Government schools: 268 ಸರಕಾರಿ ಶಾಲೆಗಳನ್ನು ದತ್ತು ಪಡೆದ ಸರಕಾರಿ ಅಧಿಕಾರಿಗಳು

ಶಿವಮೊಗ್ಗ: (Government schools) ಸರಕಾರಿ ಶಾಲಾ-ಕಾಲೇಜುಗಳನ್ನು ದತ್ತು ಪಡೆದು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಸರಕಾರಿ ಅಧಿಕಾರಿಗಳಿಗೆ ಜವಬ್ಧಾರಿ ನೀಡಿ ಎಂದು ಸರ್ಕಾರ ಈ ಹಿಂದೆ ಆದೇಶ ಹೊರಡಿಸಿತ್ತು. ಸರಕಾರದ ಸೂಚನೆಯಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಇದುವರೆಗೆ 268 ಸರಕಾರಿ ಶಾಲೆಗಳನ್ನು ಸರಕಾರಿ ಅಧಿಕಾರಿಗಳು ದತ್ತು ಪಡೆದಿದ್ದಾರೆ.

ಸರಕಾರಿ ಅಧಿಕಾರಿಗಳು ಶಾಲೆ(Government schools)ಗಳನ್ನು ದತ್ತು ಪಡೆಯುವಂತೆ ಸರ್ಕಾರ ಸೂಚಿಸಿದ್ದು, ತಮ್ಮ ಭಾಗದ ಸರಕಾರಿ ಶಾಲೆಗಳನ್ನು ಅಧಿಕಾರಿಗಳು ದತ್ತು ಪಡೆದು ಶಾಲೆಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ಕಾರ್ಯಕ್ರಮ ಇದಾಗಿದ್ದು, ಜಿಲ್ಲಾ ಮಟ್ಟದಿಂದ ಹಿಡಿದು ತಾಲೂಕು ಮಟ್ಟದವರೆಗಿನ ಎಲ್ಲಾ ಹಂತದ ಸರಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸರ್ಕಾರ ಸೂಚನೆ ಹೊರಡಿಸಿತ್ತು. ಇದೀಗ ಸರ್ಕಾರದ ಸೂಚನೆಯಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸರ್ಕಾರಿ ಶಾಲೆಗಳ ದತ್ತು ಸ್ವೀಕಾರಕ್ಕೆ ಮುಂದಾಗಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಈವರೆಗೆ 268 ಸರಕಾರಿ ಶಾಲೆಗಳನ್ನು ಅಧಿಕಾರಿಗಳಿಂದ ದತ್ತು ಪಡೆಯಲಾಗಿದೆ.

ತಾಲೂಕು ಮಟ್ಟದಲ್ಲಿನ ಅಂಕಿ ಅಂಶಗಳನ್ನು ನೋಡುವುದಾದರೆ, ಶಿಕಾರಿಪುರ ಜಿಲ್ಲೆಯಲ್ಲಿ ನಲವತ್ತಾರು ಅಧಿಕಾರಿಗಳು ತಲಾ ಒಂದೊಂದು ಶಾಲೆಯನ್ನು ದತ್ತು ಸ್ವೀಕರಿಸಿದ್ದಾರೆ. ಹೊಸನಗರದಲ್ಲಿ ಇಪ್ಪತ್ತೊಂದು ಅಧಿಕಾರಿಗಳು, ಸೊರಬ ಮತ್ತು ಸಾಗರ ತಾಲೂಕಿನಲ್ಲಿ ಮೂವತ್ತೈದು ಅಧಿಕಾರಿಗಳು, ಶಿವಮೊಗ್ಗ ತಾಲೂಕಿನಲ್ಲಿ ಮೂವತ್ತಮೂರು ಅಧಿಕಾರಿಗಳು, ತೀರ್ಥಹಳ್ಳಿ ತಾಲೂಕಿನಲ್ಲಿ ಇಪಪ್ತ್ತೈದು ಅಧಿಕಾರಿಗಳು, ಭದ್ರಾವತಿಯಲ್ಲಿ ಮೂವತ್ತನಾಲ್ಕು ಅಧಿಕಾರಿಗಳು ತಲಾ ಒಂದೊಂದು ಶಾಲೆಗಳನ್ನು ದತ್ತು ಸ್ವೀಕರಿಸಿದ್ದಾರೆ.

ಜಿಲ್ಲಾ ಮಟ್ಟದಲ್ಲಿ ಮೂವತ್ತೊಂಬತ್ತು ಅಧಿಕಾರಿಗಳು ತಲಾ ಒಂದರಂತೆ ಸರಕಾರಿ ಶಾಲೆಗಳನ್ನು ದತ್ತು ಸ್ವೀಕರಿಸಿದ್ದಾರೆ ಎಂದು ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : Uniform color for schools: ಶಾಲೆಗಳಿಗೆ ಏಕರೂಪದ ಬಣ್ಣ :8,100 ಶಾಲಾ- ಕಾಲೇಜು ಕೊಠಡಿಗೆ ವಿವೇಕಾನಂದರ ಹೆಸರಿಡಲು ಶಿಕ್ಷಣ ಇಲಾಖೆ ಚಿಂತನೆ

ಸರ್ಕಾರದ ಎಲ್ಲಾ ಇಲಾಖೆಗಳ ರಾಜ್ಯ, ಜಿಲ್ಲಾ ಮತ್ತು ತಾಲೂಕು ಹಂತದ ಅಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಗೆ ಸೇರಿದ ಒಂದು ಸರ್ಕಾರಿ ಶಾಲೆ ಅಥವಾ ಪ್ರೌಢಶಾಲೆಗಳನ್ನು ದತ್ತು ಪಡೆಯುವುದು. ನಂತರ ದತ್ತು ಪಡೆದ ಶಾಲೆಗಳಿಗೆ ತಿಂಗಳಿಗೆ ಕನಿಷ್ಟ ಒಂದು ಅಥವಾ ಎರಡು ಬಾರಿ ಭೇಟಿ ನೀಡಿ ಶಾಲೆಗಳ ಶೈಕ್ಷಣಿಕ ಪ್ರಗತಿಯನ್ನು ಪರಿಶೀಲಿಸಿ, ಅದಕ್ಕೆ ಬೇಕಾದ ಸಲಹೆ, ಮಾರ್ಗದರ್ಶನ ನೀಡುವುದು ಅಧಿಕಾರಿಗಳ ಜವಾಬ್ಧಾರಿಯಾಗಿದೆ. ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸುವುದು, ಮತ್ತು ಅವರ ಕನಸಿನ ಗುರಿಗಳನ್ನು ನಿಗದಿಪಡಿಸಿಕೊಂಡು, ಅವುಗಳನ್ನು ಸಾಧಿಸಲು ಪ್ರೇರಣೆ ನೀಡುವುದು ಜೊತೆಗೆ ಪ್ರಾಂಶುಪಾಲರು, ಶಿಕ್ಷಕರ ಜೊತೆ ಸಂವಾದ ನಡೆಸಿ, ಶಾಲೆಗಳು ನಡೆಸುತ್ತಿರುವ ಉತ್ತಮ ಕಾರ್ಯಗಳ ಮಾಹಿತಿಯನ್ನು ಪಡೆದು, ಅದಕ್ಕೆ ಅಗತ್ಯವಾದ ಹಾಗೂ ಪೂರಕವಾದ ಮಾರ್ಗದರ್ಶನ ಮತ್ತು ಮಾಹಿತಿಗಳನ್ನು ನೀಡುವುದು ದತ್ತು ಪಡೆದ ಅಧಿಕಾರಿಗಳ ಜವಾಬ್ಧಾರಿಯಾಗಿದೆ.

ಇದನ್ನೂ ಓದಿ : Sunny Leone photo on hall ticket : ಟಿಇಟಿ ಪರೀಕ್ಷೆ ಹಾಲ್‌ ಟಿಕೆಟ್‌ ನಲ್ಲಿ ಸನ್ನಿಲಿಯೋನ್‌ ಫೋಟೊ ; ದೂರು ದಾಖಲು

ಶಾಲೆ, ಕಾಲೇಜಿನ ಕುಂದು-ಕೊರತೆಗಳನ್ನು ಗಮನಿಸಿ, ಅವುಗಳ ನಿವಾರಣೆಗೆ ಸ್ಥಳೀಯ ಸರ್ಕಾರಿ ಸಂಸ್ಥೆಗಳು, ಶಿಕ್ಷಣ ಪ್ರೇಮಿಗಳು ಮತ್ತು ದಾನಿಗಳ ನೆರವಿನಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಕಲಿಕೆಗೆ ಪೂರಕ ಚಟುವಟಿಕೆ ಗಳಿಗೆ ಅಗತ್ಯವಾದ ಸಲಹೆ, ಮಾರ್ಗದರ್ಶನಗಳನ್ನು ನೀಡುವುದು. ಅಕ್ಷರ ದಾಸೋಹದ ಕಾರ್ಯಕ್ರಮವನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವುದರ ಕುರಿತು ಮುಖ್ಯ ಶಿಕ್ಷಕರಿಗೆ ಸಲಹೆ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

(Government schools) The government had earlier issued an order to make the government officials responsible for adopting and developing government schools and colleges. As per the instructions of the government, so far 268 government schools have been adopted by the government officials in Shimoga district.

Comments are closed.