ಇನ್ಮುಂದೇ ಶಾಲೆಯಲ್ಲಿ ಮೊಟ್ಟೆ ವಿತರಣೆ ಕಡ್ಡಾಯ : ಶಿಕ್ಷಣ ಇಲಾಖೆಯಿಂದ ಅಧಿಕೃತ‌ ಆದೇಶ

ಬೆಂಗಳೂರು : ನೊರೆಂಟು ಚರ್ಚೆಗಳ ಬಳಿಕ ಈಗ ಕೊನೆಗೂ ರಾಜ್ಯದಲ್ಲಿ ಶಾಲಾ‌ ಮಕ್ಕಳಿಗೆ ಮೊಟ್ಟೆ ವಿತರಣೆ (Egg distribution in school ) ನಡೆಸಲು ಶಿಕ್ಷಣ ಇಲಾಖೆ ಸಿದ್ಧವಾಗಿದೆ. ರಾಜ್ಯ ಸರ್ಕಾರ ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಿಸುವ ನಿಟ್ಟಿನಲ್ಲಿ ಮೊಟ್ಟೆ ವಿತರಣೆಗೆ ಸಿದ್ಧತೆ ನಡೆಸಿತ್ತು.‌ ಮೊಟ್ಟೆ ವಿತರಣೆ ಘೋಷಿಸುತ್ತಿದ್ದಂತೆ ರಾಜ್ಯದಾದ್ಯಂತ ಶಾಲಾ‌ ಮಕ್ಕಳಿಗೆ ಮೊಟ್ಟೆ ವಿತರಣೆ ಪರ ಮತ್ತು ವಿರುದ್ಧ ಚರ್ಚೆಗಳು ಜೋರಾಗಿ ನಡೆದಿದ್ದವು. ರಾಜ್ಯದ ಹಲವು ಮಠಾಧೀಶರುಗಳು ಶಾಲೆಗಳಲ್ಲಿ ಮೊಟ್ಟೆ ವಿತರಣೆಯನ್ನು ತೀವ್ರವಾಗಿ‌ ವಿರೋಧಿಸಿದ್ದವು. ಆದರೆ ಈಗ ಶಿಕ್ಷಣ ಇಲಾಖೆ ಅಪೌಷ್ಠಿಕತೆ ನಿಯಂತ್ರಿಸುವ ನಿಟ್ಟಿನಲ್ಲಿ ಮೊಟ್ಟೆ ವಿತರಣೆಗೆ ಸಜ್ಜಾಗಿದೆ.

2022-23ನೇ ಸಾಲಿನ ಪ್ಲೆಕ್ಸಿ ಅನುದಾನದಡಿ ಶಾಲಾ (school) ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆ ಮೊಟ್ಟೆ ವಿತರಣೆಗೆ ಸೂಚನೆ ನೀಡಲಾಗಿದ್ದು, ರಾಜ್ಯದ 8 ಜಿಲ್ಲೆಗಳ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 1ರಿಂದ 8ನೇ ತರಗತಿ ಮಕ್ಕಳಿಗೆ ಮೊಟ್ಟೆ ಕೊಡಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಇದರ ಜೊತೆಗೆ ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು, ಶೇಂಗಾ ಚಿಕ್ಕಿ ವಿತರಣೆಗೆ ಆದೇಶ ನೀಡಲಾಗಿದೆ.

ಕಲ್ಯಾಣ ಕರ್ನಾಟಕ ವ್ಯಾಪ್ತಿಯ 8 ಜಿಲ್ಲೆಗಳಾದ ಬೀದರ್, ರಾಯಚೂರು, ಕಲಬುರ್ಗಿ, ಯಾದಗಿರಿ, ಕೊಪ್ಪಳ, ಬಳ್ಳಾರಿ, ವಿಜಯನಗರ, ವಿಜಯಪುರ ಜಿಲ್ಲೆಗಳಲ್ಲಿ ಮೊಟ್ಟೆ ವಿತರಣೆ ಯಾಗಲಿದೆ. ಈ ಜಿಲ್ಲೆಗಳ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಿರುವ ಕಾರಣದಿಂದ ಪೌಷ್ಟಿಕಾಂಶ ಆಹಾರದ ಜೊತೆ ಮೊಟ್ಟೆ ವಿತರಣೆಗೆ‌ ಸರ್ಕಾರ ನಿರ್ಧರಿಸಿದೆ. ಹೀಗಾಗಿ‌ ಕಲ್ಯಾಣ ಕರ್ನಾಟಕ ವ್ಯಾಪ್ತಿಯ 15,29,713 ಶಾಲಾ ಮಕ್ಕಳಿಗೆ‌  ವಾರದಲ್ಲಿ 2 ದಿನ ಮೊಟ್ಟೆ ಕೊಡಲು ಸೂಚಿಸಲಾಗಿದೆ.

ಇನ್ನು ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು, ಶೇಂಗಾ ಚಿಕ್ಕೆ ಕೊಡಲು ಸೂಚನೆ ನೀಡಲಾಗಿದೆ. ಜೂನ್ ನಿಂದ ಸೆಪ್ಟೆಂಬರ್ ವರೆಗೆ 11 ವಾರಗಳ ಕಾಲ ಹಾಗೂ ಅಕ್ಟೋಬರ್ ನಿಂದ ಫೆಬ್ರವರಿ ವರೆಗೆ 13 ವಾರ, ಒಟ್ಟು  24 ವಾರ ಮೊಟ್ಟೆ ಕೊಡಲು ನಿರ್ಧರಿಸಲಾಗಿದೆ. ಇನ್ನು ಮಕ್ಕಳಿಗೆ ಮೊಟ್ಟೆ ವಿತರಿಸುವ ಈ ಯೋಜನೆಯಿಂದ ಸರ್ಕಾರಕ್ಕೆ 4494.29 ಲಕ್ಷ ರೂಪಾಯಿ ವೆಚ್ಚವಾಗಲಿದೆ. ಇನ್ನು ಮೊಟ್ಟೆ ವಿತರಣೆ ಕಡ್ಡಾಯಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ಆರ್ ವಿಶಾಲ್ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ : PUC exams evaluation : ದ್ವಿತೀಯ ಪಿಯುಸಿ ಮೌಲ್ಯಮಾಪನ ಆರಂಭ: 19 ಸಾವಿರ ಉಪನ್ಯಾಸಕರ ನೇಮಕ

ಇದನ್ನೂ ಓದಿ : A Laptop Or A Tablet : ವಿದ್ಯಾರ್ಥಿಗಳಿಗೆ ಯಾವುದು ಉತ್ತಮ? ಲ್ಯಾಪ್‌ಟಾಪ್‌ ಅಥವಾ ಟಾಬ್ಲೆಟ್‌!!

Egg distribution in school compulsory: Official order from the Department of Education

Comments are closed.