AI ಚಿತ್ರಗಳನ್ನು ರಚಿಸುವುದು ಹೇಗೆ ಎಂಬ ಗೊಂದಲವೇ? ಇದನ್ನು ಓದಿ

AI Images : ಏಐ ಜನರೇಟರ್ ಎನ್ನುವುದು ಒಂದು ರೀತಿಯ ಕೃತಕ ಬುದ್ಧಿಮತ್ತೆಯಾಗಿದೆ. ಅದು ಬಳಕೆದಾರರ ಅಗತ್ಯಕ್ಕೆ ಅನುಸಾರವಾಗಿ ವಿಭಿನ್ನ ರೀತಿಯಲ್ಲಿ ಚಿತ್ರಗಳು, ಪಠ್ಯ, ಕೋಡ್‌ನಂತಹ ಹೊಸ ವಿಷಯವನ್ನು ರಚಿಸುತ್ತದೆ.

ಏಐ ಜನರೇಟರ್ ಚಿತ್ರಗಳು ಸಾಮಾಜಿಕ ಮಾಧ್ಯಮಗಳ ಪೋಸ್ಟ್ಗಳು ಹಾಗೂ ಕಥೆಗಳಿಗೆ ಆಕರ್ಷಕ ವಿಷಯ ರಚಿಸಲು ಸಹಾಯಕ. ಪುಸ್ತಕಕದ ಪುಟಗಳ ಆಕರ್ಷಕ ವಿನ್ಯಾಸ ಹಾಗೆಯೇ ವ್ಯವಹಾರದ ದಾಖಲೆಗಳಿಗೆ ಉತ್ತಮ ದರ್ಜೆಯ ಗ್ರಾಫಿಕ್ಸ್ ಬಳಸಬಯಸಿದರೆ ಏಐ ಉತ್ತಮ. ಜನರು ಫ್ಯಾಷನ್, ಜಾಹೀರಾತು, ಗ್ರಾಫಿಕ್ಸ್ ರಚಿಸುವುದರಿಂದ ಹಿಡಿದು ಫ್ಯಾಂಟಸಿ ಕಲೆಗಳನ್ನು ರಚಿಸುವ ವರೆಗೆ ಏಐ ನ್ನು ಮುಖ್ಯವಾಗಿ ಬಳಸುತ್ತಾರೆ. ವರ್ಚುವಲ್ ಬಟ್ಟೆ ವಿನ್ಯಾಸಗಳನ್ನು ರಚಿಸಲು ಸಹಾಯಕ ಕೆಲವೇ ಕೆಲವು ವಿಧಾನಗಳ ಮೂಲಕ ಸಂಸ್ಕರಿಸಿದ ಉತ್ತಮ ಗುಣಮಟ್ಟದ ಚಿತ್ರಗಳನ್ನು ಪಡೆಯುವ ಬಗ್ಗೆ ವಿವರಣೆ ಇಲ್ಲಿದೆ.

  1. ಮೊದಲು ನಿಮಗೆ ಇಷ್ಟವಾದ ಅಥವಾ ಸೂಕ್ತವಾದ ಏಐ ನ್ನು ಆರಿಸಿಕೊಳ್ಳಿ.
    ಉದಾಹರಣೆಗೆ:- 1. ಲಿಯೋನಾರ್ಡೊ ಏಐ 2. ಚಾಟ್ ಜಿಪಿಟಿ 3. ಮೈಕ್ರೋಸಾಫ್ಟ್ ಕೋಫೈಲೆಟ್ ಡಿಸೈನರ್ 4. ಪರ್ಪೆಕ್ಸಲಿಟಿ 5. ಕ್ಯಾನ್ವಾದ ಮ್ಯಾಜಿಕ್ ಮೀಡಿಯಾ 6. ಗೂಗಲ್ ಜೆಮಿನಿ
  2. ಇಮೇಜ್ ಜನರೇಟ್ ನ ವೆಬ್ಸೈಟ್ ಅಥವಾ ಅಪ್ಲಿಕೇಶನ್ಗೆ ಹೋಗಿ ಟೆಕ್ಸ್ಟ್ ಟು ಇಮೇಜ್ ಹುಡುಕಿ ಆಗ ವಿವರಣೆ ನೀಡಬಹುದಾದ ಖಾಲಿ ಜಾಗ ತೆರೆದುಕೊಳ್ಳುತ್ತದೆ.
  3. ಇದು ಅತ್ಯಂತ ನಿರ್ಣಾಯಕ ಹೆಜ್ಜೆಯಾಗಿದೆ. ಗೊತ್ತುಪಡಿಸಿದ ಜಾಗದಲ್ಲಿ ನೀವು ಏಐ ನಿಂದ ಪಡೆಯಬೇಕಾದ ಚಿತ್ರದ ಬಗ್ಗೆ ಸೂಕ್ತವಾದ ವಿವರಣೆ ನೀಡಿ. ಅಂದರೆ ನಿಮಗೆ ಬೇಕಾದ ವಸ್ತು, ಪಾತ್ರಗಳು ಅಥವಾ ದೃಶ್ಯಗಳ ಬಗ್ಗೆ ಸಾಧ್ಯವಾದಷ್ಟು ಸ್ಪಷ್ಟ ವಿವರಣೆ ನೀಡಿ. ನಂತರ ನಮಗೆ ಬೇಕಾದ ಸ್ಟೈಲ್ ನ ರೀತಿಯನ್ನು ಆಯ್ಕೆ ಮಾಡಿ. ಉದಾಹರಣೆಗೆ:- ಆಯಿಲ್ ಪೇಂಟಿಂಗ, ಡಿಜಿಟಲ್ ಆರ್ಟ್, ವಾಟರ್ ಕಲರ್.
  4. ಚಿತ್ರದ ಆಯಾಮ ತಿಳಿಸಿ. ಈಗಾಗಲೇ ಜನರೇಟ್ ಆದ ಚಿತ್ರವನ್ನು ನೀವು ನಿಮಗೆ ಬೇಕಾದ ಎತ್ತರ ಅಗಲಗಳನ್ನು ಆಯ್ಕೆ ಮಾಡಿ ಏಐ ಗೆ ತಿಳಿಸಿ.
  5. ಜನರೇಟ್ ಆದ ಚಿತ್ರದಲ್ಲಿ ಅನವಶ್ಯಕ ಎನಿಸಿದ್ದನ್ನು ತೆಗೆಯಿರಿ. ಏನಾದರೂ ಸೇರಿಸಬೇಕೆಂದರೆ ಸೇರಿಸಬಹುದು.
  6. ನಿಮಗೆ ಬೇಕಾದ ಚಿತ್ರ ತಯಾರಾಗದಿದ್ದಲ್ಲಿ ನಿಮ್ಮ ಅಗತ್ಯಗಳನ್ನು ಮತ್ತೆ ತಿಳಿಸಿ. ನಂತರ ಸೂಕ್ತ ಚಿತ್ರ ದೊರೆತಲ್ಲಿ ಡೌನ್ಲೋಡ್ ಮಾಡುವ ಮೂಲಕ ಚಿತ್ರವನ್ನು ಪಡೆಯಿರಿ.

ಹೀಗೆ ಈ ಎಲ್ಲ ಹಂತಗಳ ಸರಿಯಾದ ಪಾಲನೆ ಮೂಲಕ ಏಐ (AI Images) ಜನರೇಟ್ ಚಿತ್ರಗಳನ್ನು ಪಡೆಯಬಹುದು.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories