Kangana Ranaut Dhaakad : ಬಾಲಿವುಡ್ ಫೈರ್ ಬ್ರ್ಯಾಂಡ್ ಕಂಗನಾ ರಣಾವತ್‌ಗೆ ಹಿನ್ನಡೆ : ಗಳಿಕೆಯಲ್ಲಿ ಸೋತ ಧಾಕಡ್ ಸಿನಿಮಾ

ಸದಾ ಕಾಲ ತಮ್ಮ ಮಾತು ಟ್ವೀಟ್ ಹಾಗೂ ಪೋಸ್ಟ್ ಗಳ ಮೂಲಕ ವಿವಾದ ಸೃಷ್ಟಿಸುವ ಬಾಲಿವುಡ್ ನ ಕಾಂಟ್ರಾವರ್ಸ್ ಕ್ವೀನ್ ಕಂಗನಾ ರನಾವುತ್ ತಮ್ಮ ಸಿನಿಮಾದ ಮೂಲಕ ಭಾಕ್ಸಾಫೀಸ್ ನಲ್ಲಿ ಮೋಡಿ ಮಾಡುವಲ್ಲಿ ವಿಫಲರಾಗಿದ್ದಾರೆ. ಇದರಿಂದ ಕಂಗನಾ ರಣಾವತ್‌ (Kangana Ranaut) ಬಹುನೀರಿಕ್ಷಿತ ಸಿನಿಮಾ ಧಾಕಡ್ (Dhaakad) ಸಿನಿಮಾ ಬಹುತೇಕ ಥಿಯೇಟರ್ ನಿಂದ ಹೊರಬೀಳುವ ಸ್ಥಿತಿ ತಲುಪಿದ್ದು, ಇದು ಕಂಗನಾ ಅಭಿಮಾನಿಗಳಿಗೆ ನಿರಾಸೆ ತಂದಿದೆ.

Kangana Ranaut film Dhaakad has low performance box office 2

ಟ್ರೇಲರ್, ಫರ್ಸ್ಟ್ ಲುಕ್, ಟ್ರೇಲರ್ ಗಳ ಮೂಲಕ ಗಮನ ಸೆಳೆದಿದ್ದ ಧಾಕಡ್ ಸಿನಿಮಾ ಥಿಯೇಟರ್ ನಲ್ಲಿ ಪ್ರೇಕ್ಷಕರಿಗೆ ಮೋಡಿ ಮಾಡುವಲ್ಲಿ ವಿಫಲವಾಗಿದೆ. ಹೀಗಾಗಿ ಸಿನಿಮಾ ಥಿಯೇಟರ್ ನತ್ತ ಪ್ರೇಕ್ಷಕರನ್ನು ಸೆಳೆಯದೇ ಖಾಲಿ ಖಾಲಿ ಹೊಡೆಯುತ್ತಿದೆ.‌ ಅದರಲ್ಲೂ ಸಿನಿಮಾದ ಎಂಟನೇ ದಿನವಾದ ಶನಿವಾರ ದೇಶದಾದ್ಯಂತ ಧಾಕಡ್ ಸಿನಿಮಾದ ಕೇವಲ 20 ಟಿಕೇಟ್ ಗಳು ಮಾರಾಟವಾಗಿದ್ದು ಇದು ಚಿತ್ರತಂಡಕ್ಕೆ ತೀವ್ರ ಮುಜುಗರ ತಂದಿದೆ.

Kangana Ranaut film Dhaakad has low performance box office 3

ಮೇ 20 ರಂದು ಬಾಲಿವುಡ್ ನ ಬಹುನೀರಿಕ್ಷಿತ ಸಿನಿಮಾ ಭೂಲ್ ಬುಲಯ್ಯಾ ಹಾಗೂ ಧಾಕಡ್ ಸಿನಿಮಾ ತೆರೆಗೆ ಬಂದಿತ್ತು. ಮೊದಲ ದಿನ ಜನರು ಕುತೂಹಲದಿಂದ ಧಾಕಡ್ ಸಿನಿಮಾಕ್ಕೆ ಮುಗಿಬಿದ್ದಿದ್ದರು. ಆದರೆ ಪ್ರೇಕ್ಷಕರಿಗೆ ಕಂಗನಾ ನಟನೆ ಇಷ್ಟವಾಗಿದ್ದರೂ ಸಿನಿಮಾದ ಕತೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಇದರಿಂದಾಗಿ ಜನರು ಧಾಕಡ್ ವೀಕ್ಷಣೆಯಿಂದ ದೂರ ಸರಿದಿದ್ದಾರೆ.

Kangana Ranaut film Dhaakad has low performance box office 1

ರಿಲೀಸ್ ಆದ ಮೊದಲನೇ ದಿನ ಸಿನಿಮಾ ಹೇಗೋ ಒಂದು ಕೋಟಿ ರೂಪಾಯಿ ಗಳಿಸಿತ್ತು. ಆದರೆ ಈಗ ಸಿನಿಮಾ ರಿಲೀಸ್ ಆದ ೮ ದಿನದ ಬಳಿಕವೂ ಕೇವಲ ನಾಲ್ಕು ಕೋಟಿ ಆದಾಯ ಗಳಿಸಿದ್ದು, ಕಂಗನಾ ಅಭಿಮಾನಿಗಳಿಗೆ ಈ ವಿಚಾರ ಬೇಸರ ತಂದಿದೆ. ಧಾಕಡ್ ಸಿನಿಮಾದಲ್ಲಿ ಕಂಗನಾ ರನಾವುತ್ ಸಖತ್ ಆಕ್ಷ್ಯನ್ ಪಾತ್ರದಲ್ಲಿ ನಟಿಸಿದ್ದಾರೆ. ಆದರೂ ಈ ಮಹಿಳಾ ಪ್ರಧಾನ ಸಿನಿಮಾ ಜನರನ್ನು ಥಿಯೇಟರ್ ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿಲ್ಲ.

ಈ ಮಧ್ಯೆ ಧಾಕಡ್ ಜೊತೆ ರಿಲೀಸ್ ಆದ ಭೂಲ್ ಬುಲಯ್ಯ ಸಿನಿಮಾ ಗಳಿಕೆಯಲ್ಲಿ100 ಕೋಟಿ ಕ್ಲಬ್ ಸನಿಹದಲ್ಲಿದೆ. ಆದರೆ ಧಾಕಡ್ ಮಾತ್ರ ಗಳಿಕೆಯಲ್ಲಿ ಎಡವಿದೆ. ಇದು ಕೇವಲ ಧಾಕಡ್ ಸಿನಿಮಾದ ಕತೆ ಮಾತ್ರವಲ್ಲ, ಇತ್ತೀಚಿಗೆ ಸೌತ್ ಸಿನಿಮಾಗಳ ಪ್ರಭಾವದಿಂದಾಗಿ ಬಾಲಿವುಡ್ ಸಿನಿಮಾಗಳು ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ವರ್ಷದ ಆರಂಭದಲ್ಲಿ ತೆರೆ ಕಂಡಿದ್ದ ದಿ ಕಾಶ್ಮೀರಿ ಫೈಲ್ಸ್ ಹಾಗೂ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ ಮಾತ್ರ ಉತ್ತಮ ಗಳಿಕೆ ಕಂಡಿತ್ತು.

ಇದನ್ನೂ ಓದಿ : Jersey Film Trends on Netflix : ಶಾಹಿದ್ ಕಪೂರ್ ನಟನೆಯ “ಜರ್ಸಿ ” ನೆಟ್ಫ್ಲಿಕ್ಸ್ ನಲ್ಲಿ ಈಗ ಟಾಪ್ ಟ್ರೆಂಡಿಂಗ್ ಸಿನಿಮಾ!

ಇದನ್ನೂ ಓದಿ : Sruthi Hariharan : ಸಾಲು ಸಾಲು ಸಿನಿಮಾದಲ್ಲಿ ಶ್ರುತಿ ಹರಿಹರನ್ : ಲೂಸಿಯಾ ಚೆಲುವೆಯ ಗ್ರ್ಯಾಂಡ್ ಕಮ್ ಬ್ಯಾಕ್

Kangana Ranaut film Dhaakad has low performance box office

Comments are closed.