ISC Semester 2 Exam 2022 : ಐಎಸ್‌ಸಿ ಸೆಮಿಸ್ಟರ್‌ 2 ಪರೀಕ್ಷೆ 2022 : ಪ್ರವೇಶ ಪತ್ರ ಮತ್ತು ಅಗತ್ಯ ಮಾಹಿತಿ ಇಲ್ಲಿದೆ ನೋಡಿ

ದಿ ಕೌನ್ಸಿಲ್‌ ಫಾರ್‌ ದಿ ಇಂಡಿಯನ್‌ ಸ್ಕೂಲ್‌ ಸರ್ಟಿಫಿಕೇಟ್‌ ಎಕ್ಸಾಮಿನೇಷನ್‌ (CISCE) ಇದೇ ಏಪ್ರಿಲ್‌ 25 ಮತ್ತು ಏಪ್ರಿಲ್‌ 26, 2022 ಗೆ ಕ್ರಮವಾಗಿ ICSE 10 ನೇ ತರಗತಿ ಮತ್ತು ISC 12 ನೇ ತರಗತಿಗಳ ಪರೀಕ್ಷೆಯು (ISC Semester 2 Exam 2022) ಪ್ರಾರಂಭಗೊಳ್ಳಲಿದೆ. ಇಂಡಿಯನ್‌ ಸ್ಕೂಲ್‌ ಸರ್ಟಿಫಿಕೇಟ್‌(ISC ) ಅಥವಾ 12 ನೇ ತರಗತಿ ಯ 2ನೇ ಸೆಮಿಸ್ಟರ್‌ ಪರೀಕ್ಷೆಯು ಜೂನ್‌ 13 ಕ್ಕೆ ಕೊನೆಗೊಳ್ಳಲಿದೆ. ಐಎಸ್‌ಸಿ ಪರೀಕ್ಷೆಯ ಬಹು ಮುಖ್ಯ ವಿಷಯ ಇಂಗ್ಲೀಷ್‌ ಪತ್ರಿಕೆಯಾಗಿದ್ದು, ವಿದ್ಯಾರ್ಥಿಗಳು ಮಾದರಿ ಪ್ರಶ್ನೆ ಪತ್ರಿಕೆಗಳು ಮತ್ತು ಸಿಲೇಬಸ್‌ಗಳನ್ನು CISCE ಯ ಅಧಿಕೃತ ವೆಬ್‌ಸೈಟ್ ಆದ cisce.org ಯಲ್ಲಿ ಪರಿಶೀಲಿಸಬಹುದಾಗಿದೆ.

ವಿದ್ಯಾರ್ಥಿಗಳು ಸದ್ಯ ಪ್ರವೇಶ ಪತ್ರಕ್ಕೆ ಎದುರುನೋಡುತ್ತಿದ್ದು ಶೀಘ್ರದಲ್ಲೇ CISCE ಬಿಡುಗಡೆ ಮಾಡಲಿದೆ. ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ಶಾಲೆಗೆ ಹೋಗಿ ಪಡೆದುಕೊಳ್ಳಬಹುದಾಗಿದೆ.

ಅಗತ್ಯ ಮಾಹಿತಿಗಳು:

  • ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದವನ್ನು ನಿಗದಿತ ಸಮಯಕ್ಕೆ ತಲುಪಬೇಕು ಮತ್ತು ಸಮಚಿತ್ತದಿಂದ ವರ್ತಿಸಬೇಕು.
  • ಸೆಮಿಸ್ಟರ್‌ 2 ರ ಪ್ರವೇಶ ಪತ್ರವನ್ನು ಶಾಲೆಯಲ್ಲಿ ಪಡೆದುಕೊಳ್ಳಬೇಕು ಮತ್ತು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು.
  • ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಕೋವಿಡ್‌–19 ಮಾರ್ಗಸೂಚಿ ಪಾಲಿಸತಕ್ಕದ್ದು. ಮತ್ತು ಫೇಸ್‌ ಮಾಸ್ಕ್‌, ಸೆನಿಟೈಸರ್‌ ಮುಂತಾದ ಮುಂಜಾಗ್ರತಾ ಕ್ರಮವನ್ನು ಪಾಲಿಸತಕ್ಕದ್ದು.
  • ಪರೀಕ್ಷಾರ್ಥಿಗಳು ಸಹಿ ಮಾಡಲು ನಿಗದಿ ಪಡಿಸಿದ ಸ್ಥಳದಲ್ಲಿಯೇ ಸಹಿ ಮಾಡಬೇಕು. ಮೊದಲ ಪುಟದಲ್ಲಿ ಏನಾದರು ಬರೆಯುವುದು ಅಥವಾ ಗೆರೆ ಎಳೆಯುವುದನ್ನು ಮಾಡಲೇಬಾರದು. ಸಹಿಯ ಜೊತೆ, ಪರೀಕ್ಷಾರ್ಥಿಗಳು ಯುನಿಕ್‌ ಐಡಿ, ಇಂಡೆಕ್ಸ್‌ ಸಂಖ್ಯೆ ಮತ್ತು ವಿಷಯಗಳನ್ನು ಸರಿಯಾಗಿ ಮತ್ತು ಕಡ್ಡಾಯವಾಗಿ ಬರೆಯತಕ್ಕದ್ದು.
  • ಪ್ರಶ್ನೆಗಳ ಸಂಖ್ಯೆಯನ್ನು ಸರಿಯಾಗಿ ಕಾಣಿಸುವಂತೆ ಎಡಗಡೆಯ ಮಾರ್ಜಿನ್‌ ನಲ್ಲಿ ಉತ್ತರಿಸುವ ಮೊದಲು ಬರೆಯತಕ್ಕದ್ದು. ಪರೀಕ್ಷಾರ್ಥಿಗಳು ನೀಲಿ ಅಥವಾ ಕಪ್ಪು ಬಾಲ್‌ ಪೈಂಟ್‌ ಪೆನ್‌ ಅಥವಾ ಫೌಂಟೈನ್‌ ಪೆನ್‌ ಅನ್ನು ಉತ್ತರಿಸಲು ಬಳಸಬಹುದು. ಆಕೃತಿಗಳನ್ನು ಪೆನ್ಸಿಲ್‌ ನಲ್ಲಿಯೇ ಬಿಡಿಸಬೇಕು.
  • ಪರೀಕ್ಷೆಗೆ ಯಾವುದೇ ರೀತಿಯ ನಿಷೇಧಿತ ವಸ್ತುಗಳಾದ ಮೊಬೈಲ್‌ ಫೋನ್‌, ಎಲೆಕ್ಟ್ರಾನಿಕ್‌ ವಸ್ತುಗಳು, ಹೆಡ್‌ಫೋನ್‌ ಮತ್ತು ಇತರ ಗ್ಯಾಜೆಟ್‌ಗಳನ್ನು ತೆಗೆದುಕೊಂಡು ಹೋಗಬಾರದು.

ಇದನ್ನೂ ಓದಿ :CBSE Term 2 Exam : 10,12ನೇ ತರಗತಿ ಟಾಪರ್​​ಗಳ ಉತ್ತರ ಪತ್ರಿಕೆ ಬಹಿರಂಗಪಡಿಸಲು ಸಿಬಿಎಸ್​ಇ ಪ್ಲಾನ್​

ಇದನ್ನೂ ಓದಿ :CBSE Term 2 2022 ರ 10 ನೇ ತರಗತಿ ಪರಿಕ್ಷೆಯ ಹಾಲ್‌ ಟಿಕೇಟ್‌ ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆ ಗೊತ್ತೇ?

ISC Semester 2 Exam 2022 Admit Card and Important Guidelines

Comments are closed.