ಬಡ್ತಿ ಪಡೆಯಲು ಪರೀಕ್ಷೆ ಕಡ್ಡಾಯ : ಬಡ್ತಿ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಬಿಗ್‌ ಶಾಕ್‌

ಬೆಂಗಳೂರು : ರಾಜ್ಯ ಸರಕಾರದ ಅಧೀನ ಇಲಾಖೆಯಲ್ಲಿ ಇರುವಂತೆಯೇ ಶಾಲಾ ಶಿಕ್ಷಕರಿಗೂ ಬಡ್ತಿ ನೀಡಯವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಶಿಕ್ಷಕರಿಗೆ ಶಾಕ್‌ ಕೊಟ್ಟಿದೆ. ಬಡ್ತಿ ಪಡೆಯಬೇಕಾದ್ರೆ ಕಡ್ಡಾಯವಾಗಿ ಶಿಕ್ಷಕರು ಪರೀಕ್ಷೆಯನ್ನು ಎದುರಿಸಬೇಕು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿನ ಪ್ರಾಥಮಿಕ ಶಾಲಾ ಶಿಕ್ಷಕರು 1 ರಿಂದ 8ನೇ ತರಗತಿವರೆಗೆ ಪಾಠ ಮಾಡಲು ಅವಕಾಶ ಕೇಳುತ್ತಿದ್ದಾರೆ. ನೂತನ ಸಿ ಆಂಡ್‌ ಆರ್‌ ನಿಯಮದ ಪ್ರಕಾರ ಶಿಕ್ಷಕರು ಬಡ್ತಿ ಹೊಂದ ಬೇಕಾದ್ರೆ ಪರೀಕ್ಷೆಯನ್ನು ಎದುರಿಸುವುದು ಕಡ್ಡಾಯವಾಗಿದೆ. ಹೀಗಾಗಿ ಶಿಕ್ಷಕರು ಪರೀಕ್ಷೆಯ ವಿಷಯದಲ್ಲಿ ಸಹಕಾರವನ್ನು ನೀಡಬೇಕು ಎಂದಿದ್ದಾರೆ.

ಬಡ್ತಿ ನೀಡುವ ಸಲುವಾಗಿ ಪರೀಕ್ಷೆಯನ್ನು ನಡೆಸುವ ಕುರಿತು ಈಗಾಗಲೇ ಶಿಕ್ಷಕರ ಸಂಘದ ಜೊತೆಗೆ ಹಲವು ಬಾರಿ ಮಾತುಕತೆಯನ್ನು ನಡೆಸಲಾಗಿದೆ. ಶಿಕ್ಷಕರು ಪರೀಕ್ಷೆ ಬರೆಯದೆಯೇ ಬಡ್ತಿ ಪಡೆಯುವಂತೆ ಮಾಡುವುದು ತಪ್ಪಾಗುತ್ತದೆ. ಪಾಠ ಮಾಡಲು ಅವಕಾಶವನ್ನು ಕೇಳುತ್ತೀರಿ, ಆದರೆ ನೀವೇ ಪರೀಕ್ಷೆ ಬೇಡ ಅಂದ್ರೆ ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ. ಶಿಕ್ಷಕರು ಬಡ್ತಿಗಾಗಿ ಪರೀಕ್ಷೆ ಎದುರಿಸುವುದು ಕಡ್ಡಾಯ ಆದರೆ, ಪರೀಕ್ಷೆ ಹೇಗೆ ಮಾಡಬೇಕೆಂದು ಹೇಳಿದ್ರೆ, ಆ ರೀತಿಯಾಗಿ ಮಾಡೋಣ ಎಂದಿದ್ದಾರೆ.

ಇದನ್ನೂ ಓದಿ : ಶಾಲೆಗೆ ತೆರಳುವ ರಸ್ತೆ ದುರಸ್ಥಿ ಮಾಡಿದ ಪುಟಾಣಿಗಳು

ಇದನ್ನೂ ಓದಿ : 5 ಸಾವಿರ ಶಿಕ್ಷಕರ ನೇಮಕಾತಿ : ಶಿಕ್ಷಕರ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್‌ನ್ಯೂಸ್‌

( Big shock for teachers who are awaiting promotion in Karnataka )

Comments are closed.