ಬೆಂಗಳೂರು : ಶಾಲೆಗಳಿಗೆ ದಸರಾ ರಜೆ (Dasara School Holiday) ವಿಸ್ತರಣೆಗೆ ಸಂಬಂಧಿಸಿದಂತೆ ಶಿಕ್ಷಕರ ಸಂಘದ ಮನವಿಗೆ ರಾಜ್ಯ ಸರಕಾರ ಹಾಗೂ ಶಿಕ್ಷಣ ಇಲಾಖೆ ಕೊನೆಗೂ ಮಣಿದಿಲ್ಲ. ಹೀಗಾಗಿ ವಿಜಯ ದಶಮಿಯ (Vijaya Dashami) ದಸರಾ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗದೇ ಶಿಕ್ಷಕರು, ಮಕ್ಕಳು ಶಾಲೆಗೆ ಮರಳಬೇಕಾದ ಅನಿವಾರ್ಯತೆ ಎದುರಾಗಿದ್ದು, ಶಿಕ್ಷಣ ಸಚಿವರ ವಿರುದ್ದ ಆಕ್ರೋಶ ವ್ಯಕ್ತವಾಗುತ್ತಿದೆ.

ಶಿಕ್ಷಣ ಇಲಾಖೆ ಮಧ್ಯಂತರ ವಾರ್ಷಿಕ ರಜೆ (ದಸರಾ ರಜೆ)ಯನ್ನು (Middle Term School Holiday) ವಿಸ್ತರಣೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 25 ರಿಂದ ಕರ್ನಾಟಕದಲ್ಲಿ ಶಾಲೆಗಳು ಪುನರಾರಂಭಗೊಳ್ಳಲಿದೆ. ದಸರಾ ಸಂಭ್ರಮದಲ್ಲಿದ್ದ ಶಿಕ್ಷಕರು ಮಕ್ಕಳು ಮೈ ಕೊಡವಿಕೊಂಡು ಮತ್ತೆ ಶಾಲೆಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ.
ಮಕ್ಕಳು, ಶಿಕ್ಷಕರಿಗಿಲ್ಲ ದಸರಾ ನೋಡುವ ಭಾಗ್ಯ
ಮೈಸೂರಿನಲ್ಲಿ ನಡೆಯುವ ದಸರಾವನ್ನು ನಾಡಹಬ್ಬ ಎಂದು ಕರೆಯಲಾಗುತ್ತಿದೆ. ರಾಜ್ಯದ ಮೂಲೆ ಮೂಲೆಗಳಿಂದಲೂ ಜನರು ದಸರಾ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಮೈಸೂರಿಗೆ ಆಗಮಿಸುತ್ತಾರೆ. ಆದ್ರೆ ದಸರಾ ರಜೆ ಕಡಿತದ ಹಿನ್ನೆಲೆಯಲ್ಲಿ ದಸರಾ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗದೇ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ನಿರಾಸೆ ಅನುಭವಿಸಿದ್ದಾರೆ.
ವರ್ಷಂಪ್ರತಿ ಮಧ್ಯ ವಾರ್ಷಿಕ ರಜೆ( ದಸರಾ ರಜೆ) ಯನ್ನು ಅಕ್ಟೋಬರ್ 03 ರಿಂದ ಅಕ್ಡೋಬರ್ 31 ರ ವರೆಗೆ ನೀಡಲಾಗುತ್ತದೆ. ಆದರೆ ಕೊರೊನಾ ವೈರಸ್ ಸೋಂಕಿನ ನಂತರದಲ್ಲಿ ದಸರಾ ರಜೆ, ಬೇಸಿಗೆ ರಜೆಗಳಿಗೆ ಕತ್ತರಿ ಹಾಕಲಾಗಿದೆ. ವಿದ್ಯಾರ್ಥಿಗಳ ಮೇಲೆ ಅತಿಯಾದ ಒತ್ತಡವನ್ನು ಹೇರುವ ಕಾರ್ಯವನ್ನು ಶಿಕ್ಷಣ ಇಲಾಖೆ ಮಾಡುತ್ತಿದೆ ಅನ್ನೋ ಆರೋಪ ಕೇಳಿಬಂದಿದೆ.

ಈ ವರ್ಷ ದಸರಾ ರಜೆ ಅಕ್ಟೋಬರ್ 08 ರಿಂದ 24 ರ ವರೆಗೆ ನೀಡಲಾಗಿತ್ತು. ಆದ್ರೆ ಅಕ್ಟೋಬರ್ 24 ರಂದು ವಿಜಯದಶಮಿ. ನಾಡಿನ ಪ್ರತೀ ಮನೆಗಳಲ್ಲೂ ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಆದರೆ ದುರದೃಷ್ಟ ಅಂದ್ರೆ ಈ ವಿಜಯ ದಶಮಿಯನ್ನು ಬಹುತೇಕರಿಗೆ ಆಚರಿಸೋದಕ್ಕೆ ಸಾಧ್ಯವಾಗಿಲ್ಲ.
ಅದ್ರಲ್ಲೂ ಮಂಗಳೂರು, ಮಡಿಕೇರಿಯಲ್ಲಿ ದಸರಾವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಅಷ್ಟೇ ಅಲ್ಲಾ ರಾಜ್ಯ ಪ್ರತೀ ಜಿಲ್ಲೆಗಳಲ್ಲಿಯೂ ದಸರಾ ಸಂಭ್ರಮವಿರುತ್ತದೆ. ಆದರೆ ಶಿಕ್ಷಣ ಇಲಾಖೆ ಮಾಡಿರುವ ಎಡವಟ್ಟಿನಿಂದಾಗಿ ಶಿಕ್ಷಕರು, ವಿದ್ಯಾರ್ಥಿಗಳು ಬೇಸರಿಂದಲೇ ಶಾಲೆಗಳಿಗೆ ಹೆಜ್ಜೆ ಹಾಕಬೇಕಾದ ಅನಿವಾರ್ಯತೆ ಎದುರಾಗಿದೆ.
ಇದನ್ನೂ ಓದಿ : ಟ್ಯೂಶನ್ ಮಾಫಿಯಾಗೆ ಬೀಳುತ್ತಾ ಕಡಿವಾಣ: ಸರ್ಕಾರದಿಂದ ಹೊರಬಿತ್ತು ಖಡಕ್ ಆದೇಶ
ಮಧ್ಯಂತರ ರಜೆ (ದಸರಾ ರಜೆ ) ಕಡಿತ, ಮಕ್ಕಳಿಗೆ ಹೆಚ್ಚಿದ ಒತ್ತಡ :
ಕರ್ನಾಟಕ ರಾಜ್ಯದಲ್ಲಿ ಹಿಂದಿನಿಂದಲೂ ಅಕ್ಟೋಬರ್ 2 ರಿಂದ ಅಕ್ಟೋಬರ್ 31 ರ ವರೆಗೆ ದಸರಾ ರಜೆಯನ್ನು ನೀಡಲಾಗುತ್ತಿತ್ತು. ಅಲ್ಲದೇ ಎಪ್ರಿಲ್ 10 ರಿಂದ ಮೇ 31 ರ ವರೆಗೆ ಬೇಸಿಗೆ ರಜೆಯನ್ನು ಘೋಷಿಸಲಾಗುತ್ತಿತ್ತು. ಆದ್ರೆ ಈ ರಜಾ ಅವಧಿಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗುತ್ತಿರಲಿಲ್ಲ. ಕಳೆದ ಕೆಲವು ವರ್ಷಗಳಿಂದಲೂ ದಸರಾ ಹಾಗೂ ಬೇಸಿಗೆ ರಜೆಗೆ ಕತ್ತರಿ ಹಾಕಲಾಗುತ್ತಿದೆ ಅನ್ನೋ ಆರೋಪ ಕೇಳಿಬಂದಿದೆ.
ಮಕ್ಕಳಿಗೆ ವಾರ್ಷಿಕವಾಗಿ ಎಷ್ಟು ದಿನಗಳ ಕಾಲ ಪಠ್ಯ ಬೋಧನೆ ಮಾಡಬೇಕು. ಎಷ್ಟು ದಿನಗಳ ಕಾಲ ರಜೆ ಘೋಷಿಸಬೇಕು ಅನ್ನೋದನ್ನು ತಜ್ಞರೇ ನಿರ್ಧರಿಸಿ ನಿಗದಿ ಪಡಿಸಿದ್ರು. ಆದ್ರೆ ಶಿಕ್ಷಣ ಮಹತ್ವವನ್ನೇ ಅರಿಯದ ಅಧಿಕಾರಿಗಳು, ಜನಪ್ರತಿನಿಧಿಗಳ ಅಸಡ್ಡೆಯಿಂದಾಗಿ ಶಿಕ್ಷಣ ಮಕ್ಕಳ ಪಾಲಿಗೆ ಹೊರೆಯಾಗುತ್ತಿದೆ.
ರಜೆ ರಹಿತ ಇಲಾಖೆಯನ್ನಾಗಿ ಮಾರ್ಪಡಿಸಿ : ಶಿಕ್ಷಕರ ಬೇಡಿಕೆ
ಪಠ್ಯ, ಪಠ್ಯೇತರ ಚಟುವಟಿಕೆ, ಮೌಲ್ಯಮಾಪನ, ಟ್ರಾಫಿಕ್ ಸಮಸ್ಯೆ ಸೇರಿದಂತೆ ನಾನಾ ಕಾರಣದಿಂದಾಗಿ ಶಿಕ್ಷಕರು ಒತ್ತಡದಲ್ಲೇ ಪಾಠ ಬೋಧಿಸುವ ಅನಿರ್ವಾಯತೆ ಎದುರಾಗಿದೆ. ದಸರಾ, ಬೇಸಿಗೆ ರಜೆ ನೀಡುವ ಕಾರಣದಿಂದಲೇ ರಜಾ ಸಹಿತ ಇಲಾಖೆ ಎಂದು ಪರಿಗಣಿಸಲಾಗಿದೆ. ಇತರ ಇಲಾಖೆಯ ಅಧಿಕಾರಿಗಳಿಗೆ ವಾರ್ಷಿಕ 30 ಗಳಿಕೆ ರಜೆ ಸಿಗುತ್ತದೆ. ಆದರೆ ಶಿಕ್ಷಕರಿಗೆ ಸಿಗುತ್ತಿರುವುದು ಕೇವಲ 10 ಗಳಿಕೆಯ ರಜೆ ಮಾತ್ರ.
ಇದನ್ನೂ ಓದಿ : ದಸರಾ ರಜೆ ಕರ್ನಾಟಕದಲ್ಲಿ ಅಕ್ಟೋಬರ್ 31ರವರೆಗೆ ವಿಸ್ತರಣೆ !
ಸರಕಾರಿ ನೌಕರರಿಗೆ ಎರಡನೇ ಶನಿವಾರ ನಾಲ್ಕನೇ ಶನಿವಾರ ರಜೆಯ ಸೌಲಭ್ಯವಿದೆ. ಆದರೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಈ ಸೌಲಭ್ಯಗಳಿದ್ದರೂ ಕೂಡ ಶಿಕ್ಷಕರಿಗೆ ಮಾತ್ರ ಇಲ್ಲ. ಆದರೆ ಇಲಾಖೆಯ ಅಧಿಕಾರಿಗಳು ಶಿಕ್ಷಕರ ಮೇಲೆ ದರ್ಪ ಮೆರೆಯುತ್ತಿದ್ದಾರೆಂಬ ಆರೋಪವೂ ಕೇಳಿಬರುತ್ತಿದೆ.
ಇನ್ನು ದಸರಾ ರಜೆ ವಿಸ್ತರಣೆ ಮಾಡದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಶಾಲಾ ಆರಂಭದಲ್ಲಿಯೇ ದಸರಾ ರಜೆಗೆ ಕತ್ತರಿ ಹಾಕಲಾಗಿದೆ. ಇದೀಗ ಶಿಕ್ಷಕರ ಸಂಘ ಸರಕಾರಕ್ಕೆ ಮನವಿ ಮಾಡಿದೆ. ಆದರೆ ಸರಕಾರ ವಿಸ್ತರಣೆ ಮಾಡಲು ಆರು ತಿಂಗಳ ಕಾಲಾವಕಾಶ ಬೇಕೇ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸುತ್ತಿದ್ದಾರೆ.
ದಸರಾ ರಜೆ ಕಡಿತ, ಗಳಿಕೆ ರಜೆ ಮಂಜೂರು ಮಾಡಿ :
ಹಿಂದಿನಿಂದಲೂ ನಡೆದುಕೊಂಡು ಬಂದಿರುವ ದಸರಾ ರಜೆಗೆ ಕತ್ತರಿ ಹಾಕಲಾಗಿದ್ದು, ಇದೀಗ ದಸರಾ ರಜೆ ಕಡಿತ ಮಾಡಿರುವಷ್ಟು ದಿನಗಳಿಗೆ ಗಳಿಕೆಯ ರಜೆಯನ್ನು ಮಂಜೂರು ಮಾಡಿ ಎಂಬ ಬೇಡಿಕೆ ಇದೀಗ ಶಿಕ್ಷಕರ ವಲಯದಲ್ಲಿ ಕೇಳಿಬಂದಿದೆ. ರಾಜ್ಯದಾದ್ಯಂತ ಶಿಕ್ಷಕರು ಗಳಿಕೆ ರಜೆ ಮಂಜೂರು ಮಾಡುವಂತೆ ಬಿಇಒಗಳಿಗೆ ಅರ್ಜಿ ಸಲ್ಲಿಸಬೇಕೆಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.
ಸಭಾಪತಿ ಹೊರಟ್ಟಿ ಮಾತಿಗೂ ಕ್ಯಾರೇ ಅನ್ನದ ಶಿಕ್ಷಣ ಸಚಿವ ಮಧು ಬಂಗಾರಪ್ಪ
ವಿಜಯದಶಮಿಯ ಮರುದಿನವೇ ಶಾಲೆಗಳನ್ನು ಪುನರರಾಂಭ ಮಾಡುವುದರಿಂದ ಹಬ್ಬದ ಸಂಭ್ರಮದಲ್ಲಿರುವ ಮಕ್ಕಳ ಮೇಲೆ ಒತ್ತಡ ಬೀಳುತ್ತದೆ. ಈ ಹಿಂದೆ ನೀಡುತ್ತಿದ್ದ ಸಂಪ್ರದಾಯದಂತೆಯೇ ಈ ಬಾರಿಯೂ ದಸರಾ ರಜೆಯನ್ನು ಅಕ್ಟೋಬರ್ 31 ರ ವರೆಗೂ ವಿಸ್ತರಣೆ ಮಾಡುವಂತೆ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರೇ ಖುದ್ದು ಸಚಿವ ಮಧು ಬಂಗಾರಪ್ಪ ಅವರಲ್ಲಿ ಮನವಿ ಮಾಡಿಕೊಂಡಿದ್ದರು.
ಪತ್ರ ಹಾಗೂ ದೂರವಾಣಿ ಕರೆ ಮಾಡಿ ಶಿಕ್ಷಕರ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟಿದ್ದರು. ಆದರೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಶಿಕ್ಷಕರು ಹಾಗೂ ವಿಧಾನ ಪರಿಷತ್ ಸಭಾಪತಿಗಳು ನೀಡಿದ ಮನವಿಗೆ ಕ್ಯಾರೇ ಎಂದಿಲ್ಲ.
Dasara school holidays No extend Schools resume in Karnataka from October 25th