ಕಾರ್ಮೆಲ್ ಕಾನ್ವೆಂಟ್‌ ನ ಬಾಲಕಿಯರ ವಾಲಿಬಾಲ್‌ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆ

ಬೆಂಗಳೂರು: (Girls volleyball team) ಬೆಂಗಳೂರಿನ ಜಯನಗರದ ಕಾರ್ಮೆಲ್‌ ಕಾನ್ವೆಂಟ್ ನ ಶಾಲೆಯ 14 ವರ್ಷದೊಳಗಿನ ಬಾಲಕಿಯರ ವಾಲಿಬಾಲ್‌ ತಂಡವು 19/12/2022 ಸೋಮವಾರದಂದು ನಾಗಸಂದ್ರದ ಸೈಂಟ್‌ ಮೇರಿಸ್‌ ಮೈದಾನದಲ್ಲಿ ನಡೆದ ರಾಜ್ಯಮಟ್ಟದ ವಾಲಿಬಾಲ್‌ ಪಂದ್ಯಾಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಶಾಲೆಯ ಪ್ರಾಂಶುಪಾಲರಾದ ಸಿಸ್ಟರ್‌ ಸಾಧನಾರವರು ವಿಜೇತ ತಂಡದ ವಿದ್ಯಾರ್ಥಿಗಳು (Girls volleyball team) ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ ಮತ್ತು ತರಬೇತಿದಾರರಾದ ಚೈತ್ರಾ ಶೆಟ್ಟಿ ಮತ್ತು ಸ್ಮಿತಿನ್‌ ಶೆಟ್ಟಿಯವರಿಗೆ ಅಭಿನಂದಿಸಿ ಗೌರವಿಸಿದರು. ನಂತರ ಮಾತನಾಡಿದ ಅವರು ವಿದ್ಯಾರ್ಥಿನಿಯರ ಆಸಕ್ತಿ, ನಿರಂತರ ಅಭ್ಯಾಸ, ದೈಹಿಕ ಶಿಕ್ಷಕರ ತರಬೇತಿ ಹಾಗೂ ಪೋಷಕರ ಸಹಕಾರದಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು. ಇದೇ ರೀತಿ ಕರ್ನಾಟಕ ತಂಡದಿಂದ ಪ್ರತಿನಿಧಿಸಿ ರಾಷ್ಟ್ರಮಟ್ಟದಲ್ಲೂ ಉತ್ತಮ ಪ್ರದರ್ಶನ ನೀಡಿ ಶಾಲೆಗೆ, ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತರಲೆಂದು ಹಾರೈಸಿದರು.

ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕರ್ನಾಟಕ ತಂಡದ ತರಬೇತಿದಾರರಾದ ಚೈತ್ರಾ ಶೆಟ್ಟಿ ಮತ್ತು ಸ್ಮತಿನ್‌ ಶೆಟ್ಟಿ, ತಂಡದ ನಾಯಕಿ ಶ್ರಾವಣಿ ಚಂದರ್‌, ಸಹ ಆಟಗಾರ್ತಿಯರಾದ ರಮ್ಯ, ಸಂಜನಾ, ಮಯುಕ, ನಿಧಿಶಾ, ಸುಷ್ಮ, ಗೌರಿ ಇವರು ತಮ್ಮ ಗೆಲುವನ್ನು ಪ್ರಾಂಶುಪಾಲರು ಹಾಗೂ ಸಿಸ್ಟರ್‌ ಸಾಧನಾ ಅವರೊಂದಿಗೆ ಸೇರಿ ಸಂಭ್ರಮಿಸಿದರು.

ಇದನ್ನೂ ಓದಿ : ಡಿ.24ರಂದು ಉಡುಪಿಯಲ್ಲಿ ಕ್ರೀಡಾ ವಿಜ್ಞಾನ ಕೇಂದ್ರ ಉದ್ಘಾಟನೆ

ಇದನ್ನೂ ಓದಿ : Mangaluru university: ಪರೀಕ್ಷೆ ಫಲಿತಾಂಶ ವಿಳಂಬ: ಮಂಗಳೂರು ವಿವಿಗೆ ನುಗ್ಗಲು ಯತ್ನಿಸಿದ ಎಬಿವಿಪಿ ಕಾರ್ಯಕರ್ತರು

ಇದನ್ನೂ ಓದಿ : Face mask compulsory: ಚೀನಾದಲ್ಲಿ ಕೊರೊನಾ ಆರ್ಭಟ : ಬೆಂಗಳೂರಲ್ಲಿ ಮಾಸ್ಕ್ ಕಡ್ಡಾಯಕ್ಕೆ ಚಿಂತನೆ

ಇದನ್ನೂ ಓದಿ : Suryakumar Yadav: ರಣಜಿ ಪಂದ್ಯದಲ್ಲೂ ಮುಂದುವರಿದ “ಸೂರ್ಯ” ಶಿಕಾರಿ, ಹತ್ತೇ ರನ್ನಿಂದ ಸೆಂಚುರಿ ಮಿಸ್, ಸಿಗಲಿದ್ಯಾ ಟೆಸ್ಟ್ ಕ್ಯಾಪ್..?

Under 14 girls volleyball team of Carmel Convent School, Jayanagar, Bangalore participated in the state level volleyball tournament held at Saint Mary’s ground, Nagasandra on Monday 19/12/2022 and got first place and got selected for the national level.

Comments are closed.