Korean Skincare : ಕೋರಿಯನ್ ತ್ವಚೆಯ ಗುಟ್ಟು ನಿಮಗೆ ಗೊತ್ತಾ; ಹೊಳೆಯುವ, ಪಾರದರ್ಶಕ ತ್ವಚೆಗಾಗಿ ಹೀಗೆ ಮಾಡಿ

ಕೆ–ಪಾಪ್‌ ಹಾಡುಗಳನ್ನು (K-Pop Songs) ಕೇಳುವವರಂತೂ ಕೋರಿಯಾದವರನ್ನು (Koreans) ನೋಡಿಯೇ ಇರುತ್ತಾರೆ. ಕೆಲೆಗಳಿಲ್ಲದ, ಹೊಳೆಯುವ ನುಣುಪಾದ ತ್ವಚೆಯನ್ನು ನೋಡಿ ನಮಗೂ ಅಂತಹುದೇ ತ್ವಚೆ ಇದ್ದಿದ್ದರೆ ಎಂದು ಯೋಚಿಸುವವರೂ ಇದ್ದಾರೆ. ಕೋರಿಯಾದವರು ತಮ್ಮ ತ್ವಚೆಯ ಆರೈಕೆಯನ್ನು (Korean Skincare) ಬಹಳ ಕಾಳಜಿಯಿಂದ ಮಾಡುತ್ತಾರೆ. ನೈಸರ್ಗಿಕ ರೀತಿಯಲ್ಲೇ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುತ್ತಾರೆ. ಅವರ ಈ ರೀತಿಯ ತ್ವಚೆಗೆ ಕಾರಣ ಅವರ ದಿನಚರಿ. ಚರ್ಮವನ್ನು ನೈಸರ್ಗಿಕವಾಗಿ ಕ್ಲೆನ್ಸಿಂಗ್‌, ಹೈಡ್ರೇಟಿಂಗ್‌, ನರೇಶಿಂಗ್‌, ಮತ್ತು ಪ್ರೊಟೆಕ್ಟಿಂಗ್‌ ಈ ನಾಲ್ಕು ರೀತಿಯಲ್ಲಿ ಚರ್ಮವನ್ನು ಶುದ್ದೀಕರಸುವ ಕಡೆ ಗಮನ ಹರಿಸುತ್ತಾರೆ. ಹೊಳೆಯುವ ಮತ್ತು ಪಾರದರ್ಶಕ ತ್ವಚೆ ಪಡೆಯಲು ಅವರು 5 ರಿಂದ 10 ಹಂತಗಳ ದಿನಚರಿಯ ಮೊರೆ ಹೋಗುತ್ತಾರೆ. ಇವೆಲ್ಲ ಚರ್ಮದ ಆರೈಕೆಗಳು ನೈಸರ್ಗಿಕವಾಗಿಯೇ ಇದೆ ಎನ್ನುವುದು ಬಹು ಮುಖ್ಯ ಅಂಶ.

ಕೋರಿಯನ್‌ರು ತಮ್ಮ ತ್ವಚೆಯ ಆರೈಕೆಯನ್ನು ಈ ರೀತಿ ಮಾಡುತ್ತಾರೆ :

ಎಣ್ಣೆ ಆಧಾರಿತ ಕ್ಲೆನ್ಸರ್‌ ಬಳಕೆ :
ಎಣ್ಣೆ ಆಧಾರಿತ ಕ್ಲೆನ್ಸರ್‌ಗಳು, ಮೇಕಪ್‌ ಮತ್ತು ತ್ವಚೆಯ ಮೇಲಿರುವ ಎಣ್ಣೆಯಂತಹ ಪದಾರ್ಥಗಳನ್ನು ತೆಗದು ಹಾಕಲು ಸಹಾಯ ಮಾಡುತ್ತವೆ. ಇದು ತ್ವಚೆಯಲ್ಲಿರುವ ನೈಸರ್ಗಿಕ ಎಣ್ಣೆಯಂಶವನ್ನು ತೆಗೆಯದೇ ಸನ್‌ಸ್ಕ್ರೀನ್‌ ಗಳನ್ನು ಮಾತ್ರ ತೆಗೆದುಹಾಕುವುದು.

ನೀರು ಆಧಾರಿತ ಕ್ಲೆನ್ಸರ್‌ ಬಳಕೆ :
ಎಣ್ಣೆ ಆಧಾರಿತ ಕ್ಲೆನ್ಸರ್‌ನಿಂದಲೂ ತೆಗೆದು ಹಾಕಲು ಸಾಧ್ಯವಾಗದವುಗಳನ್ನು ನೀರು ಆಧಾರಿತ ಕ್ಲೆನ್ಸರ್‌ ಸುಲಭವಾಗಿ ತೆಗೆದುಹಾಕಬಲ್ಲದು. ಇದು ತ್ವಚೆಯನ್ನು ಹೈಡ್ರೇಟ್‌ ಆಗಿರುವಂತೆಯೂ ನೋಡಿಕೊಳ್ಳುವುದು.

ಎಕ್ಸ್‌ಫೋಲಿಯಂಟ್‌ ಬಳಕೆ:
ಡೆಡ್‌ ಸ್ಕಿನ್‌ ತೊಡೆದು ಹಾಕಲು ಎಕ್ಸ್‌ಫೋಲಿಯಂಟ್‌ ಗಳು ಬಹಳ ಸಹಕಾರಿ. ಇದು ತ್ವಚೆಯ ಮೇಲಿನ ಪದರದಲ್ಲಿ ರೂಪುಗೊಳ್ಳುವ ಡೆಡ್‌–ಸ್ಕಿನ್‌ಗಳನ್ನು ಯಶಸ್ವಿಯಾಗಿ ನಿವಾರಿಸಬಲ್ಲದು.

ಟೋನರ್‌ ಬಳಕೆ:
ಟೋನರ್‌ಗಳು ತ್ವಚೆಯನ್ನು ಟೋನ್‌ ಮಾಡಲು ಮತ್ತು PH ಲೆವಲ್‌ ಅನ್ನು ಬ್ಯಾಲೆನ್ಸ್‌ ಮಾಡಲು ಸಹಾಯ ಮಾಡುತ್ತದೆ.

ಸಿರಮ್‌ ಬಳಕೆ :
ತ್ವಚೆಗೆ ಸರಿ ಹೊಂದುವ ಸಿರಮ್‌ಗಳನ್ನು ಬಳಕೆ ಮಾಡುವುದರಿಂದ ಸ್ಕಿನ್‌ ಪ್ರಾಬ್ಲಮ್‌ಗಳಾದ ಪಿಗ್ಮೆಂಟೇಷನ್‌, ಎಕ್ನೀ ಮುಂತಾದ ಸಮಸ್ಯೆಗಳನ್ನು ದೂರಮಾಡುತ್ತದೆ.

ಎಸೆನ್ಸ್‌ ಬಳಕೆ :
ಎಸೆನ್ಸ್‌ಗಳು ತ್ವಚೆಯನ್ನು ಮಾಯ್‌ಸ್ಚರೈಸ್‌ ಮತ್ತು ಹೈಡ್ರೇಟ್‌ ಆಗಿರಲು ಸಹಾಯ ಮಾಡುತ್ತದೆ.

ಮಾಸ್ಕ್‌ ಶೀಟ್‌ಗಳ ಬಳಕೆ :
ಮಾಸ್ಕ್‌ ಶೀಟ್‌ಗಳಲ್ಲಿರುವ ಸಿರಮ್‌ಗಳನ್ನು ತ್ವಚೆಯು ಹೀರಿಕೊಳ್ಳುತ್ತದೆ. ಇದರಿಂದ ತ್ವಚೆಗೆ ಉತ್ತಮ ಪೋಷಣೆ ಸಿಗುತ್ತದೆ.

ಕಣ್ಣಿನ ಕ್ರೀಮ್‌ ಬಳಕೆ :
ಅತ್ಯಂತ ಸೂಕ್ಷ್ಮವಾದ ಕಣ್ಣಿನ ಕೆಳಗಿನ ತ್ವಚೆ ಪೋಷಿಸಲು ಐ–ಕ್ರೀಮ್‌ಗಳು ಬಹಳ ಅವಶ್ಯಕ.

ಮಾಯ್‌ಸ್ಚರೈಸರ್‌ ಬಳಕೆ :
ಇದರಿಂದ ತ್ವಚೆಯನ್ನು ಮಾಯ್‌ಸ್ಚರೈಸ್‌ ಆಗಿ ಇರಿಸಲು ಸಹಾಯವಾಗುತ್ತದೆ. ಈಗಾಗಲೇ ತ್ವಚೆಯ ಆರೈಕೆಗೆ ಬಳಕೆ ಮಾಡಿದ ವಸ್ತುಗಳನ್ನು ಹಿಡಿದಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.

ಸನ್‌ಸ್ಕ್ರೀನ್‌ಗಳ ಬಳಕೆ :
ಕೊನೆಯಲ್ಲಿ, ಬಹಳ ಮುಖ್ಯವಾಗಿ ತ್ವಚೆಯನ್ನು ಕಾಪಾಡಿಕೊಳ್ಳಲು ಸನ್‌ಸ್ಕ್ರೀನ್‌ಗಳ ಬಳಕೆ ಅತಿ ಅವಶ್ಯಕ. ಇದು ಸೂರ್ಯನ ಬಿಸಿಲಿನಿಂದ ತ್ವಚೆಯು ಹಾಳಾಗದಂತೆ ಕಾಪಾಡುತ್ತದೆ.

ಇದನ್ನೂ ಓದಿ : Navratri 2022 : ನವರಾತ್ರಿಯ ಒಂಬತ್ತು ಬಣ್ಣಗಳ ವಿಶೇಷತೆ ನಿಮಗೆ ಗೊತ್ತಾ

ಇದನ್ನೂ ಓದಿ : Harmful Food For Liver: ಲಿವರ್ ಆರೋಗ್ಯಕ್ಕೆ ಈ ಆಹಾರ ಸೇವನೆ ತಪ್ಪಿಸಿ

(Korean Skincare tips follow these secret steps to get glossy skin)

Comments are closed.