವಿದ್ಯಾರ್ಥಿಗಳಿಗೆ ಸ್ಪಷ್ಟ ಸೂಚನೆ ನೀಡಲಿದೆ.

ರಾಜ್ಯದಲ್ಲಿ ಜೂನ್ 16, 17 ಮತ್ತು 18ರಂದು ಸಿಇಟಿ ಪರೀಕ್ಷೆ ನಡೆಯಲಿದೆ. ಸಿಇಟಿ ಪರೀಕ್ಷೆಗೆ (CET EXAMS) ಯಾವುದೇ ಸಮವಸ್ತ್ರ ನಿಗದಿ ಮಾಡಿಲ್ಲ.ಆದ್ರೆ ಸರ್ಕಾರದ ಧಾರ್ಮಿಕ ವಸ್ತ್ರ ನಿಯಮವನ್ನ ನಾವು ಪಾಲಿಸ್ತೇವೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ರಮ್ಯ ಹೇಳಿದ್ದಾರೆ. ಇನ್ನೂ ಈಗಾಗಲೇ ರಾಜ್ಯದಲ್ಲಿ ಸಂಚಲನ ಮೂಡಿಸಿರುವ PSI ಹಾಗೂ ಸಹಾಯಕ ಪ್ರಾಧ್ಯಾಪಕ ಪರೀಕ್ಷೆ ಅಕ್ರಮದ ಹಿನ್ನೆಲೆಯಲ್ಲಿ ಸಿಇಟಿ ಪರೀಕ್ಷೆಯನ್ನ ಕಟ್ಟುನಿಟ್ಟಾಗಿ ನಡೆಸಲು ಹೈ ಅಲರ್ಟ್ ಘೋಷಿಸಲಾಗಿದೆ. ನೀಟ್ ಮಾದರಿಯಲ್ಲೇ ನ ಸಿಇಟಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.

ಇನ್ನೂ ಸಿಇಟಿ ಪರೀಕ್ಷಾ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಸಿಇಟಿ ಪರೀಕ್ಷೆಗೆ ಮಾಂಗಲ್ಯ ಸರ, ಮೂಗುತ್ತಿ, ಓಲೆ, ಸರ, ಬಳೆ ಸೇರಿದಂತೆ ಆಭರಣ ಧರಿಸಿ ಪರೀಕ್ಷೆ ಬರೆಯುವಂತಿಲ್ಲ ವಾಚ್, ಕ್ಯಾಲ್ಕುಲೇಟರ್ ಗಳಿಗೂ ನಿಷೇಧ ಹೇರಲಾಗಿದೆ. ಇದಲ್ಲದೇ ಇದೇ ಮೊದಲ ಬಾರಿಗೆ ಜಾಮರ್ ಅಳವಡಿಕೆಗೆ ಪರೀಕ್ಷಾ ಪ್ರಾಧಿಕಾರ ಚಿಂತನೆ ನಡೆಸಿದೆ. ಒಟ್ಟು 2 ಲಕ್ಷದ 11 ಸಾವಿರ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಹಾಜರಾಗಲಿದ್ದು, ಈ ಪೈಕಿ 1 ಲಕ್ಷದ 4 ಸಾವಿರ ಪುರುಷ ವಿದ್ಯಾರ್ಥಿ, 1 ಲಕ್ಷದ 7 ಸಾವಿರ ಮಹಿಳಾ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : CBSE : ಸಿಬಿಎಸ್​ಇ ಟರ್ಮ್​ 2 ಪರೀಕ್ಷೆ ಫಲಿತಾಂಶ ವಿಳಂಬ ಸಾಧ್ಯತೆ : ಅಂಕಗಳ ಅಪ್​ಲೋಡ್​ ಮಾಡಲು ಗಡುವು ವಿಸ್ತರಿಸಿದ ಬೋರ್ಡ್

ಇದನ್ನೂ ಓದಿ : ಶಾಲಾರಂಭ ಮಾಡಿ ಸಮಯ ವ್ಯರ್ಥ ಮಾಡಿದ ಸರಕಾರ : ಮುದ್ರಣವೇ ಗೊಂಡಿಲ್ಲ ಪಠ್ಯಪುಸ್ತಕ, ತಲುಪೋಕೆ ಬೇಕು ಒಂದು ತಿಂಗಳು

CET rules Hijab, Jewellery mobile phones banned

Comments are closed.