taking off the shirt to enter the temple :ಶರ್ಟ್ ತೆಗೆದು ದೇವಸ್ಥಾನದ ಒಳಹೋಗುವ ಪದ್ದತಿಗೆ ವಿರೋಧ

taking off the shirt to enter the temple :ಕೆಲ ದೇವಸ್ಥಾನಗಳಿಗೆ ಪ್ರವೇಶಿಸುವ ಮೊದಲು ಶರ್ಟ್, ಬನಿಯನ್ ಕಳಚಿ ಒಳಪ್ರವೇಶಿಸಬೇಕು ಎಂಬ ನಿಯಮವಿದೆ. ಇಲ್ಲದಿದ್ದಲ್ಲಿ ದೇವಾಲಯ ಪ್ರವೇಶ ನಿರಾಕರಿಸಲಾಗುತ್ತದೆ. ಆದ್ರೆ ಇದೀಗ ಈ ನಿಯಮಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಮಂಗಳೂರಿನ ಎನ್ಇಸಿಎಫ್,ದತ್ತಿ ಇಲಾಖೆಗೆ ದೂರು ಅರ್ಜಿ ಸಲ್ಲಿಸಿದೆ.

ಹೌದು..ಕರಾವಳಿಯ ಪ್ರಮುಖ ದೇವಸ್ಥಾನಗಳು ಸೇರಿದಂತೆ ರಾಜ್ಯದ ಕೆಲ ದೇವಸ್ಥಾನಗಳಲ್ಲಿ ಪುರುಷರು ಶರ್ಟ್ ಬನಿಯನ್ ತೆಗೆದು ದೇವಸ್ಥಾನ ಪ್ರವೇಶಿಸಬೇಕು ಎಂಬ ಅಲಿಖಿತ ನಿಯಮವಿದೆ. ಆದ್ರೆ ಈ ನಿಯಮ ಅವೈಜ್ಞಾನಿಕವಾಗಿದ್ದು ಈ ಪದ್ದತಿಗೆ ತಡೆ ನೀಡುವಂತೆ ಮಂಗಳೂರಿನ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಒತ್ತಾಯಿಸಿದೆ. ಕರಾವಳಿಯ ಅತ್ಯಂತ ಪುರಾತನ ಹಾಗೂ ಪ್ರಸಿದ್ಧ ದೇವಾಲಯಗಳಾದ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಕೊಲ್ಲೂರು ದೇವಸ್ಥಾನಗಳ ವಿರುದ್ಧ ಈ ದೂರು ಅರ್ಜಿ ಸಲ್ಲಿಕೆಯಾಗಿದೆ. ಈ ದೂರಿನಲ್ಲಿ ದೇವರ ದರ್ಶನ ಪಡೆಯಲು‌ ದೇವಾಲಯ ಪ್ರವೇಶಕ್ಕೆ ಮುನ್ನ ಅಂಗಿ, ಬನಿಯನ್ ಕಳಚಿ ಪ್ರವೇಶ ಮಾಡುವ ಪದ್ಧತಿ ಅಷ್ಟೊಂದು ಸಮಂಜಸವಲ್ಲ. ಹಿಂದೂ ಸಂಪ್ರದಾಯದಲ್ಲಿ ಎಲ್ಲೂ ದೇವಾಲಯಕ್ಕೆ ಪ್ರವೇಶಿಸಲು‌ ಮೇಲುಡುಗೆ ಕಳಚುವ ಯಾವ ಪದ್ಧತಿಯೂ ಇಲ್ಲ. ಅಲ್ಲದೆ ಈ ನಿಯಮ ಸರಕಾರದ ನಿಯಮಾವಳಿಗಳ ಪ್ರಕಾರದಲ್ಲೂ ಇಲ್ಲ ಎಂದು ಎನ್ಇಸಿಎಫ್ ಹೇಳಿದೆ.

ಅಂಗಿ ಕಳಚುವುದರಿಂದ ಚರ್ಮವ್ಯಾಧಿ, ವಿಕಲಚೇತನರಿಗೆ ಮುಜುಗರವೂ ಉಂಟಾಗುತ್ತದೆ ಎಂಬುದು ಎನ್ಇಸಿಎಫ್ ವಾದ. ಜೊತೆಗೆ ಕೆಲ ಭಕ್ತರಿಗೆ ಗೊಂದಲವೂ ಉಂಟಾಗುತ್ತದೆ. ಆದ್ದರಿಂದ ಇದು ಸಂವಿಧಾನದ ಹಕ್ಕಿನ ಉಲ್ಲಂಘನೆಯೂ‌ ಆಗುತ್ತಾದ್ದರಿಂದ ಪುರುಷರ ಮೇಲುಡುಗೆ ಕಳಚುವ ವಿಚಾರದಲ್ಲಿ ಎನ್ಇಸಿಎಫ್ ಆಕ್ಷೇಪ ಎತ್ತಿದೆ. ಈ ಬಗ್ಗೆ ಧಾರ್ಮಿಕ ದತ್ತಿ ಇಲಾಖೆಗೆ ತಕ್ಷಣ ಈ ನಿಯಮವನ್ನು ರದ್ದುಪಡಿಸುವಂತೆ ಎನ್ಇಸಿಎಫ್ ಒತ್ತಾಯಿಸಿದೆ. ಇದಕ್ಕೆ 15 ದಿನಗಳಲ್ಲಿ ಸ್ಪಷ್ಟ ಉತ್ತರ ನೀಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾನೂನಾತ್ಮಕವಾಗಿ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಆದ್ರೆ ಈ ಆಕ್ಷೇಪದ ಬಗ್ಗೆ ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರತಿಕ್ರಿಯಿಸಿದ್ದು ಈ ಸಮಸ್ಯೆಯನ್ನು ಕೂತು ಬಗೆಹರಿಸಬೇಕು ಎಂದು ಹೇಳಿದ್ದಾರೆ.

ಕುಕ್ಕೆ ಹಾಗೂ ಕೊಲ್ಲೂರಿನಲ್ಲಿ ಈ ರೀತಿಯ ನಿಯಮಗಳು ಇದೆಯಾ ಎಂಬ ಬಗ್ಗೆ ಎನ್ಇಸಿಎಫ್ ಮಾಹಿತಿ ಹಕ್ಕಿನಡಿ ಮಾಹಿತಿ ಕೇಳಿದೆ. ಆದ್ರೆ ಸರ್ಕಾರದ ಕಡೆಯಿಂದ ಈ ರೀತಿಯ ನಿಯಮ ಜಾರಿಯ ಯಾವುದೇ ಆದೇಶ ಬಂದಿಲ್ಲ ಎಂದು ಮಾಹಿತಿ ಹಕ್ಕಿನಡಿ ಉತ್ತರ ಲಭ್ಯವಾಗಿದೆ. ಒಟ್ಟಿನಲ್ಲಿ ಈ ಗೊಂದಲ ಸಮಸ್ಯೆ ಮುಂದೆ ಹೇಗೆ ಬಗೆ ಹರಿಯಲಿದೆ ಎಂದು ಕಾದುನೋಡಬೇಕಿದೆ

ಇದನ್ನು ಓದಿ : fake lokayukta officer :ಲೋಕಾಯುಕ್ತ ಅಧಿಕಾರಿ ಸೋಗಿನಲ್ಲಿ ಬಂದು ತಹಶೀಲ್ದಾರ್​ ಕಚೇರಿಯಲ್ಲಿ ತಲಾಶ್​ : ದಾಖಲೆ ಕೇಳುತ್ತಿದ್ದಂತೆಯೇ ಎಸ್ಕೇಪ್​.

ಇದನ್ನೂ ಓದಿ :SP Balasubrahmanyam : ಸಂಗೀತ ಮಾಂತ್ರಿಕ ಎಸ್​​.ಪಿ ಬಾಲಸುಬ್ರಹ್ಮಣ್ಯಂ ಮದುವೆಯ ಹಿಂದಿದೆ ರೋಚಕ ಕಹಾನಿ

Opposition to the practice of taking off the shirt to enter the temple

Comments are closed.