ನೀವು N95ಮಾಸ್ಕ್ ಬಳಸುತ್ತಿದ್ದೀರಾ ? ಹಾಗಾದ್ರೆ ಕೊರೊನಾ ಬರಬಹುದು ಹುಷಾರ್ !

0

ವದೆಹಲಿ : ಕೊರೊನಾ ಸೋಂಕಿನಿಂದ ರಕ್ಷಣೆ ಪಡೆಯಲು ಎನ್ 95 ಮಾಸ್ಕ ಸೇಪ್ ಅಂತಾ ಹೇಳಲಾಗ್ತಿತ್ತು. ಹೀಗಾಗಿಯೇ ಕೊರೊನಾ ವಿರುದ್ದ ಹೋರಾಟ ನಡೆಸುತ್ತಿರುವ ಆರೋಗ್ಯ ಕಾರ್ಯಕರ್ತರೂ, ಸರಕಾರಿ ನೌಕರರ ಜೊತೆಗೆ ಜನಸಾಮಾನ್ಯರು ಕೂಡ ಎನ್ 95 ಮಾಸ್ಕ್ ಬಳಕೆ ಮಾಡುತ್ತಿದ್ದಾರೆ.

ಇಷ್ಟು ದಿನ ಎನ್ 95 ಮಾಸ್ಕ್ ಬಳಸಿದ್ರೆ ಕೊರೊನಾ ಸೋಂಕು ಬರುವುದೇ ಇಲ್ಲಾ ಅಂತಾ ಭಾವಿಸಿಕೊಂಡಿದ್ರು. ಆದ್ರೀಗ ಎನ್ 95 ಮಾಸ್ಕ್ ಕೊರೊನಾ ಸೋಂಕನ್ನು ತಡೆಯಲು ಸಾಧ್ಯವಿಲ್ಲಾ ಅಂತ ಖುದ್ದು ಕೇಂದ್ರ ಸರಕಾರ ಹೇಳಿರುವುದು ಆಘಾತಮೂಡಿಸಿದೆ.

ಸಾಮಾಜಿಕ ಅಂತರ ಹಾಗೂ ಮಾಸ್ಕ್ ಬಳಕೆಯಿಂದ ಬಳಕೆಯೇ ಕೊರೊನಾ ವೈರಸ್ ಸೋಂಕು ತಡೆಯಲು ರಾಮಬಾಣವೆನ್ನಲಾಗುತ್ತಿದೆ. ಹೀಗಾಗಿಯೇ ಜನರು ಬಗೆ ಬಗೆಯ ಮಾಸ್ಕ್ ಗಳನ್ನು ಬಳಕೆ ಮಾಡುತ್ತಿದ್ದಾರೆ. ಅದ್ರಲ್ಲೂ ಬಳಸಲು ಹೆಚ್ಚು ಸೂಕ್ತವೆನಿಸಿರುವ ಎನ್ 95 ಮಾಸ್ಕ್ ಹೆಚ್ಚು ಬೇಡಿಕೆಯನ್ನು ಪಡೆದುಕೊಂಡಿತ್ತು. ಆದ್ರೀಗ ಎನ್ 95 ಮಾಸ್ಕ್ ಕೊರೊನಾ ವೈರಸ್ ಸೋಂಕಿನಿಂದ ಜನರನ್ನು ರಕ್ಷಿಸುವುದಿಲ್ಲವೆಂಬ ಬಯಲಾಗಿದೆ.

ಕೇಂದ್ರ ಸರಕಾರದ ಆರೋಗ್ಯ ಇಲಾಖೆ ಈಗಾಗಲೇ ದೇಶದ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಎಚ್ಚರಿಕೆಯ ಪತ್ರವೊಂದನ್ನು ರವಾನಿಸಿದೆ. ಪತ್ರದಲ್ಲಿ ಎನ್ 95 ಮಾಸ್ಕ್ ಕುರಿತು ಉಲ್ಲೇಖವನ್ನು ಮಾಡಲಾಗಿದ್ದು, ಮಾಸ್ಕ್ ನಲ್ಲಿ ರಂಧ್ರಗಳ ಮೂಲಕ ಉಸಿರಾಟಕಾರಕಗಳು ಕೊರೊನಾ ರೋಗವನ್ನು ಹರಡುವುದನ್ನು ತಡೆಯುವುದಿಲ್ಲ ಎಂದು ತಿಳಿಸಿದೆ.

ಎನ್ 95 ರಂಧ್ರವಿರುವ ಮಾಸ್ಕ್ ಬಳಕೆ ಮಾಡುವ ಬದಲು ರಂಧ್ರವಿಲ್ಲದ ಮಾಸ್ಕ್ ಕೊರೊನಾ ರಕ್ಷಣೆಗೆ ಹೆಚ್ಚು ಸೂಕ್ತವಾಗಿದೆ ಎಂದು ಆರೋಗ್ಯ ಸಚಿವಾಲಯದ ಆರೋಗ್ಯ ಸೇವೆಗಳ ಮಹಾನಿರ್ದೇಶಕ ರಾಜೀವ್ ಗರ್ಗ್ ಅವರು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರಬರೆದಿದ್ದಾರೆ.

Leave A Reply

Your email address will not be published.