Mid Day Meal : ಶಾಲಾ ಮಕ್ಕಳಿಗೆ ಬಿಸಿಯೂಟದ ಜೊತೆ ಮೊಟ್ಟೆ, ಬಾಳೆಹಣ್ಣು ಕಟ್‌

ಬೆಂಗಳೂರು : (Mid Day Meal) ರಾಜ್ಯದ ಸರಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳ ಅಪೌಷ್ಠಿಕತೆಯನ್ನು (Egg In Mid Day Meal) ತಡೆಯಲೆಂದು ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ಅನೇಕ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಕಳೆದ ವರ್ಷನಿಂದ ರಾಜ್ಯದ ಸರಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಬಿಸಿಯೂಟದ ಜೊತೆಗೆ ವಾರದಲ್ಲಿ ಎರಡು ದಿನ ಬೇಯಿಸಿದ ಮೊಟ್ಟೆ ಅಥವಾ ಬಾಳೆಹಣ್ಣು ಅಥವಾ ಶೆಂಗಾ ಚಿಕ್ಕಿಯನ್ನು ನೀಡಲಾಗುತ್ತಿತ್ತು. ಆದರೆ ಈ ಬಾರೀ ಶಾಲಾ ಮಕ್ಕಳಿಗೆ ವಾರದಲ್ಲಿ ಒಂದು ದಿನ ಮಾತ್ರ ಮೊಟ್ಟೆ ಅಥವಾ ಬಾಳೆಹಣ್ಣು ಅಥವಾ ಶೆಂಗಾ ಚಿಕ್ಕಿಯನ್ನು ನೀಡುವಂತೆ ಸುತ್ತೋಲೆ ಹೊರಡಿಸಲಾಗಿದೆ.

ಅಧಿಕಾರಿಗಳ ಪ್ರಕಾರ, ಮುಂದಿನ ತಿಂಗಳು ಹೊಸ ಬಜೆಟ್‌ ಮಂಡನೆಯಾಗಲಿದ್ದು, ಆ ಹಿನ್ನಲೆಯಲ್ಲಿ ಜುಲೈ 15ರವರೆಗೆ ಮಾತ್ರ ಅನ್ವಯಿಸುವಂತೆ ಸರಕಾರದ ನಿರ್ದೇಶನದ ಮೇರೆಗೆ ಈ ಆದೇಶ ಮಾಡಲಾಗಿದೆ. ಇನ್ನು ಬಜೆಟ್‌ನಲ್ಲಿ ಸರಕಾರ ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ಯೋಜನೆ ಮುಂದುವರೆಸುವ ಘೋಷಣೆ ಮಾಡಿದರೆ ಹೊಸ ಆದೇಶ ನೀಡಲಾಗುತ್ತದ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : Karnataka 2nd PUC Supplementary Result : ಕರ್ನಾಟಕ 2ನೇ ಪಿಯುಸಿ ಪೂರಕ ಫಲಿತಾಂಶ ಇಂದು ಪ್ರಕಟ : ಇಲ್ಲಿ ಪರಿಶೀಲಿಸಿ

ಇದನ್ನೂ ಓದಿ : KCET Counseling 2023 : ಕೆಸಿಇಟಿ ಕೌನ್ಸೆಲಿಂಗ್ : ಕರ್ನಾಟಕ ಟಾಪ್ 10 ಇಂಜಿನಿಯರಿಂಗ್ ಕಾಲೇಜು ಪಟ್ಟಿ ಬಿಡುಗಡೆ

ರಾಜ್ಯದ 2023-24ನೇ ಸಾಲಿನಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1 ರಿಂದ 8ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮೊದಲ ಹಂತದಲ್ಲಿ ಜೂನ್‌ 20ರಿಂದ ಜುಲೈ 15ರವರೆಗೆ ಅಥವಾ ಮುಂದಿನ ಆದೇಶ ಬರುವವರೆಗೂ ಪೂರಕ ಪೌಷ್ಟಿಕ ಆಹಾರವಾಗಿ ವಾರದಲ್ಲಿ ಒಂದು ದಿನ ಬೇಯಿಸಿದ ಮೊಟ್ಟೆ ನೀಡಬೇಕು. ಹಾಗೆಯೇ ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ಇಲ್ಲವೇ ಶೇಂಗಾ ಚಿಕ್ಕಿ ವಿತರಿಸಲು ಕ್ರಮ ವಹಿಸುವಂತೆ ಶಿಕ್ಷಣ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Egg In Mid Day Meal : Egg, banana cut with hot water for school children

Comments are closed.