China: ಚೀನಾ ಹೆದರುವುದು ಈ ಎರಡು ವಿಷಯಕ್ಕೆ ಮಾತ್ರ!

ಚೀನಾ ಹೆದರುವುದು ಕೇವಲ ಎರಡು ವಿಷಯಕ್ಕೆ ಮಾತ್ರ ! ಒಂದು ಓಪಿಯಂ, ಎರಡು ರಿಲಿಜನ್ !! ನಮಗೆಲ್ಲಾ ಗೊತ್ತಿರುವಂತೆ ಎರಡು ಮಹಾಯುದ್ಧಗಳು ನಡೆದಿವೆ. ಆದರೆ ಜಗತ್ತಿನ ಇತಿಹಾಸದಲ್ಲಿ ಅತಿ ಹೆಚ್ಚು ಸಾವು ನೋವು ಸಂಭವಿಸಿದ್ದು ಈ ಎರಡೂ ಯುದ್ಧದಲ್ಲಿ ಅಲ್ಲ. ೧೮೪೦ ರಲ್ಲಿ ನಡೆದ ಓಪಿಯಂ ಯುದ್ಧದಲ್ಲಿ ಅಷ್ಟು ದೊಡ್ಡ ಸಂಖ್ಯೆಯ ಸಾವುಗಳು ಸಂಭವಿಸುತ್ತವೆ. ಈ ಯುದ್ಧ ನಡೆದದ್ದು ಚೀನಾ ಮತ್ತು ಬ್ರಿಟನ್ ನಡುವೆ. ಇತರ ಪಾಶ್ಚ್ಯಾತ್ಯ ದೇಶಗಳು ಕೂಡ ಚೀನಾದ ವಿರುದ್ಧ ಇದ್ದವು. ಓಪಿಯಂ ಯುದ್ಧದಲ್ಲಿ ಚೀನಾ (China) ಹೀನಾಯವಾಗಿ ಸೋಲುತ್ತದೆ. ಚೀನಾದ qing ಮನೆತನ ಮಣ್ಣಾಗಲು ಕೂಡ ಈ ಯುದ್ಧಗಳು ಕಾರಣವಾಗುತ್ತವೆ. ದೇಶ ವಿದೇಶ ಮತ್ತು ವಾಣಿಜ್ಯದ ಬಗ್ಗೆ ತಮ್ಮದೇ ಆದ ಅನನ್ಯ ಅಭಿಪ್ರಾಯಗಳನ್ನು ನಮೂದಿಸುವ ರಂಗಸ್ವಾಮಿ ಮೂಕನಹಳ್ಳಿ ಅವರು ತಮ್ಮ ಫೇಸ್‌ಬುಕ್ ಖಾತಯಲ್ಲಿ ಹಂಚಿಕೊಡಿರುವ ಈ ಬರಹವನ್ನು ಕೃತಜ್ಷತಾಪೂರ್ವಕವಾಗಿ ಇಲ್ಲಿ ಪ್ರಕಟಿಸಲಾಗಿದೆ.

ಆ ನಂತರ ಕೂಡ ಚೀನಾ ವೆಸ್ಟ್ರೇನ್ ದೇಶಗಳು ಮಾಡಿಕೊಳ್ಳುವ ಒಮ್ಮುಖ ಒಡಂಬಡಿಕೆಯನ್ನ ಒಪ್ಪ ಬೇಕಾಗುತ್ತದೆ. ಪಕ್ಕದ ಪುಟಾಣಿ ಜಪಾನ್ ೧೯೩೧ ರಿಂದ ಚೀನಾ ದೇಶದ ಸರಹದ್ದಿನಲ್ಲಿ ತಗಾದೆ ತೆಗೆಯಲು ಶುರು ಮಾಡಿರುತ್ತದೆ. ೧೯೩೭ ರಿಂದ ೧೯೪೫ ರ ವರೆಗೆ ಚೀನಾ ದೇಶವನ್ನ ತನ್ನ ಅಂಕೆಯಲ್ಲಿ ಇಟ್ಟು ಕೊಂಡಿರುತ್ತದೆ. ಜಗತ್ತಿನ ಬೇರೆ ದೇಶಗಳು ಇತಿಹಾಸದಿಂದ ಕಲಿತ ನಿದರ್ಶನಗಳು ಕಡಿಮೆ. ಆದರೆ ಚೀನಾ (China) ಮಾತ್ರ ತನಗಾದ ಅವಮಾನವನ್ನ ಮರೆಯಲಿಲ್ಲ . ೧೯೪೯ ರಿಂದ ಮಾವೋ ಚೀನಾ ದೇಶವನ್ನ ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಾನೆ. ಆದರೆ ಮಾವೋ ಕಮ್ಯುನಿಸಂ ಪ್ರಚಾರ ಮಾಡುವುದರಲ್ಲಿ ಹೆಚ್ಚು ಸಮಯವನ್ನ ವ್ಯಯಿಸುತ್ತಾನೆ. ತನ್ನದೇ ಮಾವೋ ಸಿದ್ಧಾಂತವನ್ನ ಸೃಷ್ಟಿಸುತ್ತಾನೆ. ಮಾವೋ ಸಿದ್ಧಾಂತವನ್ನ ನಂಬಿಕೊಂಡಿದರೆ ಚೀನಾ ಇಂದು ಈ ಮಟ್ಟಿಗೆ ಬೆಳೆದು ನಿಲ್ಲಲು ಸಾಧ್ಯವಿರಲಿಲ್ಲ.

Deng Xiaoping ಎನ್ನುವ ಕೆಳಗಿನ ಫೋಟೋದಲ್ಲಿರುವ ವ್ಯಕ್ತಿಯನ್ನ ಹೊಸ ಚೀನಾದ ಶಿಲ್ಪಿ ಎನ್ನಬಹದು. ಕಮ್ಯುನಿಸ್ಟ್ ಪಾರ್ಟಿಯಲ್ಲಿ ಹಣ ಕುರಿತು ಮತ್ತು ಬಂಡವಾಳಶಾಹಿಗಳ ಕುರಿತು ಬಹಳಷ್ಟು ರಿಸರ್ವೇಶನ್ ಗಳಿದ್ದವು. ೧೯೭೬ ರ ನಂತರ ಅಧಿಕಾರದ ಚುಕ್ಕಾಣಿ ಹಿಡಿದ ಡೆಂಗ್ ನಿಧಾನವಾಗಿ ಚೀನಾ ಚಿಂತಿಸುವ ರೀತಿಯನ್ನ ಬದಲಾಯಿಸಿ ಬಿಡುತ್ತಾರೆ .
ಇವತ್ತಿಗೆ ಚೀನಾ ಶಿಕ್ಷಣ ನಿಂತಿರುವುದು ವೆಸ್ಟ್ರೇನ್ ಹೇಟರ್ಡ್ ನೆಸ್ ಮತ್ತು ಪೇಟ್ರಿಯಾಟಿಸಂ ಮೇಲೆ. ಓಪಿಯಂ ಯುದ್ಧದಲ್ಲಿ ತನ್ನ ಸೈನಿಕರು ಸತ್ತ ಜಾಗವನ್ನ ಇಂದು ಗ್ರೌಂಡ್ ಜೀರೋ ಎಂದು ತನ್ನ ಪ್ರತಿಯೊಬ್ಬ ಮಗುವಿಗೂ ತೋರಿಸುತ್ತದೆ. ನಾವು ಪ್ರಬಲರಾಗಿದಿದ್ದರೆ ವೆಸ್ಟ್ರೇನ್ ವರ್ಲ್ಡ್ ನಮ್ಮನ್ನ ಮತ್ತೆ ತುಳಿಯುತ್ತದೆ, ನಮ್ಮನ್ನ ಗುಲಾಮರಂತೆ ನಡೆಸಿಕೊಳ್ಳುತ್ತಾರೆ ಎಂದು ತನ್ನ ಪ್ರತಿಯೊಬ್ಬ ವಿದ್ಯಾರ್ಥಿಯ ಮನಸ್ಸಿನಲ್ಲಿ ಅದು ಒಂದು ರೀತಿಯ ಭಯವನ್ನ ತುಂಬಿದೆ. ಈ ಭಯವನ್ನ ಧೈರ್ಯವಾಗಿ ಮತ್ತು ಆತ್ಮವಿಶ್ವಾಸವನ್ನಾಗಿ ಮಾರ್ಪಡಿಸಲು ದೇಶೀಯತೆ , ಪ್ಯಾಟ್ರಿಯಾಟಿಸಂ ತುಂಬಿದೆ. ನಾವು ನಮ್ಮದು ಎನ್ನುವುದರಲ್ಲಿ ಇಡುವ ನಂಬಿಕೆ ಮತ್ತು ಹೆಚ್ಚು ಶಕ್ತಿಶಾಲಿಯಾದರೆ ಮಾತ್ರ ನಮಗೆ ಉಳಿಗಾಲ ಎನ್ನುವುದನ್ನ ಪುಟ್ಟ ಮಕ್ಕಳಿಂದ ಶಿಕ್ಷಣದ ಮೂಲಕ ಅವರ ತಲೆಗೆ ತುಂಬಲಾಗಿದೆ. ಇಂದು ಚೀನಾದಲ್ಲಿ ಈ ನಂಬಿಕೆಯ ವಿರುದ್ಧ ಸೊಲ್ಲೆತ್ತುವ ಶಕ್ತಿ ಯಾರಿಗಿದೆ ? ಚೀನಾ ಹೆದರುವುದು ಕೇವಲ ಎರಡು ವಿಷಯಕ್ಕೆ ಮಾತ್ರ ಮೊದಲೆನೆಯದಾಗಿ ಡ್ರಗ್ಸ್ ಅಥವಾ ಓಪಿಯಂ . ಇಂದಿಗೂ ಚೀನಾದಲ್ಲಿ ಡ್ರಗ್ಸ್ ಸ್ಮಗ್ಲ್ ಮಾಡುತ್ತಾ ಸಿಕ್ಕಿ ಬಿದ್ದರೆ ಡೆತ್ ಪೆನಾಲ್ಟಿಯಿದೆ. ಎರಡನೆಯದು ರಿಲಿಜನ್ . ಹೀಗಾಗಿ ಸರಕಾರ ಹೇಳುವುದೇ ಅಲ್ಲಿ ಧರ್ಮ . ಸರಕಾರದ ವಿರುದ್ದದ ಯಾವುದೇ ರೀತಿಯ ನಡವಳಿಕೆ ಅಧರ್ಮ.

.ನಾವು ಚೀನಾ ದೇಶವನ್ನ ಅದರ ಬಹಳಷ್ಟು ನಡವಳಿಕೆಗೆ ವಿರೋಧಿಸಬಹದು. ಆದರೆ ಜಗತ್ತಿನ ಇತರ ದೇಶಗಳಿಂದ ಬಹಳಷ್ಟು ಅವಮಾನ ಅನುಭವಿಸಿದ ಚೀನಾ ಕೆಚ್ಚಿನಿಂದ ಅದೇ ಜಗತ್ತನ್ನ ತನ್ನಡಿಯಲ್ಲಿ ಬರುವಂತೆ ಮಾಡಿಕೊಳ್ಳುವುದಿದೆಯಲ್ಲ ಅದರ ರೋಚಕ ಇತಿಹಾಸವನ್ನ ಓದುತ್ತಾ ನಾನು ಕಳೆದು ಹೋಗುತ್ತಿದ್ದೇನೆ. ಹೀಗೆ ನನ್ನ ತಿಳುವಳಿಕೆಗೆ ಬಂದದ್ದ ಒಂದಷ್ಟು ನಿಮಗೂ ಆಗಾಗ ವರ್ಗಾಯಿಸುವೆ.

ನಾವು ಚೀನಾ ಆಗಬೇಕಿಲ್ಲ , ನಮಗೆ ನಮ್ಮದೇ ಆದ ಚರಿತ್ರೆಯಿದೆ , ಸಂಸ್ಕಾರವಿದೆ. ಆದರೆ ಸಮಾಜದಲ್ಲಿ ಇಂದು ಇರುವ ಅತಿ ಸ್ವತಂತ್ರ್ಯಕ್ಕೆ ಕಡಿವಾಣ ಹಾಕದಿದ್ದರೆ ಮುಂದೆ ಇನ್ನು ದೊಡ್ಡ ಅವಘಡಕ್ಕೆ ದಾರಿ ಮಾಡಿಕೊಡಲಿದೆ.

ಇದನ್ನೂ ಓದಿ: Term Life Insurance Plans: ಟರ್ಮ್ ಇನ್ಶೂರೆನ್ಸ್ ಯೋಜನೆ ಪ್ರಾರಂಭಿಸಲು ನೀವು ತಿಳಿದಿರಬೇಕಾದ ಅತ್ಯಗತ್ಯ ಮಾಹಿತಿಗಳು: ಭಾಗ 1

ಇದನ್ನೂ ಓದಿ: Term Life Insurance Plans: ಟರ್ಮ್ ಇನ್ಶೂರೆನ್ಸ್ ಯೋಜನೆ ಪ್ರಾರಂಭಿಸಲು ನೀವು ತಿಳಿದಿರಬೇಕಾದ ಅತ್ಯಗತ್ಯ ಮಾಹಿತಿಗಳು: ಭಾಗ 2

ಇದನ್ನೂ ಓದಿ: Term Life Insurance Plans: ಟರ್ಮ್ ಇನ್ಶೂರೆನ್ಸ್ ಯೋಜನೆ ಪ್ರಾರಂಭಿಸಲು ನೀವು ತಿಳಿದಿರಬೇಕಾದ ಅತ್ಯಗತ್ಯ ಮಾಹಿತಿಗಳು: ಭಾಗ 3

(China is afraid of these two things only)

Comments are closed.