APJEE 2022 : ಎಪಿಜೆಇಇ ಪರೀಕ್ಷೆಗಳಿಗೆ ಆನ್​ಲೈನ್​ ಅರ್ಜಿ ಸಲ್ಲಿಕೆ ಆರಂಭ

ಅರುಣಾಚಲ ಪ್ರದೇಶ ಜಂಟಿ ಪ್ರವೇಶ ಪರೀಕ್ಷೆ (APJEE 2022) ಅಪ್ಲಿಕೇಶನ್ ಪ್ರಕ್ರಿಯೆಯು ಏಪ್ರಿಲ್ 19 ರಿಂದ ಆರಂಭಗೊಂಡಿದೆ. APJEE ಪರೀಕ್ಷೆ 2022 ಗೆ ಹಾಜರಾಗಲು ಇಚ್ಛಿಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ — apdhte.nic.in ಮೂಲಕ ಜೂನ್ 15 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. 2022ನೇ ಸಾಲಿನ ಅರುಣಾಚಲ ಪ್ರದೇಶ ಜೆಇಇ ಪರೀಕ್ಷೆಗಳು ಜೂನ್​ 25ರಂದು ನಡೆಯಲಿದೆ. ಇಂಜಿನಿಯರಿಂಗ್​ ಪ್ರವೇಶ ಪರೀಕ್ಷೆಗಳು ಒಂದೇ ಪಾಳಿಯಲ್ಲಿ ನಡೆಯಲಿದೆ.


ಎಪಿಜೆಇಇ ಪರೀಕ್ಷೆಗಳ ಹಾಲ್​ ಟಿಕೆಟ್​ಗಳನ್ನು ಜೂನ್​ 18ರಂದು ರಿಲೀಸ್​ ಮಾಡಲಾಗುತ್ತದೆ. ಅರುಣಾಚಲ ಪ್ರದೇಶ ಜೆಇಇ ಪರೀಕ್ಷೆಗೆ ಯಶಸ್ವಿಯಾಗಿ ನೋಂದಾಯಿಸಿಕೊಳ್ಳುವ ಅಭ್ಯರ್ಥಿಗಳು ಎಪಿಎಸ್​ಸಿಟಿಇ ಅಧಿಕೃತ ವೆಬ್​ಸೈಟ್​ನಲ್ಲಿ ಹಾಲ್​ ಟಿಕೆಟ್​ಗಳನ್ನು ಪಡೆಯಲು ಸಾಧ್ಯವಾಗುತ್ತದೆ.


ಎಪಿಜೆಇಇ 2022 : ಇಲ್ಲಿದೆ ನೋಡಿ ಅರ್ಜಿ ಸಲ್ಲಿಸುವ ಮಾರ್ಗ

  1. apdhte.nic.in. ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ.
  2. ಹೋಮ್​ಪೇಜ್​​ನಲ್ಲಿ ರಿಜಿಸ್ಟ್ರೇಷನ್​​​ ಲಿಂಕ್​ನ ಮೇಲೆ ಕ್ಲಿಕ್​ ಮಾಡಿ.
  3. ಇಲ್ಲಿ ನಿಮ್ಮ ಯೂಸರ್​ ಐಡಿ ಹಾಗೂ ಪಾಸ್​ವರ್ಡ್​ಗಳನ್ನು ನಮೂದಿಸಿ.
  4. ಇಲ್ಲಿ ಕೇಳಲಾಗುವ ಎಲ್ಲಾ ದಾಖಲೆಗಳು ಹಾಗೂ ವಿವರಗಳನ್ನು ಸಲ್ಲಿಸಿ.
    5 .ಆನ್​​ಲೈನ್​ನಲ್ಲಿಯೇ ಪರೀಕ್ಷಾ ಶುಲ್ಕವನ್ನು ಪಾವತಿಸಿ ಅರ್ಜಿಯನ್ನು ಸಲ್ಲಿಸಿ.
  5. ಮುಂದಿನ ಬಳಿಕೆಗಾಗಿ ಈ ಅರ್ಜಿಯ ಪ್ರಿಂಟ್​ ತೆಗೆದಿಟ್ಟುಕೊಳ್ಳಿ.
    ಉನ್ನತ ಮತ್ತು ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ, ಅರುಣಾಚಲ ಪ್ರದೇಶವು APJEE ಪ್ರವೇಶ ಪರೀಕ್ಷೆಯನ್ನು ನಿರ್ವಹಿಸುತ್ತದೆ. ರಾಜ್ಯದ ಪಾಲಿಟೆಕ್ನಿಕ್‌ಗಳು ನೀಡುವ ವಿವಿಧ ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳನ್ನು ದಾಖಲಿಸಲು APJEE ಪ್ರವೇಶ ಪರೀಕ್ಷೆಯನ್ನು ನಡೆಸಲಾಗುತ್ತದೆ.

KCET 2022 Registration : ಇಂಜಿನಿಯರಿಂಗ್​ ವ್ಯಾಸಂಗ ಮಾಡಬಯಸುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ’

KCET 2022 Registration : ಕರ್ನಾಟಕ ಪರೀಕ್ಷಾ ಪ್ರಾಧಿಕಾರ, KEA ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) 2022 ಗಾಗಿ ಆನ್‌ಲೈನ್ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಕರ್ನಾಟಕದ ಎಂಜಿನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆಯಲು ಬಯಸುವ ಆಕಾಂಕ್ಷಿಗಳು ಅಧಿಕೃತ ವೆಬ್‌ಸೈಟ್, kea ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಬಹುದು. kar.nic.in ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯು ಜೂನ್ 16 ರಿಂದ 18, 2022 ರವರೆಗೆ ನಡೆಯಲಿದೆ. ಪರೀಕ್ಷೆಯನ್ನು ಎರಡು ಪಾಳಿಗಳಲ್ಲಿ ನಡೆಸಲಾಗುತ್ತದೆ. ಅಭ್ಯರ್ಥಿಗಳು ತಮ್ಮ KCET 2022 ಹಾಲ್ ಟಿಕೆಟ್‌ಗಳನ್ನು ಮೇ 30, 2022 ರಿಂದ ಡೌನ್‌ಲೋಡ್ ಮಾಡಬಹುದು.

ಕೆಸಿಇಟಿ 2022ಗೆ ಅರ್ಜಿ ಸಲ್ಲಿಸುವ ಬಗ್ಗೆ ಇಲ್ಲಿದೆ ಮಾಹಿತಿ :

ಕೆಸಿಇಟಿಯ ಅಧಿಕೃತ ವೆಬ್​ಸೈಟ್​ kea.kar.nic.in.ಗೆ ಭೇಟಿ ಕೊಡಿ
ಹೋಮ್​ ಪೇಜ್​​ನಲ್ಲಿ KCET 2022 Registration ಲಿಂಕ್​ ಮೇಲೆ ಕ್ಲಿಕ್​ ಮಾಡಿ.
ಇಲ್ಲಿ ಕೇಳಲಾಗುವ ಎಲ್ಲಾ ದಾಖಲೆಗಳನ್ನು ನೀಡಿ ರಿಜಿಸ್ಟರ್​ ಮಾಡಿಕೊಳ್ಳಿ. ಇಮೇಲ್​ ಐಡಿ, ಫೋನ್​ ನಂಬರ್​ ಸೇರಿದಂತೆ ಎಲ್ಲಾ ವಿವರಗಳನ್ನು ಒದಿಗಿಸಿ.
ಅರ್ಜಿಯನ್ನು ತುಂಬಲು ಮತ್ತೊಮ್ಮೆ ಲಾಗಿನ್​ ಆಗಿರಿ.
ಈಗ ಕೇಳಲಾಗುವ ಎಲ್ಲಾ ದಾಖಲೆಗಳನ್ನು ಸಲ್ಲಿಸಿ ಅರ್ಜಿಯನ್ನು ತುಂಬಿರಿ.
ಪರೀಕ್ಷಾ ಶುಲ್ಕವನ್ನು ಪಾವತಿಸಿ.
ಮುಂದಿನ ಬಳಕೆಗಾಗಿ ಅರ್ಜಿ ಸಲ್ಲಿಸಿದ ಬಳಿಕ ಪ್ರಿಂಟ್​ ತೆಗೆದಿಟ್ಟುಕೊಳ್ಳಿ.

ಇದನ್ನು ಓದಿ : PUC Exams 2022 : ಏಪ್ರಿಲ್ 22 ರಿಂದ ದ್ವಿತೀಯ ಪಿಯು ಪರೀಕ್ಷೆ : ಹಿಜಾಬ್‌ಗೆ ಇಲ್ಲ ಅವಕಾಶ : ಸಚಿವ ಬಿ.ಸಿ.ನಾಗೇಶ್‌

ಇದನ್ನೂ ಓದಿ : UPSC, ESIC, BOB, SBI JOBS : ಸರಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲಿಗೆ ಸುವರ್ಣಾವಕಾಶ

Arunachal Pradesh APJEE 2022 Registration To Begin Today; Check Exam Date, Paper Pattern

Comments are closed.