ಹೈದರಾಬಾದ್: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಶಾಲೆಗಳ ಪುನರಾರಂಭದ ಕುರಿತು ಅನಿಶ್ಚಿತತೆ ಕಾಡುತ್ತಿದೆ. ಈ ನಡುವಲ್ಲೇ ಆಂಧ್ರ ಪ್ರದೇಶ ಸರಕಾರ ಸಪ್ಟೆಂಬರ್ 5ರಿಂದ ಶಾಲೆಗಳನ್ನು ತೆರೆಯಲು ಪ್ಲ್ಯಾನ್ ರೂಪಿಸಿಕೊಂಡಿದೆ. ಸರಕಾರ ಶಾಲೆಗಳ ಪುನರಾರಂಭಕ್ಕೆ ಬೇಕಾದ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ.

ಶಾಲೆಗಳ ಪುನರಾರಂಭದ ಕುರಿತು ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಜೊತೆಗೆ ಶಿಕ್ಷಣ ಸಚಿವ ಆದಿಮುಲಪು ಸುರೇಶ್ ಸಭೆ ನಡೆಸಿದ್ದರು. ಸೆಪ್ಟೆಂಬರ್ 5ಕ್ಕೆ ಶಾಲೆ ಆರಂಭಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಆದ್ರೆ ಅಂತಿಮ ನಿರ್ಧಾರ ಅಂದಿನ ಸ್ಥಿತಿಗತಿಗಳ ಮೇಲೆಯೇ ನಿರ್ಧಾರ ಆಗಲಿದೆ. ಶಾಲೆ ಆರಂಭವಾಗವರೆಗೂ ಮಕ್ಕಳ ಮನೆಗಳಿಗೆ ಅವರ ಪಡಿತರವನ್ನು ಪೂರೈಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ದಿನ ಶೈಕ್ಷಣಿಕ ವರ್ಷದಿಂದ ಪೂರ್ವ ಪ್ರಾಥಮಿಕ (ಎಲ್‍ಕೆಜಿ ಮತ್ತು ಯುಕೆಜಿ) ತರಗತಿಗಳನ್ನು ಸರ್ಕಾರಿ ಶಾಲೆಗಳಲ್ಲಿ ಆರಂಭಿಸಲಾಗುವುದು. ಸ್ಪರ್ಧಾತ್ಮಕ ಪರೀಕಗ್ಷೆಗಳ ತರಬೇತಿಯನ್ನು ಸರಕಾರದ ವತಿಯಿಂದಲೇ ನೀಡಲಾಗುತ್ತದೆ ಎಂದಿದ್ದಾರೆ. ಆದರೆ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಪ್ಟೆಂಬರ್ 5ರ ಸಂದರ್ಭದಲ್ಲಿ ಯಾವ ಸ್ಥಿತಿ ಇರುತ್ತದೆಯೋ ಆ ಸ್ಥಿತಿಯನ್ನು ಆಧರಿಸಿ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ.