karnataka first puc 2022 result : ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ : ರಿಸಲ್ಟ್​ ವೀಕ್ಷಣೆಗೆ ಇಲ್ಲಿದೆ ಮಾರ್ಗ

karnataka first puc 2022 result : ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ಪ್ರಥಮ ಪಿಯುಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಪ್ರಥಮ ಪಿಯುಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಅಧಿಕೃತ ವೆಬ್​ಸೈಟ್​ result.dkpucpa.com ನಲ್ಲಿ ಲಾಗಿನ್​ ಆಗುವ ಮೂಲಕ ತಮ್ಮ ಫಲಿತಾಂಶಗಳನ್ನು ವೀಕ್ಷಿಸಬಹುದಾಗಿದೆ. ನಿಮ್ಮ ಜನ್ಮ ದಿನಾಂಕ ಹಾಗೂ ನೋಂದಣಿ ಸಂಖ್ಯೆಯನ್ನು ನಮೂದಿಸುವ ಮೂಲಕ ಫಲಿತಾಂಶಗಳನ್ನು ವೀಕ್ಷಿಸಬಹುದು.


ಪ್ರಥಮ ಪಿಯುಸಿ ಫಲಿತಾಂಶಗಳನ್ನು ವೀಕ್ಷಿಸಲು ಇಲ್ಲಿದೆ ಮಾರ್ಗ :

ಶಿಕ್ಷಣ ಇಲಾಖೆಯ ಅಧಿಕೃತ ವೆಬ್​ಸೈಟ್​ result.dkpucpa.com ಗೆ ಭೇಟಿ ನೀಡಿ .
ವೆಬ್​ಸೈಟ್​ನಲ್ಲಿ ನಿಮ್ಮ ನೋಂದಣಿ ಸಂಖ್ಯೆ ಹಾಗೂ ಜನ್ಮ ದಿನಾಂಕವನ್ನು ಅಲ್ಲಿ ಕೇಳಲಾಗುವ ಕಡೆಯಲ್ಲಿ ನಮೂದಿಸಿ ಗೋ ಎಂಬ ಆಯ್ಕೆಯನ್ನು ಕ್ಲಿಕ್​ ಮಾಡಿ.
ಈಗ ನಿಮ್ಮ ಫಲಿತಾಂಶ ಪರದೆಯ ಮೇಲೆ ಕಾಣಿಸಲಿದೆ. ಭವಿಷ್ಯದ ಬಳಕೆಗಾಗಿ ನೀವು ಫಲಿತಾಂಶದ ಪ್ರಿಂಟ್​ ತೆಗೆದುಕೊಳ್ಳಬಹುದಾಗಿದೆ.


ರಾಜ್ಯದಲ್ಲಿ ಪ್ರಸ್ತುತ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯುತ್ತಿದ್ದು ಸುಮಾರು ಆರು ಲಕ್ಷಕ್ಕಿಂತ ಅಧಿಕ ವಿದ್ಯಾರ್ಥಿಗಳು 1076 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ

Karnataka 2nd PUC Result 2022 : ಜೂನ್‌ನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ : 11,379 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು

ಬೆಂಗಳೂರು : ಹಿಜಾಬ್‌ ವಿವಾದದ ನಡುವಲ್ಲೇ ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದೆ. ಒಂದೊಂದೆ ಪರೀಕ್ಷೆ ಮುಗಿಯುತ್ತಿದ್ದಂತೆಯೇ ಮೌಲ್ಯ ಮಾಪನವನ್ನು ನಡೆಸಲಾಗುತ್ತಿದೆ. ಈ ಬಾರಿ ಅತೀ ಕಡಿಮೆ ಅವಧಿಯಲ್ಲಿ ಮೌಲ್ಯ ಮಾಪನ ಕಾರ್ಯವನ್ನು ಮುಗಿಸಿ ಜೂನ್‌ ತಿಂಗಳಲ್ಲಿ ದ್ವಿತೀಯ ಪಿಯುಸಿ ಫಲಿತಾಂಶವನ್ನು (Karnataka 2nd PUC Result 2022) ಪ್ರಕಟಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಸಿದ್ದತೆ ಮಾಡಿಕೊಳ್ಳುತ್ತಿದೆ.

ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ತಡವಾಗಿ ಆರಂಭಗೊಂಡಿದೆ. ಕಳೆದ ಎರಡು ವರ್ಷಗಳ ಕಾಲ ಪರೀಕ್ಷೆ ಕೊರೊನಾ ಸೋಂಕಿಗೆ ಬಲಿಯಾಗಿತ್ತು. ಆದ್ರೆ ಈ ಬಾರಿ ಪರೀಕ್ಷೆ ವಿಳಂಭವಾದ್ರೂ ಕೂಡ ಮೌಲ್ಯ ಮಾಪನ ಕಾರ್ಯವನ್ನು ವೇಗವಾಗಿ ಮುಗಿಸಲು ಇಲಾಖೆ ಸಜ್ಜಾಗಿದೆ. ಮೇ 20 ರಿಂದ ಜೂನ್‌ 15 ರ ಒಳಗೆ ಸಂಪೂರ್ಣ ಮೌಲ್ಯ ಮಾಪನ ಕಾರ್ಯವನ್ನು ಮುಗಿಸುವ ಫ್ಲ್ಯಾನ್‌ ಹಾಕಿಕೊಳ್ಳಲಾಗಿದೆ.

ಬೇಸಿಗೆ ರಜೆಯ ಅವಧಿಯಲ್ಲಿಯೂ ಉಪನ್ಯಾಸಕರನ್ನು ಮೌಲ್ಯ ಮಾಪನ ಕಾರ್ಯಕ್ಕೆ ಬಳಿಸಿಕೊಳ್ಳಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಅಲ್ಲದೇ ಈ ಬಾರಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಉಪನ್ಯಾಸಕರನ್ನು ಮೌಲ್ಯ ಮಾಪನ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ. ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭಗೊಂಡಿದ್ದು, ಬರೋಬ್ಬರಿ ಹನ್ನೊಂದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಗೈರು ಹಾಜರಾಗಿದ್ದಾರೆ.

ಇದನ್ನು ಓದಿ : acid attack : ಆಸಿಡ್‌ ಪ್ರೇಮಿ ನಾಗೇಶ್‌ ಬಂಧನಕ್ಕೆ ಮೂರು ತಂಡ : #hangnagesh ಅಭಿಯಾನಕ್ಕೆ ಬಾರೀ ಬೆಂಬಲ

ಇದನ್ನೂ ಓದಿ : ice cream box : ಕಣ್ಣಾ ಮುಚ್ಚಾಲೆ ಆಡುತ್ತಾ ಐಸ್​ಕ್ರೀಂ ಬಾಕ್ಸಿನಲ್ಲಿ ಅವಿತುಕೊಳ್ಳಲು ಹೋದ ಬಾಲಕಿಯರು ಸಾವು

karnataka first puc 2022 result released on karresult nic in

Comments are closed.