ಮಂಗಳೂರು : mid-year vacation : ರಾಜ್ಯದಲ್ಲಿ ನಾಡಹಬ್ಬ ದಸರಾದ ಸಂಭ್ರಮ ಜೋರಾಗಿದೆ. ವಿಜಯ ದಶಮಿ ಎಂದಾಕ್ಷಣ ರಾಜ್ಯದಲ್ಲಿ ಮೈಸೂರನ್ನು ಬಿಟ್ಟರೆ ನೆನಪಾಗುವ ಮತ್ತೊಂದು ಊರೇ ಮಂಗಳೂರು. ಹೌದು..! ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿಯೂ ದಸರಾದ ಸಂಭ್ರಮ ಜೋರಾಗಿದೆ. ಹೀಗಾಗಿ ಶಿಕ್ಷಣ ಸಚಿವ ನಾಗೇಶ್ ಈ ಬಾರಿ ಮಧ್ಯವಾರ್ಷಿಕ ರಜೆಯನ್ನು ಮೈಸೂರು, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ಸೆಪ್ಟೆಂಬರ್ 26ರಿಂದ ನೀಡುವಂತೆ ಸೂಚನೆ ನೀಡಿದ್ದರು. ಈ ಸಂಬಂಧ ಟಿಪ್ಪಣಿಯನ್ನೂ ಹೊರಡಿಸಲಾಗಿದೆ. ಆದ್ರೀಗ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆ ಸೆಪ್ಟೆಂಬರ್ 26 ರಿಂದ ಶಾಲೆಗಳಿಗೆ ರಜೆ ಇಲ್ಲ, ಬದಲಾಗಿ ಅಕ್ಟೋಬರ್ 3 ರಿಂದ ಮಧ್ಯವಾರ್ಷಿಕ ರಜೆ ಆರಂಭವಾಗಲಿದೆ ಎಂದಿದೆ. ಇದರಿಂದಾಗಿ ದಸರಾ ರಜೆ (dasara Holiday) ವಿಚಾರದಲ್ಲಿ ಗೊಂದಲ ಏರ್ಪಟ್ಟಿದೆ.
ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ಜಿಲ್ಲಾಧಿಕಾರಿಗಳಿಗೆ ನೀಡಿರುವ ಸೂಚನೆಯ ಪ್ರಕಾರ, ಮಂಗಳೂರಿನಲ್ಲಿ ದಸರಾ ಹಬ್ಬವನ್ನು ಸಪ್ಟೆಂಬರ್ 26ರಿಂದ ಅಕ್ಟೋಬರ್ 10ರವರೆಗೆ ನೀಡಬೇಕು. ಶೈಕ್ಷಣಿಕ ಚಟುವಟಿಕೆಗಳನ್ನು ಸರಿದೂಗಿಸುವ ಹಾಗೂ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಜಯಂತಿಯನ್ನು ಆಚರಿಸಬೇಕು ಎಂಬ ಷರತ್ತಿನ ಮೇರೆಗೆ ಶಾಲೆಗಳಿಗೆ ರಜೆ ನೀಡಬೇಕು ಎಂದು ಸೂಚನೆ ನೀಡಿದ್ದರು. ಈ ಸೂಚನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ ಜಿಲ್ಲೆಯಾದ್ಯಂತ ಸೆಪ್ಟೆಂಬರ್ ೨೬ರಿಂದಲೇ ದಸರಾ ರಜೆ ಎಂದು ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕರು ತಿಳಿದುಕೊಂಡಿದ್ದರು.
ಸಚಿವರ ಈ ಸೂಚನೆಯ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಹಾಸ್ಟೆಲುಗಳಲ್ಲಿ ಇದ್ದುಕೊಂಡು ವ್ಯಾಸಂಗ ಮಾಡುತ್ತಿರುವ ಮಕ್ಕಳನ್ನು ಮನೆಗೆ ಕರೆದುಕೊಂಡು ಬರಲು ಪೋಷಕರು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ್ದಾರೆ. ಈ ನಡುವಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಮಧ್ಯ ವಾರ್ಷಿಕ ರಜೆ ಸೆಪ್ಟೆಂಬರ್ 26ರಿಂದ ಆರಂಭವಾಗುತ್ತೋ ಅಥವಾ ಇತರೆ ಜಿಲ್ಲೆಗಳಂತೆ ಅಕ್ಟೋಬರ್ ಮೂರರಿಂದ ಆರಂಭಗೊಳ್ಳುತ್ತೋ ಎಂಬುದೇ ಗೊಂದಲವಾಗಿ ಮಾರ್ಪಟ್ಟಿದೆ.

ಆದರೆ ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಣ ಇಲಾಖೆಯ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ಸೋಮವಾರದಿಂದ ಶಾಲೆಗಳಿಗೆ ರಜೆ ನೀಡುವ ಬಗ್ಗೆ ಜಿಲ್ಲಾ ಶಿಕ್ಷಣ ಇಲಾಖೆಗೆ ಯಾವುದೇ ಸೂಚನೆ ಈವರೆಗೆ ಬಂದಿಲ್ಲ. ಶಿಕ್ಷಣ ಸಚಿವರು ಹೇಳುವ ಪ್ರಕಾರ ನಾಳೆ ಶಾಲೆಯ ಕೊನೆಯ ದಿನವಾಗಬೇಕು. ಆದರೆ ಶಿಕ್ಷಣ ಇಲಾಖೆಯ ಆಯುಕ್ತರಿಂದಾಗಲಿ, ಜಿಲ್ಲಾಧಿಕಾರಿಗಳಿಂದಾಗಲಿ ಯಾವುದೇ ಸೂಚನೆ ಬಾರದೇ ನಾವು ಮಕ್ಕಳಿಗೆ ಏನನ್ನೂ ಹೇಳಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಇತ್ತ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೊರಡಿಸಿರುವ ಸುತ್ತೋಲೆಯಲ್ಲಿ ರಜೆ ಬಗ್ಗೆ ಸೂಚನೆ ನೀಡಿ ಎಂದು ಬರೆದಿದ್ದಾರೆಯೇ ಹೊರತು ಎಲ್ಲಿಯೂ ಕೂಡ ಮಧ್ಯ ವಾರ್ಷಿಕ ರಜೆ ಬಗ್ಗೆ ಆದೇಶ ಎಂದು ನೀಡದೇ ಇರುವುದು ಈ ಎಲ್ಲಾ ಗೊಂದಲಗಳಿಗೆ ಕಾರಣವಾಗಿದೆ.
ಇತ್ತ ಜಿಲ್ಲಾಡಳಿತವನ್ನು ಸಂಪರ್ಕಿಸಿದರೆ ಅವರು ಹೇಳುವ ಕತೆಯೇ ಬೇರೆ. ಜಿಲ್ಲಾಡಳಿತವು ಮಧ್ಯವಾರ್ಷಿಕ ರಜೆಯ ಕುರಿತು ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ.ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯೇ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎನ್ನುವುದು ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಬಂದ ಉತ್ತರವಾಗಿದೆ. ಶಿಕ್ಷಣ ಸಚಿವರ ಗೊಂದಲದ ಸೂಚನೆ, ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತದ ನಡುವಿನ ಸಮನ್ವಯದ ಕೊರತೆಯಿಂದಾಗಿ ಇಂದು ಪೋಷಕರು ಹಾಗೂ ಮಕ್ಕಳು ಮಧ್ಯವಾರ್ಷಿಕ ರಜೆ ಯಾವಾಗ ಎಂದು ತಲೆ ಕೆರೆದುಕೊಳ್ಳುವಂತಾಗಿದೆ.
ಇದನ್ನು ಓದಿ : Karnataka Dasara Holidays 2022 : ಸೆಪ್ಟೆಂಬರ್ 26 ರಿಂದ ದಸರಾ ರಜೆ ಘೋಷಣೆ : ಸಚಿವರಿಂದ ಮಹತ್ವದ ಆದೇಶ
ಇದನ್ನೂ ಓದಿ : SP Balasubrahmanyam : ಸಂಗೀತ ಮಾಂತ್ರಿಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಮದುವೆಯ ಹಿಂದಿದೆ ರೋಚಕ ಕಹಾನಿ
Confusion in Dakshina Kannada district over students’ mid-year vacation dasara Holiday