RCB Blue Jersey : ಐಪಿಎಲ್‌ನಲ್ಲಿ ನೀಲಿ ಜರ್ಸಿ ತೊಟ್ಟು ಕಣಕ್ಕಿಳಿಯಲಿದೆ ಆರ್‌ಸಿಬಿ

ದುಬೈ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಫ್ರಾಂಚೈಸಿಗಳು ಈಗಾಗಲೇ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿವೆ. ಅದ್ರಲ್ಲೂ ಕನ್ನಡಿಗರ ಹಾಟ್‌ ಫೇವರೇಟ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಈ ಬಾರಿ ಬ್ಲೂ ಜರ್ನಿ ತೊಟ್ಟು ಕಣಕ್ಕೆ ಇಳಿಯಲು ಸಜ್ಜಾಗಿದೆ.

ಆರ್‌ಸಿಬಿ ( Royal Challengers Bangalore) ತಂಡ ಸಾಮಾನ್ಯವಾಗಿ ಕೆಂಪು ಹಾಗೂ ಕಪ್ಪು ಬಣ್ಣದ ಜೆರ್ಸಿ ತೊಟ್ಟು ಕಣಕ್ಕೆ ಇಳಿಯುತ್ತದೆ. ಜೊತೆಗೆ ಹಸಿರು ಜರ್ಸಿಯಲ್ಲಿಯೂ ಪಂದ್ಯಾವಳಿಯನ್ನು ಆಡಿದೆ. ಆದ್ರೆ ಈ ಬಾರಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ನೀಲಿ ಜರ್ಸಿ ತೊಟ್ಟು ಆಡಲು ಸಜ್ಜಾಗಿದೆ.

ಸೆಪ್ಟೆಂಬರ್ 19ರಿಂದಲೇ ಐಪಿಎಲ್‌ ಎರಡನೇ ಆವತರಿಣಿಕೆ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣೆಸಾಟ ನಡೆಸಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೆ. 20 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಕೊಯ್ಲಿ ಬಾಯ್ಸ್‌ ನೀಲಿ ಜರ್ಸಿಯಲ್ಲಿ ಮಿಂಚಲಿದ್ದಾರೆ.

ಅಷ್ಟಕ್ಕೂ ಆರ್‌ಸಿಬಿ ತಂಡ ನೀಲಿ ಜರ್ಸಿ ಧರಿಸುವುದರ ಹಿಂದೆ ಬಲವಾದ ಕಾರಣವಿದೆ. ಕೋವಿಡ್ ವಾರಿಯರ್ಸ್​ಗೆ ಗೌರವ ಸೂಚಿಸುವ ಉದ್ದೇಶದಿಂದ ಆರ್​ಸಿಬಿ ನೀಲಿ ಜೆರ್ಸಿ ಧರಿಸಿ ಆಡಲಿದೆ. ಇದು ಕೋವಿಡ್ ವಾರಿಯರ್ಸ್ ಗಳ ಅಮೂಲ್ಯ ಸೇವೆಗೆ ಗೌರವ ಸಲ್ಲಿಸುವ ಉದ್ದೇಶವಾಗಿದೆ. ಪಿಪಿಇ ಕಿಟ್‌ಗಳ ಬಣ್ಣವನ್ನು ಹೋಲುವ ನೀಲಿ ಜೆರ್ಸಿಯಲ್ಲಿ ಕಣಕ್ಕಿಳಿದು ಆರ್‌ಸಿಬಿ ಗೌರವ ಸೂಚಿಸಲಿದೆ ಎಂದು ಆರ್‌ಸಿಬಿ ತನ್ನ ಟ್ವೀಟರ್‌ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದೆ.

ಇದನ್ನೂ ಓದಿ : ಟೀ ಇಂಡಿಯಾ ಮೆಂಟರ್ ಆಯ್ಕೆ ಬೆನ್ನಲ್ಲೇ ಮಹೇಂದ್ರ ಸಿಂಗ್‌ ಧೋನಿ ವಿರುದ್ಧ ದಾಖಲಾಯ್ತು ದೂರು !

ಇದನ್ನೂ ಓದಿ :  ಕ್ರಿಕೆಟ್‌ ಮೈದಾನದಲ್ಲಿ ನಾಯಿಯ ಭರ್ಜರಿ ಫೀಲ್ಡಿಂಗ್‌ : ಚೆಂಡು ಕದ್ದ ನಾಯಿ, ಕ್ರಿಕೆಟ್‌ ಪಂದ್ಯವೇ ಸ್ಥಗಿತ !

( Virat Kohli – Led RCB to Wear Blue Jersey vs KKR in IPL Second Leg Opener to Pay Tribute to COVID-19 Frontline Workers )

Comments are closed.