ಭಾನುವಾರ, ಏಪ್ರಿಲ್ 27, 2025
HomeeducationKarnataka colleges start : ನಾಳೆಯಿಂದ ಬಾಗಿಲು ತೆರೆಯಲಿದೆ ಕಾಲೇಜು : ಮಹತ್ವದ ಮಾಹಿತಿ ನೀಡಿದ...

Karnataka colleges start : ನಾಳೆಯಿಂದ ಬಾಗಿಲು ತೆರೆಯಲಿದೆ ಕಾಲೇಜು : ಮಹತ್ವದ ಮಾಹಿತಿ ನೀಡಿದ ಸಚಿವ ಬಿ.ಸಿ.ನಾಗೇಶ್

- Advertisement -

ಬೆಂಗಳೂರು : ಸದ್ಯಕ್ಕೆ ರಾಜ್ಯದಲ್ಲಿ ಹಿಜಾಬ್ ವಿವಾದ ಮುಗಿಯುವ ಲಕ್ಷಣವಿಲ್ಲ. ಹೀಗಾಗಿ ನ್ಯಾಯಾಲಯದ ತೀರ್ಪು ಬರುವರೆಗೂ ಶಾಲಾ ಕಾಲೇಜುಗಳಲ್ಲಿ ಧಾರ್ಮಿಕ ರೀತಿ ರಿವಾಜುಗಳನ್ನು ಅನುಸರಿಸುವಂತಿಲ್ಲ ಎಂದು ಹೈಕೋರ್ಟ್ ಹೇಳಿದೆ. ಇದರ ಬೆನ್ನಲ್ಲೇ ಈಗ ಬಾಗಿಲು ಮುಚ್ಚಿದ ಶಾಲಾ ಕಾಲೇಜುಗಳು ಬಾಗಿಲು ತೆರೆಯುವ ಸಿದ್ಧತೆ ನಡೆದಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾಹಿತಿ ನೀಡಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಬಿಗಿ ಬಂದೋಬಸ್ತ್ ನಲ್ಲಿ ನಾಳೆ ಪಿಯುಸಿ ಹಾಗೂ ಕಾಲೇಜುಗಳ (Karnataka colleges start) ಆರಂಭ ಆಗುತ್ತೆ. ನಿನ್ನೆ 9 10 ತರಗತಿಗಳು ಸುಗಮವಾಗಿ ನಡೆದಿದೆ. ಹೀಗಾಗಿ ನಾಳೆಯೂ ಸುಗಮವಾಗಿ ನಡೆಯಲಿದೆ ಎನ್ನೋ ನೀರಿಕ್ಷೆ ಇದೆ ಎಂದಿದ್ದಾರೆ.

ಕೆಲವೊಂದು ಜಿಲ್ಲೆಗಳಲ್ಲಿ ಹಿಜಾಬ್ ಘಟನೆ ನಡೆದಿದೆ. ವಿದ್ಯಾರ್ಥಿಗಳು ಯಾವುದೋ ಪ್ರೇರಣೆಯಿಂದ ಹಿಜಾಬ್ ಗಾಗಿ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಅಲ್ಲಿ ಡಿಡಿಪಿಐ ಬಗೆಹರಿಸುವ ಕೆಲಸ ಮಾಡಿದ್ದಾರೆ. ಇನ್ನೂ ಮಕ್ಕಳಿಗೆ ತಿಳಿ ಹೇಳುವ ಕೆಲಸ ಮಾಡುತ್ತಿದ್ದೇವೆ ಶಿಕ್ಷಣ ಇಲಾಖೆಯಿಂದ ಹೀಗಾಗಿ ಮುಂದಿನ ದಿನಗಳಲ್ಲಿ ಯಾವುದೇ ರೀತಿ ತೊಂದರೆ ಆಗಲ್ಲ ಎಂಬ ವಿಶ್ವಾಸ ನಂಗಿದೆ ಎಂದಿದ್ದಾರೆ. ಅಲ್ಲದೇ ರಾಜ್ಯದಲ್ಲಿ ತಾರಕಕ್ಕೇರಿರುವ ಹಿಜಾಬ್ ಸಂಘರ್ಷ ಮಕ್ಕಳ ಮಿತಿಯಲ್ಲಿ ನಡೆದಿಲ್ಲ. ಇದರ ಹಿಂದೆ ದೊಡ್ಡ ಶಕ್ತಿಗಳ ಕೈವಾಡವಿದೆ.ಅದನ್ನು ಆಧರಿಸಿ ತನಿಖೆ ಮಾಡಲಾಗುತ್ತಿದೆ.

ಗೃಹ ಇಲಾಖೆ ಸಮರ್ಥವಾಗಿ ತನಿಖೆ ನಡೆಸಲು ತಂಡ ರಚಿಸಿದೆ. ಸದ್ಯದಲ್ಲೇ ಇದರ ಹಿಂದಿನ ಶಕ್ತಿಗಳನ್ನು ಪತ್ತೆ ಹಚ್ಚಲಾಗುತ್ತಿದೆ. ತಮ್ಮ ಹಿತಾಸಕ್ತಿಗಳನ್ನು ಪೊರೈಸಿಕೊಳ್ಳಲು ಮಕ್ಕಳಿಗೆ ಮಿಸ್ ಗೈಡ್ ಮಾಡಲಾಗುತ್ತಿದೆ. ಶೈಕ್ಷಣಿಕ ಚಟುವಟಿಕೆಗಳನ್ನು ಹಾಳುಗೆಡವಲಾಗುತ್ತಿದೆ ಎಂದು ಬಿ.ಸಿ.ನಾಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೂ ಪ್ರಕರಣ ಹೈಕೋರ್ಟ್‌ನ ವಿಚಾರಣೆ ಯ ಹಂತದಲ್ಲಿದೆ. ಹೀಗಾಗಿ ಈ ಬಗ್ಗೆ ಹೈಕೋರ್ಟ್ ಆದೇಶ ಬರುವವರೆಗೂ ಕೂಡಾ ನಾವು ಏನು ಹೇಳಲು ಸಾಧ್ಯವಿಲ್ಲ. ಆದ್ರೆ ದೊಡ್ಡ ಮಟ್ಟದಲ್ಲಿ ಇದ್ರ ಹಿಂದೆ ಕೈವಾಡ ಇದೆ ಅನ್ನೋದು ನಮ್ಮ ಗಮನಕ್ಕೆ ಬಂದಿರೋ ಹಲವು ಅಂಶಗಳಿಂದ ನಮಗೆ ಸ್ಪಷ್ಟವಾಗಿದೆ.

ಆದರೆ ಈ ಹಿತಾಸಕ್ತಿಗಳು ವಿದ್ಯಾರ್ಥಿಗಳ ಮನಸ್ಸನ್ನು ಹಾಳು ಮಾಡಲು ಹಾಗೂ ಶೈಕ್ಷಣಿಕ ಚಟುವಟಿಕೆ, ಪರೀಕ್ಷೆಗಳನ್ನು ಹಾಳು ಮಾಡಲು ನಾವು ಬಿಡೋದಿಲ್ಲ. ಹೀಗಾಗಿ ಹೈಕೋರ್ಟ್ ಸೂಚನೆಯಂತೆ ನಾಳೆಯಿಂದ ಶಾಲೆ ಆರಂಭಿಸುತ್ತಿದ್ದೇವೆ. ಶಾಂತಿ ಕಾಪಾಡಲು ಹಾಗೂ ಯಾವುದೇ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕಾಯ್ದುಕೊಳ್ಳಲು ಸ್ಥಳೀಯ ಪೊಲೀಸರು,ಶಿಕ್ಷಕರು ಹಾಗೂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಬಿ.ಸಿ.ನಾಗೇಶ್ ಮಾಹಿತಿ ನೀಡಿದ್ದಾರೆ.

ಇದನ್ನೂ ಒದಿ : ಕಾಶ್ಮೀರಿ ಪಂಡಿತ ಯುವಕನ ಜೀವನಗಾಥೆ: ‘ 32 ವರ್ಷಗಳ ನಂತರ ತಾಯ್ನಾಡಿಗೆ ಬಂದ ನನಗೆ ಹುಟ್ಟೂರು ಭರವಸೆ ನೀಡಿತು’

ಇದನ್ನೂ ಓದಿ : Married 14 women : ಮಹಿಳೆಯರನ್ನು ವಂಚಿಸಿ 14 ಮದುವೆಯಾದಾತನ ಬಂಧನ

(colleges start Tomorrow in Karnataka says Education Minister B.C.Nagesh)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular