ಬೆಂಗಳೂರು : ಶಾಲೆಗಳಿಗೆ ನೀಡಲಾಗುವ ದಸರಾ ರಜೆಯನ್ನು ವಿಸ್ತರಣೆ ( Dasara Holiday Extend) ಮಾಡುವಂತೆ ಶಾಲಾ ಶಿಕ್ಷಣ ಇಲಾಖೆಗೆ ರಾಜ್ಯ ಶಿಕ್ಷಕರ ಸಂಘವು ಮನವಿ ಮಾಡಿದೆ. ಇದರ ಬೆನ್ನಲ್ಲೇ ಇದೀಗ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ (Basavaraj Horatti) ಅವರು ದಸರಾ ರಜೆಯನ್ನು ನವೆಂಬರ್ 1ರ ವರೆಗೆ ವಿಸ್ತರಣೆ ಮಾಡುವಂತೆ ಆಗ್ರಹಿಸಿದ್ದಾರೆ.
ಹಿಂದೆ ದಸರಾ ರಜೆಗಳು ಮೊದಲೇ ನಿಗದಿ ಆಗಿರುತ್ತಿತ್ತು. ಆದರೆ ಜ್ಞಾನ ಇಲ್ಲದ ಅಧಿಕಾರಿಗಳು ಹೇಗೆ ಬೇಕೋ ಹಾಗೆ ರಜೆಯ ದಿನಗಳನ್ನು ನಿಗದಿ ಪಡಿಸುತ್ತಿದ್ದಾರೆ. ಇಂದು ಶಿಕ್ಷಣ ವ್ಯವಸ್ಥೆ ಸರಿಯಾಗಿಲ್ಲ ಎಂದು ಅವರು ಕಿಡಿಕಾರಿದ್ದಾರೆ. ಮಾತ್ರವಲ್ಲ ಈ ಕುರಿತು ರಾಜ್ಯ ಸರಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ಮಾಧ್ಯಮಗಳಿಗೆ ಹೊರಟ್ಟಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಕರೆ ಮಾಡಿರುವ ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಮಕ್ಕಳ ಹಿತದೃಷ್ಟಿಯಿಂದ ದಸರಾ ರಜೆಯನ್ನು ನವೆಂಬರ್ 1 ವರೆಗೆ ವಿಸ್ತರಣೆ ಮಾಡುವಂತೆ ಸಲಹೆ ನೀಡಿದ್ದಾರೆ. ಅಲ್ಲದೇ ಹಿಂದಿನ ರಜಾ ಪದ್ದತಿಯನ್ನೇ ಮುಂದುವರಿಸಿಕೊಂಡು ಹೋಗುವಂತೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ : ದಸರಾ ರಜೆ ಕರ್ನಾಟಕದಲ್ಲಿ ಅಕ್ಟೋಬರ್ 31ರವರೆಗೆ ವಿಸ್ತರಣೆ !
ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರದಲ್ಲಿ ವರ್ಷಂಪ್ರತಿ ಅಕ್ಟೋಬರ್ 3 ರಿಂದ ಅಕ್ಟೋಬರ್ 31ರ ವರೆಗೆ ದಸರಾ ರಜೆಯನ್ನು ನೀಡಲಾಗುತ್ತಿತ್ತು. ಈ ಹಿಂದೆ 29 ದಿನಗಳ ಕಾಲ ಸಿಗುತ್ತಿದ್ದ ರಜೆಯನ್ನು 14 ರಿಂದ 15 ದಿನಗಳಿಗೆ ಕಡಿತ ಮಾಡಲಾಗಿದೆ. ಇದು ಸರಿಯಲ್ಲ, ಮಧ್ಯಂತರ ರಜೆಯ ಅವಧಿಯನ್ನು ಪುನರ್ ಪರಿಶೀಲನೆ ಮಾಡುವಂತೆ ಶಿಕ್ಷಕರ ಸಂಘ ಪತ್ರದಲ್ಲಿ ಉಲ್ಲೇಖಿಸಿದೆ.
ವರ್ಷದಲ್ಲಿ 230 ದಿನಗಳ ಕಾಲ ಶೈಕ್ಷಣಿಕ ಚಟುವಟಿಕೆ ನಡೆಯುತ್ತಿತ್ತು. ಆದರೆ ದಸರಾ ರಜೆ, ಬೇಸಿಗೆ ರಜೆ ಕಡಿತದಿಂದ ಶಾಲಾ ದಿನಗಳ ಸಂಖ್ಯೆ 260 ಕ್ಕೆ ಏರಿಕೆಯಾಗಿದೆ. ಇದು ಮಕ್ಕಳ ಮೇಲೆ ಒತ್ತಡವನ್ನು ತರುತ್ತದೆ. ಇನ್ನು ಶಿಕ್ಷಣ ಇಲಾಖೆಯು ರಜಾ ಸಹಿತ ಇಲಾಖೆಯಾಗಿದೆ.
ಇದನ್ನೂ ಓದಿ : 5,8,9ನೇ ತರಗತಿಗೆ ಪಬ್ಲಿಕ್ ಪರೀಕ್ಷೆ : ರಾಜ್ಯ ಸರಕಾರದಿಂದ ಅಧಿಸೂಚನೆ ಪ್ರಕಟ
ರಜಾ ರಹಿತ ಇಲಾಖೆಯವರಿಗೆ ವಾರ್ಷಿಕವಾಗಿ 20 ಗಳಿಕೆ ರಜೆಯನ್ನು ನೀಡಲಾಗುತ್ತಿದೆ. ಆದರೆ ಶಿಕ್ಷಣ ಇಲಾಖೆ ಶಿಕ್ಷಕರಿಗೆ ವಾರ್ಷಿಕವಾಗಿ ಕೇವಲ 10 ದಿನಗಳ ಗಳಿಕೆ ರಜೆಯನ್ನು ಮಾತ್ರವೇ ನೀಡುತ್ತಿದೆ. ಜೊತೆಗೆ ಬೇಸಿಗೆ ರಜೆಯ ಅವಧಿ (ಎಪ್ರಿಲ್- ಮೇ ತಿಂಗಳು)ಯಲ್ಲಿ ಪ್ರೌಢ ಶಾಲಾ ಶಿಕ್ಷಕರು ಮೌಲ್ಯಮಾಪನ ನಡೆಸಬೇಕಾಗಿದೆ. ಹೀಗಾಗಿ ದಸರಾ ರಜೆ ಕಡಿತ ಮಾಡಿರುವುದ ಅವೈಜ್ಞಾನಿಕ.

ದಸರಾ ರಜೆ ಕಡಿತದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಶಿಕ್ಷಕರ ಸಂಘವು ಮಧ್ಯಂತರ ರಜೆಯನ್ನು ಪುನರ್ ಪರಿಶೀಲನೆ ಮಾಡುವಂತೆ ಶಿಕ್ಷಣ ಸಚಿವರಿಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಜಗದೀಶ್ ಶೆಟ್ಟರ್ ಅವರಿಗೆ ಮನವಿಯನ್ನು ಸಲ್ಲಿಸಿದೆ. ಮಧ್ಯಂತತ ರಜೆಯನ್ನು ವಿಸ್ತರಿಸುವಂತೆ ಆಗ್ರಹಿಸಿದೆ.
ಇದನ್ನೂ ಓದಿ : ಅಂಗನವಾಡಿ ಕೇಂದ್ರಕ್ಕೆ ದಿಢೀರ್ ಭೇಟಿ : ಮಕ್ಕಳ ದುಸ್ಥಿತಿ ಕಂಡು ಮರುಗಿದ ನ್ಯಾಯಾಧೀಶೆ ಅರುಣಾ ಕುಮಾರಿ
ಕಳೆದ ಹಲವು ವರ್ಷಗಳಿಂದಲೂ ದಸರಾ ರಜೆ ಹಾಗೂ ಬೇಸಿಗೆ ರಜೆಗೆ ಕತ್ತರಿ ಹಾಕಲಾಗುತ್ತಿದೆ. ಕೋವಿಡ್ ನಂತರದಲ್ಲಿ ಶಾಲಾ ರಜೆಯ ವಿಚಾರದಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ. ಮಕ್ಕಳಿಗೆ ಶಿಕ್ಷಣದ ಹೆಸರಲ್ಲಿ ಒತ್ತಡ ಹೇರಲಾಗಿತ್ತಿದೆ. ಹಿಂದಿನ ಪದ್ದತಿಯನ್ನು ಬಿಟ್ಟು ಹೊಸ ರಜಾ ಪದ್ದತಿ ಶಿಕ್ಷಕರು ಹಾಗೂ ಮಕ್ಕಳ ಪಾಲಿಗೆ ಸಜೆಯಂತಾಗಿದೆ ಅನ್ನೋ ಆರೋಪ ಕೇಳಿಬರುತ್ತಿದೆ.
ಶಿಕ್ಷಕರ ಸಂಘದ ಮನವಿಯ ಬೆನ್ನಲ್ಲೇ ವಿಧಾನಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಅವರು ಸರಕಾರಕ್ಕೆ ಚಾಟಿ ಬೀಸಿದ್ದಾರೆ. ದಸರಾ ರಜೆಯನ್ನು ವಿಸ್ತರಣೆಯನ್ನು ಶಿಕ್ಷಣ ಇಲಾಖೆ ಮಾಡುತ್ತಾ ? ಅಥವಾ ಅಕ್ಟೋಬರ್ 25 ರಿಂದಲೇ ಶಾಲೆಗಳು ಪುನರಾರಂಭ ಆಗಲಿದೆಯಾ ಅನ್ನೋದು ನಾಳೆ ನಿರ್ಧಾರವಾಗುವ ಸಾಧ್ಯತೆಯಿದೆ.
Dasara School Holiday Big Updates Dasara Vacation till extend November 01 Demands Karnataka Legislative Council Chairman Basavaraj Horatti