kantara: ಆಸ್ಕರ್​ ರೇಸ್​ಗೆ ಇಳಿಯಲು ಸಜ್ಜಾದ ಕಾಂತಾರ : ಕಾಂತಾರ 2 ಬಗ್ಗೆಯೂ ಹೊಂಬಾಳೆ ಫಿಲ್ಮ್ಸ್​​ನಿಂದ ಬಿಗ್​ ಅಪ್​​ಡೇಟ್​

kantara: ಕಾಂತಾರ ಸಿನಿಮಾ ರಿಲೀಸ್​ ಆದ ಬಳಿಕ ಬರೆದ ದಾಖಲೆಗಳಿಗೆ ಲೆಕ್ಕವೇ ಇಲ್ಲ ಎಂಬಂತಾಗಿದೆ. ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದು ಕನ್ನಡ ಚಿತ್ರರಂಗದ ಕೀರ್ತಿಯನ್ನು ಮುಗಿಲೆತ್ತರಕ್ಕೆ ಕೊಂಡೊಯ್ದಿದೆ. ಒಟಿಟಿಯಲ್ಲಿಯೂ ಕಾಂತಾರ ಸಿನಿಮಾ ಭರ್ಜರಿ ವೀವ್ಸ್​ ಕಂಡಿದೆ. ಈ ಎಲ್ಲದರ ನಡುವೆ ರಿಷಭ್​ ಶೆಟ್ಟಿ ನಿರ್ದೇಶನ ಹಾಗೂ ನಟನೆಯ ಕಾಂತಾರ ಸಿನಿಮಾ ಆಸ್ಕರ್​​ ಅಂಗಳಕ್ಕೆ ಎಂಟ್ರಿ ನೀಡಿದೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್​ನ ವಿಜಯ್​ ಕಿರಗಂದೂರು ಅಧಿಕೃತ ಮಾಹಿತಿಯನ್ನು ನೀಡಿದ್ದಾರೆ.


ದಕ್ಷಿಣ ಭಾರತದ ಫೇಮಸ್​ ಸಿನಿಮಾ ಆರ್​ಆರ್​ಆರ್​​ ಆಸ್ಕರ್​ ಸ್ಫರ್ಧೆಗೆ ಎಂಟ್ರಿ ಪಡೆಯಲು ಯತ್ನಿಸಿತ್ತು. ಆದರೆ ಫಿಲ್ಮ ಫೆಡೇಷನ್​ನಿಂದ ಇದಕ್ಕೆ ಅನುಮತಿ ಸಿಕ್ಕಿರಲಿಲ್ಲ. ಇದಾದ ಬಳಿಕ ಆರ್​ಆರ್​ ಆರ್​ For Your Consideration ಮೂಲಕ ಆಸ್ಕರ್​ ಅಂಗಳಕ್ಕೆ ಎಂಟ್ರಿ ಕೊಡಲು ಸಜ್ಜಾಗಿದೆ. ಇದೇ ಮಾದರಿಯಲ್ಲಿಯೇ ಕಾಂತಾರ ಕೂಡ ಆಸ್ಕರ್​ ಪ್ರಶಸ್ತಿಗೆ ಅರ್ಹತೆ ಪಡೆಯಲು ಯತ್ನಿಸುತ್ತಿದೆ ಎಂದು ವಿಜಯ್ ಕಿರಂಗದೂರು ಹೇಳಿದ್ದಾರೆ.
ಕಾಂತಾರ ಸಿನಿಮಾವನ್ನು ಆಸ್ಕರ್​ ಪ್ರಶಸ್ತಿಗೆ ಆಯ್ಕೆ ಮಾಡಲಿ ಎಂದು ನಾವು ಅರ್ಜಿ ಸಲ್ಲಿಸಿದ್ದೇವೆ. ಈ ಬಗ್ಗೆ ಅಂತಿಮ ಪಟ್ಟಿ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾಯುತ್ತಿದ್ದೇವೆ ಎಂದು ವಿಜಯ್​ ಕಿರಂಗದೂರು ಹೇಳಿದ್ದಾರೆ. ಒಂದು ವೇಳೆ ಆಸ್ಕರ್​ ಪ್ರಶಸ್ತಿಗೆ ಕಾಂತಾರ ನಾಮ ನಿರ್ದೇಶನಗೊಂಡೆ ಸ್ಯಾಂಡಲ್​ವುಡ್​ ಇತಿಹಾಸದಲ್ಲಿ ಮತ್ತೊಂದು ದಾಖಲೆಯನ್ನು ಕಾಂತಾರ ಬರೆದಂತಾಗುತ್ತದೆ.


ಇದೇ ವೇಳೆ ಕಾಂತಾರ ಭಾಗ 2 ನಿರ್ಮಾಣದ ವಿಚಾರದ ಬಗ್ಗೆಯೂ ಮಾತನಾಡಿದ ವಿಜಯ್​ ಕಿರಂಗದೂರು ಕಾಂತಾರ 2 ಸಿನಿಮಾವನ್ನು ನಿರ್ಮಿಸಬೇಕು ಎಂಬ ಯೋಚನೆಯಲ್ಲಿ ಇರೋದು ನಿಜ. ಆದರೆ ಸಿನಿಮಾ ಪ್ರಿಕ್ವೇಲ್​ ಮಾಡಬೇಕೋ ಅಥವಾ ಸಿಕ್ವೇಲ್​ ಮಾಡಬೇಕೋ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಸದ್ಯ ರಿಷಭ್​ ಶೆಟ್ಟಿ ಬೇರೆ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಹೀಗಾಗಿ ಅವರ ಜೊತೆ ಚರ್ಚಿಸಿದ ಬಳಿಕ ಸೂಕ್ತ ನಿರ್ಧಾರ ಘೋಷಣೆ ಮಾಡುತ್ತೇವೆ ಎಂದಿದ್ದಾರೆ.

ಇದನ್ನು ಓದಿ : ಡಿ.24ರಂದು ಉಡುಪಿಯಲ್ಲಿ ಕ್ರೀಡಾ ವಿಜ್ಞಾನ ಕೇಂದ್ರ ಉದ್ಘಾಟನೆ

ಇದನ್ನೂ ಓದಿ : Newsnext special: Manish Pandey IPL 2023 : ಐಪಿಎಲ್‌ನಲ್ಲಿ ಮೊದಲ ಶತಕ ಬಾರಿಸಿದ ಭಾರತೀಯ, ಯಾರ ಪಾಲಾಗಲಿದ್ದಾರೆ ಮನೀಶ್ ಪಾಂಡೆ ?

kantara movie to enter oscar race rishab shetty may do prequel says vijay kiragandur

Comments are closed.