medical students : ನಮ್ಮ ಕರ್ನಾಟಕ ರಾಜ್ಯ ಸೇರಿದಂತೆ, ದೇಶದಲ್ಲಿ ವೈದ್ಯಕೀಯ ವ್ಯಾಸಂಗ ಮಾಡೋದಕ್ಕೆ ಲಕ್ಷ ಲಕ್ಷ ಹಣ ಖರ್ಚು ಮಾಡಬೇಕು ಎಂಬುದು ಎಲ್ಲರಿಗೂ ಗೊತ್ತಿದೆ. ಉಳ್ಳವರು ಲಕ್ಷ ಲಕ್ಷ ಹಣ ಕಟ್ಟಿ ವೈದ್ಯಕೀಯ ಶಿಕ್ಷಣ ಪಡೆದರೆ ಮಧ್ಯಮ ವರ್ಗದ ಮಂದಿಗೆ ಮಾತ್ರ ವೈದ್ಯಕೀಯ ಶಿಕ್ಷಣ ಪಡೆಯೋದು ಕಷ್ಟ ಸಾದ್ಯ. ಇದಕ್ಕಾಗಿ ಹೆಚ್ಚಿನ ಮಂದಿ ಉಕ್ರೇನ್ ಸೇರಿದಂತೆ ಹೊರ ದೇಶಗಳಲ್ಲಿ ಕಡಿಮೆ ಖರ್ಚಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಸೇರ್ಪಡೆಗೊಳ್ಳುತ್ತಾರೆ. ಅದರಲ್ಲೂ ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ದ ಪ್ರಾರಂಭವಾದಗ ನಮ್ಮ ದೇಶದಿಂದ ಅದೆಷ್ಟು ಮಂದಿ ವಿದ್ಯಾರ್ಥಿಗಳು ಈ ವೈದ್ಯಕೀಯ ಶಿಕ್ಷಣ ಪಡೆಯಲು ಉಕ್ರೇನ್ ಗೆ ತೆರಳಿದ್ದಾರೆ ಎಂದು ಲೋಕದ ಜನರಿಗೆ ಗೊತ್ತಾಯಿತು. ಆ ಸಂದರ್ಭ ನಮ್ಮ ದೇಶ, ರಾಜ್ಯದಲ್ಲಿ ಕಡಿಮೆ ಖರ್ಚಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವುದಕ್ಕೆ ಅವಕಾಶ ಕಲ್ಪಿಸಲು ಒತ್ತಾಯ ಕೇಳಿ ಬಂತು. ಆ ಸಂದರ್ಭದಲ್ಲಿ ಸರ್ಕಾರವೂ ಈ ಬಗ್ಗೆ ಪರಿಶೀಲಿಸುವ ಭರವಸೆಯನ್ನು ನೀಡಿತ್ತು. ಆದ್ರೆ ವೈದ್ಯಕೀಯ ಶಿಕ್ಷಣದ ವೆಚ್ಚ ಕಡಿಮೆಗೊಳಿಸಬೇಕಾಗಿದ್ದ ಸರ್ಕಾರ ಇದೀಗ ಶಾಕಿಂಗ್ ನ್ಯೂಸ್ ಎನ್ನುವಂತೆ ವೈದ್ಯಕೀಯ ಕೋರ್ಸ್ ಪ್ರವೇಶ ಶುಲ್ಕವನ್ನು ಶೇ.10 ಹೆಚ್ಚಳಗೊಳಿಸಲು ಸಮ್ಮತಿ ಸೂಚಿಸಿದೆ.
ಹೌದು..2022-23 ನೇ ಸಾಲಿನ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ ಗಳ ಪ್ರವೇಶ ಶುಲ್ಕವನ್ನು ಶೇ.10ರಂತೆ ಹೆಚ್ಚಿಸಿಲು ಒಪ್ಪಿಗೆ ನೀಡಿದೆ. ಈ ಬಗ್ಗೆ ಒಂದೆರಡು ದಿನಗಳಲ್ಲಿ ಆದೇಶ ಹೊರಬೀಳುವ ಸಾಧ್ಯತೆಯಿದೆ. ವೈದ್ಯಕೀಯ ಕಾಲೇಜುಗಳ ಒಕ್ಕೂಟ ಇತ್ತಿಚೇಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶೇ.15ರಷ್ಟು ಶುಲ್ಕ ಹೆಚ್ಚಳಕ್ಕೆ ಬೇಡಿಕೆಯನ್ನು ಮುಂದಿಟ್ಟಿತ್ತು. ಆದ್ರೆ ಸರ್ಕಾರ ಮಾತ್ರ ಶೇ.10ರಷ್ಟು ಹೆಚ್ಚಳಕ್ಕೆ ತೀರ್ಮಾನ ಕೈಗೊಂಡಿದೆ. ಸಿ.ಎಂ ಬಸವರಾಜ ಬೊಮ್ಮಾಯಿಯವರ ಅನುಮತಿ ಪಡೆದು ಅಧಿಕೃತ ಆದೇಶ ಹೊರಡಿಸಲು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಈ ಹಿಂದೆಯೇ ಶುಲ್ಕ ಹೆಚ್ಚಳಗೊಳಿಸುವ ಸಭೆಗೆ ಮುಹೂರ್ತ ಇಡಲಾಗಿತ್ತು. ಎರಡು ಬಾರಿ ಸಮಯ ನಿಗದಿಯಾಗಿದ್ದರು ಸಹ ವೈದ್ಯಕೀಯ ಸಚಿವರ ಗೈರು ಹಾಜರಿಯಿಂದಾಗಿ ಸಭೆ ನಡೆದಿರಲಿಲ್ಲ. ಆದ್ರೆ ಇತ್ತಿಚೇಗೆ ಸಭೆ ನಡೆದಿದ್ದು ಶೇ.10 ರಷ್ಟು ಶುಲ್ಕ ಹೆಚ್ಚಳಕ್ಕೆ ಎಲ್ಲರೂ ಸಮ್ಮತಿಸಿದ್ದಾರೆ. ಆದ್ರೆ ಸೀಟು ಹಂಚಿಕೆಯಲ್ಲಿ ಮಾತ್ರ ಹಳೆಯ ಶೇಕಡವಾರು ಪದ್ದತಿ ಮುಂದುವರಿಯೋದು ದಟ್ಟವಾಗಿದೆ.
ಸರ್ಕಾರಿ ಕಾಲೇಜುಗಳಲ್ಲು ಈ ಶುಲ್ಕ ಹೆಚ್ಚಳವಾಗುವುದಿಲ್ಲ. ಆದ್ರೆ ಖಾಸಗಿ ಕಾಲೇಜಿನಲ್ಲಿರುವ ಸರ್ಕಾರಿ ಕೋಟಾ ಶುಲ್ಕವು ಹೆಚ್ಚಳವಾಗಿದೆ. ಈ ಹಿಂದೆ ಈ ಶುಲ್ಕ1,28,746 ರೂ ಇದ್ದರೆ ಇನ್ನು 10% ಹೆಚ್ಚಳದಿಂದಾಗಿ 1,41,620 ರೂ ಆಗಲಿದೆ. ಇನ್ಮು ಖಾಸಗಿ ಕಾಲೇಜಿನಲ್ಲಿ ಎಂಬಿಬಿಎಸ್ ಶುಲ್ಕ 9,81,956 ರೂ ಇದೆ. ಪರಿಷ್ಕೃತ ಶುಲ್ಕ 10,80,152 ರೂಗಳಿಗೆ ಏರಿಕೆ ಆಗಲಿದೆ. ಒಟ್ಟಿನಲ್ಲಿ ಸರ್ಕಾರ ಈ ರೀತಿಯಾಗಿ ಶುಲ್ಕ ಹೆಚ್ಚಳ ಮಾಡುತ್ತ ಹೋದರೆ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಪಾಲಿಗೆ ವೈದ್ಯಕೀಯ ವ್ಯಾಸಂಗ ಗಗನಕುಸುಮ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಇದನ್ನು ಓದಿ : Ajinkya Rahane: ಅಶಿಸ್ತು ತೋರಿದ ಯಶಸ್ವಿ ಜೈಸ್ವಾಲ್‌ನನ್ನು ಮೈದಾನದಿಂದ ಹೊರಗಟ್ಟಿದ ಅಜಿಂಕ್ಯ ರಹಾನೆ
ಇದನ್ನೂ ಓದಿ : 5G service :ದೇಶದ ಏಳು ನಗರಗಳಲ್ಲಿ ಆರಂಭವಾಗಲಿದೆ 5ಜಿ ಸೇವೆ
Here is shocking information for medical students