School Reopen : ಕರ್ನಾಟದಲ್ಲಿ ಸೆಪ್ಟೆಂಬರ್ 13 ರಿಂದ 6 – 8 ನೇ ತರಗತಿ ಆರಂಭ : ತಜ್ಞರ ಸಮಿತಿ ಕೊಟ್ಟಿದೆ ಮಹತ್ವದ ಸಲಹೆ

ಬೆಂಗಳೂರು : ಕರ್ನಾಟಕದಲ್ಲಿ ಕೊರೊನಾ ವೈರಸ್‌ ಸೋಂಕಿನ ಪ್ರಮಾಣ ಇಳಿಕೆ ಕಾಣುತ್ತಿದೆ. ಈ ನಡುವಲ್ಲೇ 6 ರಿಂದ 8 ನೇ ತರಗತಿ ವರೆಗಿನ ಶಾಲಾರಂಭದ ಕುರಿತು ಚರ್ಚೆಗಳು ನಡೆಯುತ್ತಿದೆ. ಈ ನಡುವಲ್ಲೇ ಸಪ್ಟೆಂಬರ್‌ 13ರಿಂದ ಶಾಲೆಗಳು ಆರಂಭ ಮಾಡುವಂತೆ ತಜ್ಞರ ಸಮಿತಿ ಸಲಹೆ ನೀಡಿದೆ.

ಕೋವಿಡ್ -19 ತಾಂತ್ರಿಕ ಸಲಹಾ ಸಮಿತಿ (ಟಿಎಸಿ) 6 ರಿಂದ 8 ನೇ ತರಗತಿ ವಿದ್ಯಾರ್ಥಿಗಳಿಗೆ ದೈಹಿಕ ಅಥವಾ ಆಫ್‌ಲೈನ್ ತರಗತಿಗಳಿಗೆ ಶಾಲೆಗಳನ್ನು ಮತ್ತೆ ತೆರೆಯುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ. ಈ ಹಿಂದೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಪ್ರಾಥಮಿಕ ವಿಭಾಗಗಳಿಗೆ ದೈಹಿಕ ತರಗತಿಗಳನ್ನು ಪುನಃ ತೆರೆಯುವ ನಿರ್ಧಾರವನ್ನು ಆಗಸ್ಟ್ ಅಂತ್ಯದ ವೇಳೆಗೆ ತೆಗೆದುಕೊಳ್ಳಲಾಗುವುದು ಎಂದು ಘೋಷಿಸಿದರು. ತಜ್ಞರ ಸಮಿತಿ 1 ರಿಂದ 8ನೇ ತರಗತಿಯವರೆಗೆ ಆರಂಭಿಸುವ ಬದಲು ಮೊದಲ ಹಂತದಲ್ಲಿ 6 – 8 ನೇ ತರಗತಿ ಹಾಗೂ ನಂತರದಲ್ಲಿ 1 ರಿಂದ 5ನೇ ತರಗತಿ ವರೆಗೆ ಆರಂಭ ಮಾಡುವಂತೆ ಸಲಹೆ ನೀಡಿದೆ.

ಈಗಾಗಲೇ ಆಗಸ್ಟ್ 23 ರಿಂದ 9 ರಿಂದ 12 ರವರೆಗಿನ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳನ್ನು ಆರಂಭಿಸಲಾಗಿದೆ. ಕೊರೊನಾ ಮೂರನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಕೊರೊನಾ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಸೂಚಿಸಲಾಗಿದೆ. ಅಲ್ಲದೇ ಮಾರ್ಗಸೂಚಿಗಳ ಪ್ರಕಾರ ಶಾಲೆಗಳು ಒಂದು ಸಮಯದಲ್ಲಿ ಶೇಕಡಾ 50ರಷ್ಟು ವಿದ್ಯಾರ್ಥಿಗಳಿಗೆ ತರಗತಿಗೆ ಪಾಳಿ ಪದ್ದತಿಯಲ್ಲಿ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ.

9 ರಿಂದ 12 ನೇ ತರಗತಿಗಳಿಗೆ ನಡೆಯುತ್ತಿರುವ ಆಫ್‌ಲೈನ್ ಶಾಲೆಯ ಪರಿಣಾಮಗಳನ್ನು ಅಧ್ಯಯನ ಮಾಡಲು ಸಮಯಾವಕಾಶ ಒದಗಿಸುವುದರಿಂದ ಪ್ರಾಥಮಿಕ ವಿಭಾಗಗಳಿಗೆ ಶಾಲೆಯನ್ನು ಪುನಃ ತೆರೆಯುವ ಮೊದಲು ಮೂರು ವಾರಗಳ ಕಾಲ ಕಾಯಬೇಕು ಎಂದು ತಜ್ಞರ ಸಮಿತಿ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ.

ಕೊರೊನಾ ನಿಯಂತ್ರಣಕ್ಕಾಗಿ ಕೊರೊನಾ ಪರೀಕ್ಷೆಯನ್ನು ಹೆಚ್ಚಿಸುವಂತೆ ಸೂಚಿಸಲಾಗಿದೆ. ಅಲ್ಲದೇ ಶಾಲಾ ಆವರಣದಲ್ಲಿ ಸರಿಯಾಗಿ ನಡೆಸಬೇಕು ಎಂದು ತಜ್ಞರ ಸಮಿತಿ ಸಲಹೆ ನೀಡಿದೆ. ಶಾಲಾ ಆವರಣವನ್ನು ಸರಿಯಾಗಿ ಸ್ವಚ್ಛಗೊಳಿಸಬೇಕು ಮತ್ತು ಎಲ್ಲಾ ಕೋವಿಡ್ -19 ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಸಲಹೆ ನೀಡಿದೆ.

ಇದನ್ನೂ ಓದಿ : ಕೇರಳದಿಂದ ಬಂದಿದ್ದ 15 ವಿದ್ಯಾರ್ಥಿಗಳಿಗೆ ಕೊರೊನಾ : ಕೋಲಾರದ ನರ್ಸಿಂಗ್‌ ಕಾಲೇಜಿನಲ್ಲಿ ಕೊರೊನಾ ರಣಕೇಕೆ

ಇದನ್ನೂ ಓದಿ : GOOD NEWS : ಶೀಘ್ರದಲ್ಲಿಯೇ 17 ಸಾವಿರ ಅತಿಥಿ ಉಪನ್ಯಾಸಕರ ನೇಮಕ : ಸಚಿವ ಅಶ್ವಥ್ ನಾರಾಯಣ

Comments are closed.