COVID Positive Samples : ದೆಹಲಿಯಲ್ಲಿ ಶುರುವಾಯ್ತಾ ಕ್ಸಿ ರೂಪಾಂತರಿ ಅಬ್ಬರ? ಪ್ರಯೋಗಾಲಯದ ವರದಿಗೆ ಕಾದ ಸರ್ಕಾರ

COVID Positive Samples : ದೇಶದಲ್ಲಿ ಕೋವಿಡ್ 19 ಸೋಂಕಿನಲ್ಲಿ ಮತ್ತೊಮ್ಮೆ ಏರಿಕೆ ಕಾಣುತ್ತಿರುವ ಬೆನ್ನಲ್ಲೇ ದೆಹಲಿ ಸರ್ಕಾರವು ಕೊರೊನಾ ಸೋಂಕಿಗೆ ಒಳಗಾದವರ ಸ್ಯಾಂಪಲ್​​ಗಳನ್ನು ಪ್ರಯೋಗಾಲಯಗಳಲ್ಲಿ ಜಿನೋಮ್​ ಸಿಕ್ವೆನ್ಸಿಂಗ್​​ಗೆ ಕಳುಹಿಸಿಕೊಡುತ್ತಿದೆ. ಈ ಮೂಲಕ ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾದ ಹೊಸ ರೂಪಾಂತರಿ ಕ್ಸಿ ಕಾಣಿಸಿಕೊಂಡಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ದೆಹಲಿ ಸರ್ಕಾರ ಮುಂದಾಗಿದೆ. ಈ ಪರೀಕ್ಷೆಗಳ ಪ್ರಯೋಗಾಲಯದ ವರದಿಗಳು ಈ ವಾರಾಂತ್ಯದೊಳಗೆ ಸಿಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.


ಕಳೆದ ಕೆಲವು ದಿನಗಳಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಪಾಸಿಟಿವ್​ ಪ್ರಕರಣಗಳಲ್ಲಿ ಏರಿಕೆ ಕಂಡು ಬರುತ್ತಿದೆ. ಸೋಮವಾರದಂದು ದೆಹಲಿಯಲ್ಲಿ 501 ಹೊಸ ಕೋವಿಡ್​ ಪ್ರಕರಣಗಳು ವರದಿಯಾಗಿದ್ದು ಈ ಮೂಲಕ ಪಾಸಿಟಿವಿಟಿ ದರವು 7.7 ಪ್ರತಿಶತಕ್ಕೆ ಏರಿಕೆ ಕಂಡಿದೆ. ಯಾವುದೇ ಕೊರೊನಾ ಸಾವು ಪ್ರಕರಣಗಳು ವರದಿಯಾಗಿಲ್ಲ. ಈ ಹೊಸ ಕೇಸುಗಳು ವರದಿಯಾದ ಬಳಿಕ ದೆಹಲಿಯಲ್ಲಿ ಒಟ್ಟು ಕೊರೊನಾ ಪೀಡಿತರ ಸಂಖ್ಯೆ 18,69,051 ಆಗಿದೆ ಹಾಗೂ ಕೊರೊನಾ ಸಾವಿನ ಸಂಖ್ಯೆ 26,160ಕ್ಕೆ ತಲುಪಿದೆ.

ಈ ನಡುವೆ, ರಾಷ್ಟ್ರ ರಾಜಧಾನಿಯಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಪರಿಶೀಲಿಸಲು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಬುಧವಾರ ಮಹತ್ವದ ಸಭೆಯನ್ನು ಕರೆದಿದೆ. ಲೆಫ್ಟಿನೆಂಟ್ ಗವರ್ನರ್ (ಎಲ್-ಜಿ) ಅನಿಲ್ ಬೈಜಾಲ್ ಅವರ ಅಧ್ಯಕ್ಷತೆಯಲ್ಲಿ, ಫೇಸ್ ಮಾಸ್ಕ್‌ಗಳ ಕಡ್ಡಾಯ ಬಳಕೆ ಮತ್ತು ಶಾಲಾ ಮಕ್ಕಳಿಗೆ ಆಫ್‌ಲೈನ್ ಮತ್ತು ಆನ್‌ಲೈನ್ ಬೋಧನೆಯ ಹೈಬ್ರಿಡ್ ಮೋಡ್ ಕುರಿತು ಚರ್ಚಿಸಲು ಸಭೆಯನ್ನು ಕರೆಯಲಾಗಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, ಮುಖ್ಯ ಕಾರ್ಯದರ್ಶಿ ವಿಜಯ್ ದೇವ್ ಮತ್ತು ಸಂಬಂಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳು ಪ್ರಮುಖ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಇದನ್ನು ಓದಿ : Covid-19: ಬೂಸ್ಟರ್​ ಡೋಸ್​​ ಅಂತರವನ್ನು ಆರು ತಿಂಗಳಿಗೆ ಇಳಿಸುವಂತೆ ಸೀರಂ ಸಂಸ್ಥೆ ಮನವಿ

ಇದನ್ನೂ ಓದಿ : COVID Advisory to Schools : ಕೊರೊನಾ ಸೋಂಕು ಹೆಚ್ಚಳದ ನಡುವೆಯೇ ಶಾಲೆಗಳಲ್ಲಿ ಮಾರ್ಗಸೂಚಿ ಜಾರಿ

XE or Not? Delhi COVID Positive Samples Sent For Genome Sequencing to Know Reason Behind Sudden Surge

Comments are closed.