TV actor Prajwal : ಬಾರ್‌ನಲ್ಲಿ ಕಿರಿಕ್‌ : ಅಮೃತವರ್ಷಿಣಿ ಧಾರಾವಾಹಿ ನಟನ ವಿರುದ್ದ ಎಫ್‌ಐಆರ್‌ ದಾಖಲು

ಕನ್ನಡದ ಅಮೃತವರ್ಷಿಣಿ ಹಾಗೂ ಅಣ್ಣತಂಗಿ ಧಾರಾವಾಹಿಯಲ್ಲಿ ನಟಿಸಿದ್ದ ಖ್ಯಾತ ನಟ ಪ್ರಜ್ವಲ್‌ (TV actor Prajwal) ವಿರುದ್ದ ಎಫ್‌ಐಆರ್‌ ದಾಖಲಾಗಿದೆ. ಬಾರ್‌ವೊಂದರಲ್ಲಿ ನಡೆದ ಘಟನೆಯಲ್ಲಿ ಕಿರಿಕ್‌ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಆರ್‌ಆರ್‌ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಣ್ಣದ ಲೋಕಕ್ಕೆ ಕಾಲಿಟ್ಟ ನಟ, ನಟಿಯರು ಕ್ಷುಲಕ ಕಾರಣಕ್ಕೆ ಕಿರಿಕ್‌ ಮಾಡಿಕೊಳ್ಳುವುದು ಮಾಮೂಲು ಆಗುತ್ತಿದೆ. ಅಂತಹದ್ದೇ ಮತ್ತೊಂದು ಘಟನೆ ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ನಡೆದಿದೆ. ಆರ್‌ಆರ್‌ ನಗರದಲ್ಲಿರುವ ಅಮೃತ್‌ ಬಾರ್‌ ಎಂಡ್‌ ರೆಸ್ಟೋರೆಂಟ್‌ಗೆ ಪ್ರಜ್ವಲ್‌ ತನ್ನ ಸ್ನೇಹಿತರ ಜೊತೆಗೆ ತೆರಳಿದ್ದರು. ಈ ವೇಳೆಯಲ್ಲಿ ಬಾರ್ ಗೆ ಬಂದಿದ್ದ ಚೇತನ್‌ ಹಾಗೂ ಸ್ನೇಹಿತರ ನಡುವೆ ಕಿರಿಕ್‌ ಆಗಿದೆ. ಪ್ರಜ್ವಲ್‌ ಮರದ ಪೀಸ್‌ನಿಂದ ಚೇತನ್‌ ಹಾಗೂ ಸ್ನೇಹಿತರ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪ ಕೇಳಿಬಂದಿದೆ.

ಇದನ್ನೂ ಓದಿ : Matte Maduve Movie OTT : ‘ಮತ್ತೆ ಮದುವೆ’ ಸಿನಿಮಾ ಜೂನ್ 23ಕ್ಕೆ ಅಮೇಜಾನ್ ಪ್ರೈಮ್ ನಲ್ಲಿ ಸ್ಕ್ರೀಮಿಂಗ್

ಇದನ್ನೂ ಓದಿ : Actor Ram Charan – Upasana couple : 11 ವರ್ಷಗಳ ತಂದೆ ತಾಯಿಯಾದ ನಟ ರಾಮ್ ಚರಣ್, ಉಪಾಸನಾ

ಸದ್ಯ ಚೇತನ್‌ ನೀಡಿರುವ ದೂರಿನ ಮೇರಿಗೆ ಆರ್‌ಆರ್‌ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಬಾರ್‌ನ ಸಿಸಿ ಕ್ಯಾಮರಾ ದೃಶ್ಯಾವಳಿಯನ್ನು ಆಧರಿಸಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಪ್ರಜ್ವಲ್‌ ಅಮೃತವರ್ಷಿಣಿ ಹಾಗೂ ಅಣ್ಣತಂಗಿ ಧಾರವಾಹಿಯಲ್ಲಿ ನಟಿಸಿದ್ದು, ಎರಡೂ ಧಾರಾವಾಹಿಗಳು ಪ್ರಜ್ವಲ್‌ ಅವರಿಗೆ ಹೆಚ್ಚು ಖ್ಯಾತಿಯನ್ನು ತಂದುಕೊಟ್ಟಿತ್ತು.

TV actor Prajwal: FIR filed against Amritavarshini serial actor

Comments are closed.