Dasara School Holidays : ಮಂಗಳೂರು ದಸರಾ : ಶಾಲೆಗಳಿಗೆ ಹೆಚ್ಚುವರಿ 4 ದಿನ ರಜೆ : ಆದೇಶ ಪ್ರಕಟ

ಮಂಗಳೂರು : (Dasara School Holidays) ದಸರಾ ರಜೆ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರು ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಸಪ್ಟೆಂಬರ್‌ 28 ರಿಂದ ನಾಲ್ಕು ದಿನಗಳ ಕಾಲ ಹೆಚ್ಚುವರಿ ರಜೆಯನ್ನು ನೀಡಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯೆಲ್ಲಿ ಸಪ್ಟೆಂಬರ್‌ 28 ರಿಂದ ಅಕ್ಟೋಬರ್‌ 1ರ ವರೆಗೆ 4 ದಿನಗಳ ಹೆಚ್ಚುವರಿ ರಜೆಯನ್ನು ಘೋಷಣೆ ಮಾಡಲಾಗಿದೆ.

ರಾಜ್ಯದ ಎಲ್ಲಾ ಶಾಲೆಗಳ ಶೈಕ್ಷಣಿಕ ಚಟುವಟಿಕೆಯನ್ನು ನಿಗದಿಪಡಿಸಿದ ಶೈಕ್ಷಣಿಕ ಮಾರ್ಗಸೂಚಿಯ ಅನ್ವಯ ಶಾಲೆಗಳಿಗೆ ದಸರಾ ರಜೆಯನ್ನು ಅಕ್ಟೋಬರ್‌ 3 ರಿಂದ ಅಕ್ಟೋಬರ್‌ 16 ರ ವರೆಗೆ ನಿಗದಿ ಪಡಿಸಲಾಗಿತ್ತು. ಆದರೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರ ಅನಮೋದನೆಯ ಮೇರೆಗೆ ರಾಜ್ಯ ಸರಕಾರ ಆದೇಶದಂತೆ ಮಂಗಳೂರು ತಾಲೂಕಿನ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ನವರಾತ್ರಿ ಹಬ್ಬಕ್ಕೆ ಪೂರಕವಾಗುವಂತೆ ದಸರಾ ರಜೆಯನ್ನು ಸೆಪ್ಟೆಂಬರ್‌ 28 ರಿಂದ ಅಕ್ಟೋಬರ್‌ 1 ರ ವರೆಗೆ ಘೋಷಣೆ ಮಾಡಲಾಗಿದೆ.

ಆದರೆ ಅಕ್ಟೋಬರ್‌ 2 ರಂದು ಗಾಂಧಿ ಜಯಂತಿಯನ್ನು ಕಡ್ಡಾಯವಾಗಿ ಆಚರಣೆ ಮಾಡಬೇಕು. ಅಲ್ಲದೇ ಹೆಚ್ಚುವರಿಯಾಗಿ ನೀಡಲಾಗಿರುವ ನಾಲ್ಕು ದಿನಗಳ ರಜೆಯನ್ನು ನವೆಂಬರ್‌ ತಿಂಗಳಿನಲ್ಲಿ ನಾಲ್ಕು ಶನಿವಾರ ಪೂರ್ಣ ತರಗತಿ ಹಾಗೂ ಎರಡು ಭಾನುವಾರದಂತೆ ಪೂರ್ಣ ಶಾಲಾ ಕೆಲಸದ ದಿನಗಳಾಗಿ ನಡೆಸಿ ಸರಿದೂಗಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಮೈಸೂರು, ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಸರಾ ಆಚರಣೆಯ ಹಿನ್ನೆಲೆಯಲ್ಲಿ ಸಪ್ಟೆಂಬರ್‌ 26 ರಿಂದ ದಸರಾ ರಜೆಯನ್ನು ನೀಡುವಂತೆ ಸೂಚನೆಯನ್ನು ನೀಡಲಾಗಿತ್ತು. ಆದರೆ ಮೈಸೂರು ಹಾಗೂ ಕೊಡಗು ಜಿಲ್ಲೆಯಲ್ಲಿ ಶಾಲೆಗಳಿಗೆ ಆಯಾಯ ಜಿಲ್ಲಾಧಿಕಾರಿಗಳು ರಜೆಯನ್ನು ಘೋಷಣೆ ಮಾಡಿದ್ದರು. ಆದರೆ ಮಂಗಳೂರು ಜಿಲ್ಲಾಡಳಿತ ದಸರಾ ರಜೆ ಘೋಷಣೆ ಮಾಡದೇ ಇರುವುದು ಗೊಂದಲಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯೂಸ್‌ ನೆಕ್ಸ್ಟ್‌ ವರದಿಯನ್ನು ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಇದೀಗ ಶಿಕ್ಷಣ ಇಲಾಖೆ ಆದೇಶವನ್ನು ಹೊರಡಿಸಿದ್ದು, ಹೆಚ್ಚುವರಿಯಾಗಿ ನಾಲ್ಕು ದಿನ ದಸರಾ ರಜೆಯನ್ನು ಘೋಷಣೆ ಮಾಡಿದೆ.

ಇದನ್ನೂ ಓದಿ : Teachers fear NEP : ಮುಂದಿನ ವರ್ಷದಿಂದ ರಾಜ್ಯದಲ್ಲಿ NEP ಜಾರಿ: 40 ಸಾವಿರ ಶಿಕ್ಷಕಿಯರಿಗೆ ಬೀದಿಗೆ ಬರೋ ಆತಂಕ

ಇದನ್ನೂ ಓದಿ : Mid-year Vacation : ಮಂಗಳೂರಲ್ಲಿ ಸೆ.26 ರಿಂದ ದಸರಾ ರಜೆ ಇಲ್ಲ: ಗೊಂದಲ ಮೂಡಿಸಿದ ಶಿಕ್ಷಣ ಸಚಿವರ ಸೂಚನೆ

Dasara School Holidays Mangaluru Dasara Additional 4 days holiday for schools

Comments are closed.